NEWSನಮ್ಮಜಿಲ್ಲೆನಮ್ಮರಾಜ್ಯ

ವರ್ಗಾವಣೆಗೊಂಡ ಸಾರಿಗೆ ನೌಕರರನ್ನು ಕಾಡುತ್ತಿರುವ ಮಂಗಳೂರು KSRTC DC ಅರುಣ್‌

ವಿಜಯಪಥ ಸಮಗ್ರ ಸುದ್ದಿ

ಮಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಏಪ್ರಿಲ್‌ನಲ್ಲಿ ನಡೆದ ಮುಷ್ಕರದ ವೇಳೆ ಏಕಾಏಕಿ ನೌಕರರನ್ನು ಆಡಳಿತಾತ್ಮಕವಾಗಿ ವರ್ಗಾವಣೆ ಮಾಡಿದ್ದ ಕೆಎಸ್‌ಆರ್‌ಟಿಸಿ ಜನವರಿ 1 ರಂದು 84 ನೌಕರರನ್ನು ಮತ್ತೆ ಅದೇ ಮಾತೃ ವಿಭಾಗಕ್ಕೆ ಕೋರಿಕೆ ಮೇರೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಚಾಲಕ, ನಿರ್ವಾಹಕ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಮರು ವರ್ಗಾವಣೆ ಮಾಡಿದೆ. ಆದರೆ ಈ ಮರು ವರ್ಗಾವಣೆ ಮಾಡಿದ್ದರೂ ಮಂಗಳೂರು ಕೆಎಸ್‌ಆರ್‌ಟಿಸಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ್‌ಈವರೆಗೂ ಇಬ್ಬರನ್ನು ಬಿಟ್ಟರೆ ಬೇರೆ ಯಾರನ್ನು ಬಿಡುಗಡೆ ಮಾಡಿಲ್ಲ.

ವರ್ಗಾವಣೆ ಆದೇಶ ಬಂದು 15ದಿನಗಳು ಸಮೀಪಿಸುತ್ತಿದ್ದರೂ ಈ ಡಿಸಿ ವರ್ಗಾವಣೆ ಆದೇಶ ಬಂದಿರುವ ನೌಕರರನ್ನು ಬಿಡುಗಡೆ ಮಾಡದೆ ಸತಾಯಿಸುತ್ತಿದ್ದಾರೆ. ಇನ್ನೊಂದು ಕಡೆ ನಿಗಮದ ವರ್ಗಾವಣೆ ಮಾಡಿರುವ ಆದೇಶವನ್ನೇ ಈ ಅಧಿಕಾರಿ ಉಲ್ಲಂಘಿಸುತ್ತಿದ್ದಾರೆ. ಮೇಲಧಿಕಾರಿಗಳ ವರ್ಗಾವಣೆ ಆದೇಶಕ್ಕೂ ಇವರು ಕ್ಯಾರೆ ಎನ್ನುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ಇನ್ನು ನಾವು ವರ್ಗಾವಣೆಗೊಂಡಿದ್ದೇವೆ ನಮ್ಮನ್ನು ಬಿಡುಗಡೆ ಮಾಡಿ ಎಂದು ನೌಕರರು ಕೋರಿಕೊಂಡರೂ ಅವರನ್ನು ಈ ಡಿಸಿ ಅರುಣ್‌ಬೆದರಿಸುತ್ತಿದ್ದಾರೆ ಎಂಬ ಆರೋಪ ನೌಕರರಿಂದ ವ್ಯಾಪಕವಾಗಿ ಕೇಳಿ ಬರುತ್ತಿದೆ.

ಇದರಿಂದ ಮುಷ್ಕರದ ವೇಳೆ ರಾಜ್ಯದ ವಿವಿಧ ಘಟಕಗಳಿಂದ ಮಂಗಳೂರು ವಿಭಾಗಕ್ಕೆ ವರ್ಗಾವಣೆಯಾಗಿ ಹೋಗಿರುವ ನೌಕರರನ್ನು ವಿಭಾಗದಿಂದ ಬಿಡುಗಡೆ ಮಾಡುತ್ತಿಲ್ಲ. ಕಾರಣ ಕೇಳಿದರೆ ನೌಕರರು ಲಂಚಕೊಟ್ಟವರಿಗಷ್ಟೇ ಇವರು ವಿಭಾಗದಿಂದ ಬಿಡುಗಡೆ ಅದೇಶ ಪತ್ರ ನೀಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

ನೌಕರರ ಈ ಆರೋಪ ಗಮನಿಸಿದರೆ ಅದು ಸತ್ಯವು ಇರಬಹುದು ಎಂದು ಎನಿಸುತ್ತಿದೆ. ಕಾರಣ ಜನವರಿ 1ರಿಂದ ಈವರೆಗೂ ಹಾಸನ್‌ಮತ್ತು ತುಮಕೂರು ವಿಭಾಗದ ಒಬ್ಬೊಬ್ಬರು ನೌಕರರನ್ನಷ್ಟೇ ವರ್ಗಾವಣೆ ಮಾಡಿದ್ದು, ಉಳಿದ 40-50 ಮಂದಿ ನೌಕರರನ್ನು ಇನ್ನು ಬಿಡುಗಡೆ ಮಾಡಿಲ್ಲ. ಇದರಿಂದಲೇ ಈ ಡಿಸಿ ಅರುಣ್‌ಲಂಚಬಾಕ ಅಧಿಕಾರಿ ಎಂದು ನೌಕರರು ಆರೋಪಿಸುತ್ತಿರುವುದು ನಿಜ ಎನಿಸುತ್ತಿದೆ. ಈ ಬಗ್ಗೆ ಮೇಲಧಿಕಾರಿಗಳು ಈ ಅಧಿಕಾರಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬ ಒತ್ತಾಯವು ಇದೆ.

ಹೀಗಾಗಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಶಿವಯೋಗಿ ಕಳಸದ ಅವರು ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ವಿರುದ್ಧ ಕ್ರಮ ಜರುಗಿಸುವ ಮೂಲಕ ಜನವರಿ 1ರಂದೆ ವರ್ಗಾವಣೆಗೊಂಡಿರುವ ನೌಕರರನ್ನು ಅವರು ವರ್ಗಾವಣೆಗೊಂಡಿರುವ ವಿಭಾಗದಲ್ಲಿ ರಿಪೋರ್ಟ್‌ಮಾಡಿಕೊಳ್ಳುವುದಕ್ಕೆ ಅನುಕೂಲ ಮಾಡಿಕೊಡಬೇಕು ಎಂಬ ಮನವಿಯನ್ನು ನೌಕರರ ಜಂಟಿ ಸಂಘಟನೆ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಇನ್ನು ಈ ಡಿಸಿ ಅರುಣ್‌ಕಿರುಕುಳ ಮಂಗಳೂರು ವಿಭಾಗದಲ್ಲಿ ಈ ಹಿಂದಿನಿಂದಲೂ ಹೆಚ್ಚಾಗಿದ್ದು, ಈ ಬಗ್ಗೆ ನೊಂದ ನೌಕರರು ಆತ್ಮಹತ್ಯೆ ಮಾಡಿಕೊಂಡಿರುವ ಆರೋಪವು ಇವರ ಮೇಲೆ ಇದೆ. ಅಲ್ಲದೆ ಆತ್ಮಹತ್ಯೆ ಸಂಬಂಧ ಈ ಅಧಿಕಾರಿಯ ವಿರುದ್ಧ ಎಫ್‌ಐಆರ್‌ಕೂಡ ದಾಖಲಾಗಿದೆ.

ಇದಿಷ್ಟೇ ಅಲ್ಲದೆ ಇವರ ಕಿರುಕುಳದಿಂದ ಒತ್ತಡಕ್ಕೆ ಒಳಗಾಗಿ ನೌಕರರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದ ನಿದರ್ಶನಗಳೂ ಇವೆ. ಇಷ್ಟೆಲ್ಲ ನಿದರ್ಶನ ಆರೋಪಗಳು ಇದ್ದರೂ ಈ ಅಧಿಕಾರಿಯನ್ನು ಬೇರೆಡೆಗೆ ವರ್ಗಾವಣೆ ಮಾಡದೆ ಇಲ್ಲೆ ಮುಂದುವರಿಸಿರುವುದು ಏಕೆ ಎಂಬ ಪ್ರಶ್ನೆಯೂ ಕಾಡುತ್ತಿದೆ. ಅಲ್ಲದೆ ನಿಗಮಕ್ಕೆ ಒಂದು ಕಪ್ಪುಚುಕ್ಕೆಯಂತಾಗಿದೆ.

ಇಂಥ ಅಧಿಕಾರಿಯನ್ನು ಮೊದಲು ವರ್ಗಾವಣೆ ಮಾಡಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಅನುಕೂಲ ಮಾಡಿಕೊಡಬೇಕು ಎಂದು ನೌಕರರು ಸಾರಿಗೆ ಸಚಿವ ಶ್ರೀರಾಮುಲು ಅವರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ ಈಗ ವರ್ಗಾವಣೆಗೊಂಡಿರುವ ನೌಕರರನ್ನು ಅವರು ವರ್ಗಾವಣೆಗೊಂಡಿರುವ ಸ್ಥಳಕ್ಕೆ ಹೋಗಲು ಬಿಡುಗಡೆಪತ್ರವನ್ನು ಶೀಘ್ರ ನೀಡಬೇಕು ಎಂದು ಆದೇಶ ಹೊರಡಿಸುವಂತೆ ಸಚಿವರಲ್ಲಿ ಮನವಿ ಮಾಡಿದ್ದಾರೆ.

ಫೋನ್‌ಪಿಕ್‌ಮಾಡಿದರೂ ಮಾತನಾಡದ ಡಿಸಿ ಅರುಣ್‌: ಜನವರಿ ಒಂದರಂದೆ ವರ್ಗಾವಣೆಗೊಂಡಿರುವ ನೌಕರರನ್ನು ಇನ್ನು ಏಕೆ ನೀವು ಬಿಡುಗಡೆ ಮಾಡಿಲ್ಲ ಎಂಬ ಬಗ್ಗೆ ಖಚಿತ ತಿಳಿದುಕೊಳ್ಳುವ ಮತ್ತು ನೌಕರರು ಇವರ ಮೇಲೆ ಹೊರಿಸುತ್ತಿರುವ ಆರೋಪದ ಬಗ್ಗೆ ಕೇಳುವ ಸಲುವಾಗಿ ವಿಜಯಪಥ ಡೆಸ್ಕ್‌ನಿಂದ ಫೋನ್‌ಮಾಡಿದರೆ, ಫೋನ್‌ಕಾಲ್‌ಪಿಕ್‌ಮಾಡಿದ (77******00ಗೆ) ಡಿಸಿ ಅರುಣ್‌ಮಾತನಾಡದೆ ಮೌನವಾಗಿಯೇ 16 ಸೆಕೆಂಡ್‌ಮತ್ತು 10 ಹಾಗೂ 5 ಸೆಕೆಂಡ್‌ಇದ್ದು ಪೋನ್‌ಕಾಲ್‌ಕಟ್‌ಮಾಡಿದರು.

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...