NEWSನಮ್ಮರಾಜ್ಯಸಂಸ್ಕೃತಿ

ಮೈಸೂರು ದಸರಾಗೆ ವಿಧ್ಯುಕ್ತ ಚಾಲನೆ ನೀಡಿದ ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಡಾ. ಹಂಸಲೇಖ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಐತಿಹಾಸಿಕ ದಸರಾ ಮಹೋತ್ಸವ ಸಂಭ್ರಮ ಕಳೆಕಟ್ಟಿದೆ. 414ನೇ ದಸರಾಗೆ ಶುಭ ವೃಶ್ಚಿಕ ಲಗ್ನದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಡಾ. ಹಂಸಲೇಖ ಅವರು ವಿಧ್ಯುಕ್ತವಾಗಿ ಉದ್ಘಾಟನೆ ಮಾಡುವ ಮೂಲಕ ಚಾಲನೆ ನೀಡಿದರು.

ನಾಡದೇವಿಗೆ ಪುಷ್ಪಾರ್ಷನೆ ಸಲ್ಲಿಸುವ ಮೂಲಕ ದಸರಾ ಹಬ್ಬವನ್ನು ಉದ್ಘಾಟಿಸಲಾಗಿದ್ದು, ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ,ಕೆ.ಶಿವಕುಮಾರ್, ಡಾ. ಹಂಸಲೇಖ ಅವರ ಪತ್ನಿ ಸೇರಿದಂತೆ ಅನೇಕ ಗಣ್ಯರು ಸಾಥ್‌ ನೀಡಿದರು.

ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಹಂಸಲೇಖ, ಕರ್ನಾಟಕದ ಏಕೀಕರಣಕ್ಕೆ 50 ವರ್ಷ. ನನ್ನ ಕಲಾ ಕಾಯಕಕ್ಕೂ 50 ವರ್ಷ. ಇಂದು ನಾಡಹಬ್ಬ ದಸರಾ ಉದ್ಘಾಟನೆಯ ಅವಕಾಶ ಸಿಕ್ಕಿದ್ದು ಬಹಳ ಬೆಲೆಯುಳ್ಳದ್ದು. ಈ ಅವಕಾಶಕ್ಕಾಗಿ ನಾನು ಸಾವಿರಾರು ಮೆಟ್ಟಿಲು ಹತ್ತಿ ಬಂದಿದ್ದೇನೆ. ಈ ಅವಕಾಶಕ್ಕೆ ಹಲವರು ಕಾರಣರಿದ್ದಾರೆ ಎಂದು ಸ್ಮರಿಸಿದರು.

ಇನ್ನು ಈ ಸುಸಂದರ್ಭಕ್ಕೆ ಕಾರಣರಾದ ಅಪ್ಪ ಗೋವಿಂದರಾಜು, ಅಮ್ಮ ರಾಜಮ್ಮ, ಗುರುವನ್ನೆ, ಸಂಗೀತವನ್ನೆ, ಕನ್ನಡಿಗರನ್ನೆ ಸಂವಿಧಾನವನ್ನೆ, ಸಿಂಗಲ್ ಸಿಂಹ ಸಿದ್ದರಾಮಯ್ಯ, ಪ್ರಬಲ ಶಕ್ತಿ ಸಂಘಟಕ ಡಿ.ಕೆ. ಶಿವಕುಮಾರ್, ಹೆಂಡತಿ, ಮಕ್ಕಳನ್ನೆ, ಭೀಮ ಪಡೆಯನ್ನೆ ಯಾರು ಯಾರನ್ನು ನೆನೆಯಲಿ ಎಂದ ಅವರು ಭೂಮಿ ತಾಯಿಯ ನೆನೆದು ಬಿಟ್ಟರೆ ಇವರನ್ನೆಲ್ಲ ನೆನೆದಂತೆ ಎಂದರು.

