Vijayapatha – ವಿಜಯಪಥ
Saturday, November 2, 2024
NEWSಕೃಷಿನಮ್ಮಜಿಲ್ಲೆ

ಆಲೂಗಡ್ಡೆ ಬೇಸಾಯ ಮಾಡಲು ಸೂಕ್ತ ಸಮಯವಿದು: ಬೆಳೆ ