ಗುಂಡ್ಲುಪೇಟೆ: ಕೆರೆ ಕಟ್ಟೆಗೆ ನೀರು ತುಂಬಿಸುವ ಯೋಜನೆಯಡಿ ತಾಲೂಕಿನ ಬೆಳಚಲವಾಡಿ ಕೆರೆಗೆ ನೀರು ಬಿಟ್ಟು ತುಂಬಿಸಲಾಗಿತ್ತು. ಅದರೆ ಕೆರೆಯ ಏರಿ ಶಿಥಿಲಗೊಂಡು ಒಡೆದ ಪರಿಣಾಮ ಅಪಾರ ಪ್ರಮಾಣದ ನೀರು ಪೋಲಾಗುವ ಜತೆಗೆ ಅಪಾರ ಪ್ರಮಾಣ ಬೆಳೆಯೂ ನಾಶವಾಗಿದೆ.
ಕೆರೆಯ ಸ್ಥಿತಿಗತಿ ಬಗ್ಗೆ ನೀರಾವರಿ ಇಲಾಖೆಯ ಅಧಿಕಾರಿಗಳು, ಇಂಜಿನಿಯರ್ ಗಳು ಪರಿಸೀಲಿಸದೆ ಇರುವುದು ಕೆರೆ ಏರಿ ಒಡೆದು ಈ ಅವಾಂತರ ಸಂಭವಿಸಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಹಲವು ವರ್ಷಗಳಿಂದ ಕೆರೆ ಸಂಪೂರ್ಣವಾಗಿ ತುಂಬಿರಲಿಲ್ಲ. ಆದರೆ ಕೆರೆ ತುಂಬಿಸುವ ಯೋಜನೆ ಜಾರಿಯಾದ ನಂತರ ಬೆಳಚಲವಾಡಿ ಕೆರೆಗೆ ನೀರು ಬಿಡಲಾಗುತಿತ್ತು ಕೋಡಿ ಎತ್ತರಿಸಿದ ಪರಿಣಾಮ ಒತ್ತಡ ಹೆಚ್ಚಾಗಿ ಏರಿ ಒಡೆದಿರುವ ಶಂಕೆ ವ್ಯಕ್ತವಾಗಿದೆ.
ಕೆರೆಯ ಕೋಡಿ ಒಡೆದ ಪರಿಣಾಮ ಕಮರಹಳ್ಳಿ ಕೆರೆಗೆ ನೀರು ಹರಿದರೂ ಮಾರ್ಗ ಮಧ್ಯೆ ಐವತ್ತು ಎಕೆರೆಗೂ ಹೆಚ್ಚು ಪ್ರದೇಶದಲ್ಲಿ ರೈತರು ಬೆಳೆದಿದ್ದ ಕಬ್ಬು, ಅರಿಶಿನ, ಜೋಳ ಹಾಗೂ ಜಾನುವಾರುಗಳಿಗೆ ಸಂಗ್ರಹಿಸಿದ್ದ ಹುಲ್ಲಿನ ಮೆದೆಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಇದರಿಂದ ಅಪಾರ ಪ್ರಮಾಣದ ನಷ್ಟವಾಗಿದೆ.
ಕೆರೆ ಏರಿ ಶಿಥಿಲವಾಗಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದರು ಮುಂಜಾಗ್ರತೆ ವಹಿಸಲಿಲ್ಲ. ಈಗ ದುರ್ಘಟನೆ ಸಂಭವಿಸಿದೆ. ಈ ಅವಗಢಕ್ಕೆ ಅಧಿಕಾರಿಗಳೇ ಕಾರಣ. ಇನ್ನು ರೈತರು ಬೆಳೆಸ ಬೆಳೆಗಳ ನಷ್ಟಕ್ಕೆ ಪರಿಹಾರ ನೀಡಬೆಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.