ಮೈಸೂರು: ಪ್ರತಿಭಾನ್ವಿತ ಆಟಗಾರರಿಗೆ ಗುರುತಿಸಿ ಕೇಂದ್ರ ಸರ್ಕಾರ ಅರ್ಜುನ್ ಪ್ರಶಸ್ತಿಯನ್ನು ನೀಡುತ್ತದೆ ಅದೇ ರೀತಿ ರಾಜ್ಯ ಸರ್ಕಾರ ಕೂಡ ಏಕಲವ್ಯ ಪ್ರಶಸ್ತಿಯನ್ನು ನಿಲ್ಲಿಸಿರುವುದನ್ನು ಮುಂದುವರಿಸಲಿ ಎಂದು ಅರ್ಜುನ್ ಕ್ರೀಡಾ ಪ್ರಶಸ್ತಿ ಪುರಸ್ಕೃತರು ರಾಷ್ಟ್ರೀಯ ಖೋಖೋ ಆಟಗಾರರಾದ ಶೋಭಾ ನಾರಾಯಣ್ ತಿಳಿಸಿದರು.
ಇಂದು ಮೈಸೂರು ಜಿಲ್ಲಾ ಕ್ರೀಡಾ ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಶ್ವಕಪ್ ಖೋ ಖೋ ಸಾಧಕರಾದ ಮೈಸೂರು ಜಿಲ್ಲೆಯ ಕುರುಬೂರಿನ ಬಿ.ಚೈತ್ರಾ ಹಾಗೂ ಹಾಗೂ ಮಂಡ್ಯ ಜಿಲ್ಲೆಯ ಎಂ.ಕೆ.ಗೌತಮ್ ಅವರಿಗೆ ಅಭಿನಂದಿಸಿ ಮಾತನಾಡಿದರು.
ಚೈತ್ರಾ ಚಿಕ್ಕವಯಸ್ಸಿನಲ್ಲಿ ದೊಡ್ಡಸಾಧನೆ ಮಾಡುವ ಮೂಲಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದೇ ರೀತಿ ಅವರ ಸಾಧನೆ ಮುಂದುವರಿಸಲಿ ಮುಂದಿನ ಪೀಳಿಗೆಗೆ ಆದರ್ಶವಾಗಲಿ ಎಂದು ಮುಖ್ಯಅತಿಥಿಯಾಗಿದ್ದ ಡಾ.ಉಷಾ ಹೆಗಡೆ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ರೈತರತ್ನ ಕುರುಬೂರ್ ಶಾಂತಕುಮಾರ್, ಯಾವುದೇ ಆಟಗಳಿರಲಿ ಅದು ಜಾತಿ, ಪಕ್ಷವನ್ನ ಮೀರಿದ ವ್ಯವಸ್ಥೆ. ಅದಕ್ಕಾಗಿ ಪಕ್ಷಾತೀತವಾಗಿ ಸಂಘಟನೆಗಳು ಈ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ವಿಶ್ವಕಪ್ ಖೋ ಖೋ ಪಂದ್ಯದಲ್ಲಿ ಗೆದ್ದು ಭಾರತ ದೇಶಕ್ಕೆ ಕೀರ್ತಿ ತಂದ ಹಳ್ಳಿಯ ಸಾಮಾನ್ಯ ಕುಟುಂಬದ ಕುರುಬೂರಿನ ಚೈತ್ರಾ ಸಾಧನೆ ಮುಂದಿನ ಪೀಳಿಗೆಗೆ ಉತ್ತಮ ಸಂದೇಶ. ರಾಜ್ಯ ಸರ್ಕಾರ ಇಂತಹ ಪ್ರತಿಭೆಗೆ ನಿರಂತರವಾಗಿ ಪ್ರೋತ್ಸಾಹಿಸಲು ಉತ್ತಮ ದರ್ಜೆಯ ಸರ್ಕಾರಿ ಉದ್ಯೋಗವನ್ನು ನೀಡಿ ಗೌರವಿಸಬೇಕು ಎಂದು ಒತ್ತಾಯಿಸಿದರು.
ಕುಟುಂಬಕ್ಕೆ ಅನುಕೂಲವಾಗಲು ಮೈಸೂರಿನಲ್ಲಿ ಉಚಿತವಾಗಿ ಉತ್ತಮ ನಿವೇಶನವನ್ನು ನೀಡಬೇಕು. ಮುಂದಿನ ಪೀಳಿಗೆಗೆ ಇವರ ಸಾಧನೆ ತಿಳಿಯುವಂತಾಗಲು ಶಾಶ್ವತವಾಗಿ ಇವರ ಹೆಸರಿನಲ್ಲಿ ರಾಜ್ಯಮಟ್ಟದಲ್ಲಿ ಆಟಗಾರರಿಗೆ ಚೈತ್ರಾ ಹೆಸರಿನಲ್ಲಿ ಪಾರಿತೂಷಕ ನೀಡುವ ಯೋಜನೆ ಜಾರಿಗೆ ತರಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು.
