NEWSಲೇಖನಗಳು

ಸಾರಿಗೆ ಅಧಿಕಾರಿಗಳ ಕೈಗೊಂಬೆಯಾದ್ರಾ ನೌಕರರ ಪಾಲಿನ ದೈವ ಶ್ರೀರಾಮುಲು…!?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಹೌದು! ಬಿಎಂಟಿಸಿಯಲ್ಲಿ ಹೇಳುವವರು ಇಲ್ಲ ಕೇಳುವವರು ಇಲ್ಲ. ಸಾರಿಗೆ ಸಚಿವ ಶ್ರೀರಾಮುಲು ಅವರಂತು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಇವರ ಮಾತಿಗೆ ಅಧಿಕಾರಿಗಳು ಕ್ಯಾರೆ ಎನ್ನೋದು ಇಲ್ಲ. ಇಲ್ಲಿ ಸಚಿವರ ಮಾತಿಗೂ ಡೊಂಟ್‌ಕೇರ್. ಹೀಗಾಗಿ ಅಧಿಕಾರಿಗಳು ಆಡಿದ್ದೆ ಆಟ ಹೇಳಿದ್ದೆ ರೂಲ್ಸ್, ರಜೆ ಬೇಕು ಅಂದ್ರು ಕೊಡಿ ದುಡ್ಡು ಡ್ಯೂಟಿ ಬೇಕು ಅಂದ್ರು ಕೊಡಿ ದುಡ್ಡು. ದುಡ್ಡಿಲ್ಲದೆ ಏನು ಮಾಡೋಲ್ಲ ಬಹುತೇಕ ಎಲ್ಲ ಡಿಪೋಗಳಲ್ಲಿರುವ ಅಧಿಕಾರಿಗಳು.

ಈ ಸಂಸ್ಥೆಯಲ್ಲಿ ಬಹುತೇಕ ಲಂಚಬಾಕರೆ ಸೇರಿಕೊಂಡಿದ್ದು ಒಂಥರ ಭ್ರಷ್ಟರ ಸಂತೆಯಾಗಿ ಮಾರ್ಪಡಿಸಿ ಬಿಟ್ಟಿದ್ದಾರೆ. ಹೀಗಾಗಿ ಈ ಸಂಸ್ಥೆಯಲ್ಲಿ ಅನಾದಿಕಾಲದಿಂದ ಈವರೆಗೂ ಒಂದು ರೂಪಾಯಿ ಕೂಡ ಲಾಭ ತೋರಿಸಿಲ್ಲ. ಪ್ರತಿವರ್ಷ ಕೋಟ್ಯಂತರ ರೂಪಾಯಿ ನಷ್ಟ ತೋರಿಸುವ ಮೂಲಕ ಆಸ್ತಿ ಅಡವಿಟ್ಟು ಸಾಲ ಮಾಡಿ ಅದನ್ನು ನುಂಗಿ ನೀರುಕುಡಿದಾಯ್ತು. ಸರ್ಕಾರದಿಂದ ಅನುದಾನ ಪಡೆದಿದ್ದೂ ಆಯ್ತು.

ಇಷ್ಟೆಲ್ಲ ಆದರೂ ಪ್ರತಿ ವರ್ಷ ಸಂಸ್ಥೆ ಲಾಸ್ ಲಾಸ್‌. ಇದಕ್ಕೆಲ್ಲ ಕಾರಣ ಇಲ್ಲಿರುವ ಭ್ರಷ್ಟ ಅಧಿಕಾರಿಗಳ ಕೂಟ. ಬಿಎಂಟಿಸಿಯಲ್ಲಿ ಸುಮಾರು 7ಸಾವಿರ ಬಸ್‌ಗಳಿವೆ. ಸುಮಾರು 35 ಸಾವಿರ ಚಾಲನಾ ಸಿಬ್ಬಂದಿಗಳಿದ್ದಾರೆ. ಕೊರೊನಾ ನಂತರ ಅಂದರೆ ಈಗ ಬಿಎಂಟಿಸಿಯಲ್ಲಿ ಹೊಸ ರೂಲ್ಸ್ ತಂದಿದ್ದಾರೆ ಡ್ಯೂಟಿ ಎಷ್ಟು ದಿನಗಳು ‌ಮಾಡುತ್ತಾರೋ ಅಷ್ಟು ದಿನಗಳದ್ದು ಮಾತ್ರ ವೇತನ ಕೋಡೋದು. ಡ್ಯೂಟಿ ಮಾಡಿಲ್ಲ ಅಂದರೆ ವೇತನ ಕೊಡಲ್ಲ.

ಇನ್ನು ಡ್ಯೂಟಿ ಮಾಡಲು ಚಾಲಕರು ಮತ್ತು ನಿರ್ವಾಹಕರು ಘಟಕಗಳಿಗೆ ಪ್ರತಿದಿನ ಬಂದರೂ ಘಟಕ ವ್ಯವಸ್ಥಾಪಕರು ಮತ್ತು ಎಟಿಎಸ್‌, ಟಿಐಗಳು ಡ್ಯೂಟಿ ಕೊಡಲ್ಲ. ಕಾರಣ ಕುರುಡು ಕಾಂಚಾಣ. ಹಣ ಕೊಟ್ಟವರಿಗೆ ಮಾತ್ರ ಇಲ್ಲಿ ಡ್ಯೂಟಿ. ಇಲ್ಲಾಂದ್ರೆ ಬೆಳಗ್ಗೆಯಿಂದ ಸಂಜೆವರೆಗೂ ಘಟಕದಲ್ಲೇ ಕಾದುಕಾದು ಕುಳಿತು ಮನಗೆ ಹೋಗಬೇಕು. ಅದು ಅಂದು ಗೈರುಹಾಜರಿ.