ನಾನು ಈಗ ಕನ್ನಡದ ದೀಪ ಹಚ್ಚಿದ್ದೇನೆ. ಕನ್ನಡಿಗರ ಆಶಯದಂತೆ ದೀಪ ಹಚ್ಚಿದ್ದೇನೆ. ದಸರಾ ಎನ್ನುವುದು ಜೀವಂತ ಮಹಾಕಾವ್ಯ. ದಕ್ಷಿಣ ಭಾರತದ ವೀರರ ಕಥೆಯೆ ಈ ಮಹಾಕಾವ್ಯ. ವಿಜಯನಗರದ ಮಹಾ ಸಾಮ್ರಾಜ್ಯ ಆರಂಭಿಸಿದ ಮಹಾಕಾವ್ಯವಿದು. ದಸರಾ ಒಂದು ರೀತಿ ಕಥಾ ಕಣಜ. ಇದು ಮಹಾಕಾವ್ಯವಾಗಿ ಬೆಳಗಬೇಕು. ಕನ್ನಡ ನಮ್ಮ ಶೃತಿ ಆಗಬೇಕು. ಅಭಿವೃದ್ಧಿ ನಮ್ಮ ಕೃತಿ ಆಗಬೇಕು ಎಂದರು.

ಕನ್ನಡದ ಭಾಷೆಗೆ ಮಿತಿ ಇದೆ. ಆದರೆ ಭಾವಕ್ಕೆ ಮಿತಿ ಎಲ್ಲಿದೆ? ನಮಗೆ ದೆಹಲಿ ಬೇಕು. ದೆಹಲಿಗೂ ನಾವು ಬೇಕು. ಆದರೆ ದೆಹಲಿಗೆ ಕನ್ನಡವೇ ಬೇಕಾಗುತ್ತಿಲ್ಲ. ಇದಕ್ಕೆ ತಲೆ ಕೆಡಿಸಿಕೊಳ್ಳೋದು ಬೇಡ. ನಾವು ಕನ್ನಡವನ್ನು ಜಗತ್ತಿನಲ್ಲಿ ಮೆರೆಸಬೇಕಿದೆ. ಕರ್ನಾಟಕದ ಶಾಂತಿ ಸಮೃದ್ಧಿ ಕನ್ನಡಿಗರ ಮಂತ್ರ ಆಗಬೇಕು.

ಕರ್ನಾಟಕದಲ್ಲಿ ವಾಸ ಮಾಡುವವರೆಲ್ಲ ಕನ್ನಡಿಗರ. ಯಾರಿಗೆ ಕನ್ನಡ ಮಾತಾಡಲು ಬರಲ್ಲ? ಯಾರಿಗೆ ಅರ್ಥವಾಗಲ್ಲ? ಈ ಬಗ್ಗೆ ಒಂದು ಸಮೀಕ್ಷೆ ಆಗಬೇಕು. ಕಾರ್ಪೊರೇಟ್ ಸಂಸ್ಥೆಯೇ ಈ ಸಮೀಕ್ಷೆ ಮಾಡುತ್ತದೆ. ಇದಕ್ಕೆ ಜನರ ಸಹಕಾರ ಇರಲಿ ಎಂದರು.

ಪ್ರತಿಭೆ ಮತ್ತು ಉದ್ಯಮ ಅಗತ್ಯವಾದುದು. ಹುಬ್ಬಳ್ಳಿ-ಬೆಳಗಾವಿ ಜೋಡಿ ಆಗಬೇಕು. ಮಂಗಳೂರು-ಮೈಸೂರು ಜೋಡಿ ಆಗಬೇಕು. ಈ 2 ಜಿಲ್ಲೆಗಳಲ್ಲಿ ವ್ಯಾಪಾರ ಇದೆ. ಸಂಪ್ರದಾಯಿಕ ವೈಭೋಗವಿದೆ. ನಮ್ಮ ಜಿಲ್ಲೆಗಳು ನಮ್ಮ ಜಿಲ್ಲೆಗಳ ನಡುವೆಯೆ ಜೋಡಿ ಆಗಬೇಕು.

29 ಜಿಲ್ಲೆಗಳನ್ನು ಎರಡೆರಡು ಜಿಲ್ಲೆಗಳಾಗಿ ಜೋಡಿಸಿ ವ್ಯಾಪಾರ, ಅಭಿವೃದ್ಧಿಗೆ ಯೋಜನೆ ಮಾಡಬೇಕು. ಕೃಷಿಕ-ಕಾರ್ಪೋರೆಟ್ ಜೋಡಿ ಆಗಬೇಕು. ಅವರ ಕಷ್ಟ ಇವರಿಗೆ ಇವರ ಕಷ್ಟ ಅವರಿಗೆ ಗೊತ್ತಾಗಬೇಕು. ಕನ್ನಡದ ಪಟ್ಟದ ಕೆಲಸಕ್ಕೆ ನಾನು ನನ್ನ ಎಲ್ಲ ಸಮಯ ಕೊಡುತ್ತೇನೆ. ಇದರಲ್ಲಿ ಸಕ್ರಿಯವಾಗಿ ಭಾಗಿ ಆಗುತ್ತೇನೆ ಎಂದು ಹೇಳಿದರು.

