Please assign a menu to the primary menu location under menu

NEWSನಮ್ಮರಾಜ್ಯ

ರೋಹಿತ್ ವೇಮುಲಾ ಕಾಯ್ದೆ ಜಾರಿಗೆ ಸಚಿವ ಪ್ರಿಯಾಂಕ್ ಖರ್ಗೆ ಒತ್ತಾಯ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರೋಹಿತ್ ವೇಮುಲಾ ಕಾಯ್ದೆಯನ್ನು ಜಾರಿಗೆ ತರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸಚಿವ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.

ಈ ಸಂಬಂಧ ಶುಕ್ರವಾರ Xಮೂಲಕ ಸಾಂಸ್ಥಿಕ ಹತ್ಯೆಗೆ ಒಳಗಾದ ವಿದ್ಯಾರ್ಥಿ ಹೋರಾಟಗಾರ ರೋಹಿತ್ ವೇಮುಲಾ ಅವರ ಜನ್ಮದಿನದಂದೆ ಸಚಿವ ಖರ್ಗೆ ಈ ಒತ್ತಾಯ ಮಾಡಿದ್ದು, ವೇಮುಲಾ ಕಾಯ್ದೆಗೆ ಆಗ್ರಹಿಸಿದ್ದಾರೆ.

ಇನ್ನು ಯಾವುದೇ ವಿದ್ಯಾರ್ಥಿಯು ತನ್ನ ಸಾಮಾಜಿಕ, ಆರ್ಥಿಕ ಅಥವಾ ಧಾರ್ಮಿಕ ಹಿನ್ನೆಲೆಯಿಂದಾಗಿ ಹೊರಗಿಡುವಿಕೆ ಅಥವಾ ಅನ್ಯಾಯವನ್ನು ಎದುರಿಸಬಾರದು ಅದಕ್ಕಾಗಿ ರೋಹಿತ್ ವೇಮುಲಾ ಕಾಯ್ದೆ ಜಾರಿ ಆಗಬೇಕು ಎಂದು ತಿಳಿಸಿದ್ದಾರೆ.

ನಮ್ಮ ಸರ್ಕಾರ ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ಬದ್ಧವಾಗಿದೆ. ನಮ್ಮ ಶಿಕ್ಷಣ ಸಂಸ್ಥೆಗಳನ್ನು ಸುರಕ್ಷಿತ ಸ್ಥಳಗಳನ್ನಾಗಿ ಮಾಡಲು ನಾವು ಶ್ರಮಿಸುತ್ತೇವೆ. ಅಲ್ಲಿ ಪ್ರತಿ ಯುವ ಮನಸ್ಸು ಅವರ ಸಾಮಾಜಿಕ-ಆರ್ಥಿಕ ಹಿನ್ನೆಲೆಯನ್ನು ಲೆಕ್ಕಿಸದೆ ಭಯವಿಲ್ಲದೆ ಕಲಿಯಬಹುದು, ಅಭಿವೃದ್ಧಿ ಹೊಂದಬಹುದು ಮತ್ತು ಕನಸು ಕಾಣಬಹುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತಾರತಮ್ಯವನ್ನು ತಡೆಗಟ್ಟುವುದು, ದೌರ್ಜನ್ಯಗಳನ್ನು ಪರಿಹರಿಸುವುದು ಹಾಗೂ ಹಿಂದುಳಿದ ವರ್ಗಗಳು ಮತ್ತು ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಸಮಾನತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ‘ರೋಹಿತ್ ವೇಮುಲಾ ಕಾಯ್ದೆ’ಯನ್ನು ಜಾರಿಗೆ ತರುವುದನ್ನು ಪರಿಗಣಿಸಲು ನಾನು ಸಿಎಂ ಡಿಸಿಎಂ ಅವರನ್ನು ಒತ್ತಾಯಿಸಿದ್ದೇನೆ ಎಂದು ಹೇಳಿದ್ದಾರೆ.

Leave a Reply

error: Content is protected !!
LATEST
ಫೆ.2ರಂದು ಇಪಿಎಸ್ ಪಿಂಚಿಣಿದಾರರ 85ನೇ ಮಾಸಿಕ ಸಭೆ: ನಂಜುಂಡೇಗೌಡ ಮಹಿಳೆಯರ ಬೆಳವಣಿಗೆಗೆ ಶ್ರಮಿಸಿದ್ದ ಇಂದಿರಾ ಗಾಂಧಿ: ಸಚಿವ ಮುನಿಯಪ್ಪ 12 ವರ್ಷದ ಬಳಿಕ ಕಾಣಿಸಿಕೊಂಡ ಕೊಹ್ಲಿ 6 ರನ್‌ ಗಳಿಸಿ ಔಟ್‌: ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣ..! ಚುನಾವಣೆ ಒಂದು ವಾರ ಇರುವಾಗಲೇ ಪಕ್ಷ ತೊರೆದ ಎಎಪಿಯ ಏಳು ಶಾಸಕರು ರೋಹಿತ್ ವೇಮುಲಾ ಕಾಯ್ದೆ ಜಾರಿಗೆ ಸಚಿವ ಪ್ರಿಯಾಂಕ್ ಖರ್ಗೆ ಒತ್ತಾಯ ವೈದ್ಯೆ ಅಪಹರಿಸಿ ಸಾಮೂಹಿಕ ಅತ್ಯಾಚಾರ ಪ್ರಕರಣ: ನಾಲ್ವರಿಗೆ 20 ವರ್ಷ ಕಠಿಣ ಶಿಕ್ಷೆ ಸರ್ಕಾರದ ಅತಿಥಿ ಶಿಕ್ಷಕರು, ಉಪನ್ಯಾಸಕರ ಗೌರವಧನ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ KPSC ಕನ್ನಡ ಪ್ರಶ್ನೆ ಪತ್ರಿಕೇಲಿ ಸಾಲು ಸಾಲು ತಪ್ಪಿಗೆ 5 ಕೃಪಾಂಕ: ಅಭ್ಯರ್ಥಿಗಳ ಆಕ್ರೋಶ ಬೆಳ್ಳಂಬೆಳಗ್ಗೆಯೇ ಭ್ರಷ್ಟರಿಗೆ ಲೋಕಾಯುಕ್ತ ಅಧಿಕಾರಿಗಳ ಶಾಕ್‌: ಮನೆ, ಕಚೇರಿಗಳ ಮೇಲೆ ದಾಳಿ ನಾಳೆ ಫೆ.1ರಂದು ಕೇಂದ್ರ ಬಜೆಟ್ ಮಂಡನೆ: ರಾಜ್ಯದ ರೈತರ ನಿರೀಕ್ಷೆ, ಒತ್ತಾಯಗಳೇನು?