ವಿಜಯಪಥ ಸಮಗ್ರ ಸುದ್ದಿ
ಮಂಗಳೂರು: ದಾಖಲೆ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ 2.15 ಕೆಜಿ ಚಿನ್ನವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎಂಐಎ ಕಸ್ಟಮ್ಸ್ ಅಧಿಕಾರಿಗಳು ಶುಕ್ರವಾರ ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.
ಪ್ರಯಾಣಿಕರ ಗುಪ್ತಚರ ಮತ್ತು ಪ್ರೊಫೈಲಿಂಗ್ ಆಧರಿಸಿ, ಕೇರಳದ ಕಾಸಗೋಡು ಮೂಲದ ಫೈಜಲ್ ತೊಟ್ಟಿ ಮೆಲ್ಪಾರಂಬಾ (37) ಮತ್ತು ಮೊಹಮ್ಮದ್ ಶುಹೈಬ್ ಮುಗು (31) ಎಂಬುವರನ್ನು ಬಂಧಿಸಿರುವ ಅಧಿಕಾರಿಗಳು ಅವರಿಂದ ಸುಮಾರು 1.09 ಕೋಟಿ ರೂ. ಮೌಲ್ಯದ 2.15 ಕೆಜಿ ಚಿನ್ನ ವಶಪಡಿಸಿಕೊಂಡಿದ್ದಾರೆ.
ಬಂಧಿತರಿಬ್ಬರ ಶೋಧ ನಡೆಸಿದಾಗ ತಮ್ಮ ಒಳ ಉಡುಪುಗಳಲ್ಲಿ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಮರೆಮಾಚಿ ಇಟ್ಟುಕೊಂಡಿರುವುದು ಪತ್ತೆಯಾಗಿದ್ದು, 1.09 ಕೋಟಿ ರೂ.ಗಳ ಮೌಲ್ಯದ 24k ಶುದ್ಧತೆಯ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಕಳ್ಳಮಾರ್ಗದಲ್ಲಿ ಚಿನ್ನ ಸಾಗಣೆ ಮಾಡುತ್ತಿದ್ದವರನ್ನು ಗುರುತಿಸಿ ಹಿಡಿದ ಅಧಿಕಾರಿಗಳನ್ನು ಕಸ್ಟಮ್ಸ್ ಆಯುಕ್ತ ಇಮಾಮುದ್ದೀನ್ ಅಹ್ಮದ್, ಜಂಟಿ ಆಯುಕ್ತ ಜೋನಸ್ ಜಾರ್ಜ್ ಅಭಿನಂದಿಸಿದ್ದಾರೆ.
ಕಳ್ಳಸಾಗಣೆ ತಡೆಗಟ್ಟಲು ಜಿಲ್ಲಾಧಿಕಾರಿ ಪ್ರವೀಣ್ ಕಂಡಿ ನೇತೃತ್ವದ ಕಸ್ಟಮ್ಸ್ ತಂಡವನ್ನು ಮತ್ತು ಅಧಿಕಾರಿಗಳಾದ ಶ್ರೀಕಾಂತ್ ಕೆ, ಅಧೀಕ್ಷಕ, ಸುಭೇಂಡು ರಂಜನ್ ಬೆಹೆರಾ, ಅಧೀಕ್ಷಕರು, ನವೀನ್ ಕುಮಾರ್ ಇತರರು ಕಾರ್ಯಾಚರಣೆಯಲ್ಲಿ ಇದ್ದರು.