ಕನ್ನಡದ ಶಾಂತಿ ಮಂತ್ರವನ್ನು ವಿಶ್ವಕ್ಕೆ ಮುಟ್ಟಿಸೋಣ, ರಾಷ್ಟ್ರದ ಜೊತೆ, ವಿಶ್ವದ ಜೊತೆ ಕನ್ನಡವನ್ನು ಸಮೀಕರಿಸಬೇಕು. ನಾವು ಕನ್ನಡದ ಅಭಿವೃದ್ಧಿ ಮಾಡೋಣಾ. ಮೈಸೂರು ಚಾಮುಂಡಿ ಬೆಟ್ಟಕ್ಕೆ ಶಾಶ್ವತ ದೀಪಾಲಂಕಾರ ಆಗಬೇಕು ಎಂದರು.

Leave a Reply

error: Content is protected !!
LATEST
2086 ಮಂದಿ ಸರ್ಕಾರಿ ನೌಕರರ ಬಳಿಯು ಇವೆ ಬಿಪಿಎಲ್ ಕಾರ್ಡ್‌ಗಳು ! KKRTC ಬಸ್‌ನಲ್ಲಿ ಮರೆತುಹೋಗಿದ್ದ ₹3 ಲಕ್ಷ ಮೌಲ್ಯದ ಚಿನ್ನಾಭರಣ ಮರಳಿಸಿ ಮಾನವೀಯತೆ ಮೆರೆದ ಕಂಡಕ್ಟರ್‌ ಅಡ್ಡಾದಿಡ್ಡಿ ಲಾರಿ ಓಡಿಸಿದ ಕೋಪದಲ್ಲಿ ಚಾಲಕನ ಹತ್ಯೆಗೈದ ಐವರ ಬಂಧನ ಪಿಡಿಒ ಹುದ್ದೆಗೆ ಸಿದ್ದಪಡಿಸಿದ್ದ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ : ಅಭ್ಯರ್ಥಿಗಳಿಂದ ಪ್ರತಿಭಟನೆ ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆ ಸಕ್ಸಸ್‌ – ಈ ದೇಶಗಳ ಪಟ್ಟಿಗೆ ಭಾರತ ಸೇರ್ಪಡೆ ಸ್ಯಾಂಡಲ್‌ವುಡ್‌ ಹಿರಿಯ ನಟ ಟಿ.ತಿಮ್ಮಯ್ಯ ಹೃದಯಾಘಾತದಿಂದ ನಿಧನ NWKRTCಯ 27ನೇ ಸಂಸ್ಥಾಪನಾ ದಿನ- 2023-24 ನೇ ಸಾಲಿನ ಅತ್ಯುತ್ತಮ ವಿಭಾಗ, ಉತ್ತಮ ಘಟಕ, ಅತ್ಯುತ್ತಮ ಅಧಿಕಾರಿಗಳಿಗೆ ಪುರಸ... KKRTC ಅಧಿಕಾರಿಗಳ ನಡೆಯಿಂದ ನೊಂದ ತಾಳಿಕೋಟೆ ಘಟಕ ಚಾಲಕನಿಂದ ದಯಾಮರಣಕ್ಕಾಗಿ ರಾಜ್ಯಪಾಲರಿಗೆ ಅರ್ಜಿ KSRTC: ₹30 ಸಾವಿರ ಲಂಚ ಪಡೆದ ಬಳಿಕ ಗುತ್ತಿಗೆ ಚಾಲಕರ ನೇಮಕ - 11 ತಿಂಗಳ ಬಳಿಕ ₹30 ಸಾವಿರದಿಂದ ₹18 ಸಾವಿರಕ್ಕೆ ಇಳಿದ ... ಅಕ್ರಮ ಹಣ ಸಂಪಾದನೆ: ಅಬಕಾರಿ ಉಪ ನಿರೀಕ್ಷಕನಿಗೆ 3 ವರ್ಷ ಕಠಿಣ ಶಿಕ್ಷೆ, ₹50 ಲಕ್ಷ ದಂಡ