ಹೀಗಾಗಿ ರಜೆ ಸಿಗಬೇಕು, ಡ್ಯೂಟಿ ಸಿಗಬೇಕು ಎಂದರೆ ಪ್ರತಿ ತಿಂಗಳು 2-3 ಸಾವಿರ ರೂ.ಗಳನ್ನು ಭ್ರಷ್ಟ ಅಧಿಕಾರಿಗಳಿಗೆ ಕಾಣಿಕೆಯಾಗಿ ನೀಡಲೇಬೇಕು. ಇಲ್ಲ ನಾವು ಏಕೆ ಹಣ ಕೊಡುಬೇಕು ಎಂದು ಹಣ ಕೊಡಲು ಒಪ್ಪದೇ ಹೋದವರಿಗೆ ಡ್ಯೂಟಿ ನೀಡದೆ ಮಾನಸಿಕವಾಗಿ ಹಿಂಸೆ ನೀಡುತ್ತಾರೆ.

ಇದಕ್ಕೆ ತಾಜಾ ನಿದರ್ಶನವಾಗಿ ಈಗಾಗಲೇ 4-5ಮಂದಿ ನೌಕರರು ಪ್ರಾಣ ಕಳೆದುಕೊಂಡಿರುವುದು. ನಾಲ್ಕುದಿನದಿಂದ ಈಚೆಗೆ ಚನ್ನಸಂದ್ರ ಘಟಕದ ನಿರ್ವಾಹಕ ಜೆ. ರಂಗನಾಥ್‌ ಮತ್ತು ಕೆಂಗೇರಿ ಘಟಕ 37ರ ನಿರ್ವಾಹಕ ಶ್ರೀನಿವಾಸ್‌ ಎಂಬುವರು ಡಿಪೋದಲ್ಲಿ ವಿಷ ಸೇವಿಸಿ ಆಸ್ಪತ್ರೆಯಲ್ಲಿ ಸಾವುಬದುಕಿನ ನಡುವೆ ಹೋರಾಟ ಮಾಡಿರುವುದು.

ಇನ್ನು ಆತ್ಮಹತ್ಯೆಗೆ ಯತ್ನಿಸಿದ ನೌಕರರನ್ನು ಭೇಟಿ ಮಾಡುವುದಕ್ಕೂ ಹೋಗದ ಸಚಿವರು ಈ ನೌಕರರ ಪಾಲಿಗೆ ಇದ್ದು ಅಗಲಿದಂತೆಯೇ ಸರಿ. ಇಂಥವರು ಸಂಸ್ಥೆಯ ಅಧಿಕಾರಿಗಳು ಹಾಕುವ ತಾಳಕ್ಕೆ ಹೆಜ್ಜೆಹಾಕಿ ನಟಿಸೋದು ಬಿಟ್ಟರೆ ಇನ್ನೇನು ಮಾಡಲು ಸಾಧ್ಯ.

ಯಾರೋ ಒಬ್ಬ ರೌಡಿಶೀಟರ್‌ ಕೊಲೆಯಾದರೆ ಅವರ ಮನೆಗೆ ಹೋಗಿ ಸಾರ್ವಜನಿಕರ ತೆರಿಗೆ ಹಣದವನ್ನು ಲಕ್ಷ ಲಕ್ಷವಾಗಿ ಕೊಡುವ ಸರ್ಕಾರ ಮತ್ತು ಸಚಿವರಿಗೆ ತಮ್ಮದೇ ಸಂಸ್ಥೆಯ ನೌಕರರು ಭ್ರಷ್ಟ ಅಧಿಕಾರಿಗಳ ಕಿರುಕುಳ ತಾಳಲಾರದೆ ಆತ್ಮಹತ್ಯೆ ಹಾದಿ ತುಳಿಯುತ್ತಿದ್ದರೂ ಅವರಿಗೆ ಸಮಾಧಾನದ ಮಾತುಗಳನ್ನಾಡಿ ಧೈರ್ಯ ತುಂಬುವ ಕೆಲಸವನ್ನೇಕೆ ಮಾಡುತ್ತಿಲ್ಲ?

ಇನ್ನಾದರೂ ಸಾರಿಗೆ ಸಚಿವರು ನೌಕರರ ಪರವಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುವುದನ್ನು ಬಿಟ್ಟು ಅದನ್ನು ಕಾರ್ಯರೂಪಕ್ಕೆ ತಂದು ಸಂಸ್ಥೆಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ನಿವಾರಿಸುವತ್ತಾ ಮುಂದಾಗಲಿ. ಜತೆಗೆ ನೊಂದ ನೌಕರರು ಸಾವಿನ ಕದತಟ್ಟಿದಾಗ ಅವರನ್ನು ಭೇಟಿ ಮಾಡಿ ಧೈರ್ಯತುಂಬಿ. ಇಲ್ಲ ನಾನುಕೂಡ ಅಧಿಕಾರಿಗಳ ಕೈಗೊಂಬೆ ಎಂಬುದನ್ನು ಸಾಬೀತುಪಡಿಸಿಕೊಳ್ಳುತ್ತೇನೆ ಎಂದರೆ ಈಗ ಇರುವಂತೆಯೇ ಇದ್ದುಬಿಡಲಿ ಎಂದು ನೌಕರರು ಕಿಡಿಕಾರುತ್ತಿದ್ದಾರೆ.

Leave a Reply

error: Content is protected !!
LATEST
KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