ಸಭೆಯಲ್ಲಿ ಮಾತನಾಡಿದ ಅತಿಥಿಗಳು ರಾಜ್ಯ ಸರ್ಕಾರ ವಿಶ್ವ ಚಾಂಪಿಯನ್ ಕ್ರೀಡಾಪಟುಗಳಿಗೆ ಘೋಷಣೆ ಮಾಡಿರುವ 5ಲಕ್ಷ ರೂ. ಪ್ರೋತ್ಸಾಹಧನ ಪುನರ್ ಪರಿಶೀಲಿಸಲಿ ಗೌರವಯುತ ಪುರಸ್ಕಾರ ನೀಡಲಿ ಎಂದು ಒತ್ತಾಯಿಸಿದರು. ಮೈಸೂರಿಗೆ ಬಂದಾಗ ಸಮಿತಿಯ ಮುಖಂಡತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಈ ಬಗ್ಗೆ ಒತ್ತಾಯಿಸಲು ತೀರ್ಮಾನಿಸಲಾಯಿತು.
ಜಿಲ್ಲಾ ಖೋಖೋ ಫೆಡರೇಶನ್ ಅಧ್ಯಕ್ಷ ಡಾ ಸಿ ಕೃಷ್ಣ ಪ್ರಸ್ತಾವಿಕವಾಗಿ ಮಾತನಾಡಿದರು. ಕನ್ನಡ ಸಾಹಿತ್ಯ ಕಲಾ ಕೂಟ ಅಧ್ಯಕ್ಷ ಎಂ.ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಸ್ವಾಗತ ಮಾಡಿದರು. ಹೆಳವರಹುಂಡಿ ಸಿದ್ದಪ್ಪ ರಾಜ್ಯ ಸರ್ಕಾರ ಕ್ರೀಡಾಪಟುಗಳಿಗೆ ನೀಡುವ ಪ್ರೋತ್ಸಾಹದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ವಿಶ್ವ ಕಪ್ ಖೋಖೋ ವಿಜೇತರ ತಂದೆ ತಾಯಿ ಅವರನ್ನು ಸನ್ಮಾನಿಸಲಾಯಿತು. ವಾಣಿಜ್ಯ ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಕೆ.ಬಿ.ನಿಂಗರಾಜು, ಕರ್ನಾಟಕ ಕಾವಲು ಪಡೆಯ ಅಧ್ಯಕ್ಷ ಮೋಹನ್ ಕುಮಾರ್ ಗೌಡ, ಕ್ರೀಡಾ ಸುದ್ದಿ ವಾಹಿನಿ ಮುಖ್ಯಸ್ಥ ಎನ್.ಬಿ.ಆರಾಧ್ಯ ಇನ್ನರ್ವೆಲ್ ಉಪಾಧ್ಯಕ್ಷೆ ಶಾಂತಕೃಷ್ಣ, ಜೀವದಾರ ರಕ್ತ ನಿಧಿ ಗಿರೀಶ್ ಶಿಕ್ಷ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಪಿ.ದೇವರಾಜು, ಡಿ.ಎನ್. ಲೋಕಪ್ಪ, ಎಸ್. ರಾಮಪ್ರಸಾದ್, ಎಮ್.ಆರ್. ಚೌದ್ರಿ. ಕಾರ್ಯಕ್ರಮ ಆಯೋಜನೆಗೆ ನೆರವಾದರು.
ರಾಜ್ಯ ಕಬ್ಬು ಬೆಳೆಗಾರ ಸಂಘದ ವತಿಯಿಂದ ಇದೆ ವೇದಿಕೆಯಲ್ಲಿ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಲಾಯಿತು ಅತ್ತಹಳ್ಳಿ ದೇವರಾಜ್, ಬರಡಪುರ ನಾಗರಾಜ್, ಕಿರಗಸೂರ ಶಂಕರ್, ಪಿ.ಸೋಮಶೇಖರ್ ಮುಂತಾದ್ದವರುರಿದ್ದರು
ವಿಶ್ವ ಕಪ್ ಖೋಖೋ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲು ದಾನಿಗಳು ವೇದಿಕೆಯಲ್ಲಿ ಹಲವಾರು ಜನ ನಗದು ಹಣ ಹಾಗೂ ಚೆಕ್ ನೀಡಿದ್ದು, ಅರಲ್ಲಿ ಚೇತ್ರಾ ಅವರಿಗೆ 2,10,000 ಹಾಗೂ ಎಂ.ಕೆ. ಗೌತಮ್ ಅವರಿಗೆ 1,10,000 ರೂಪಾಯಿ ಅಭಿಮಾನದನ್ನು ನೀಡಿ ಪ್ರೋತ್ಸಾಹಿಸಲಾಯಿತು.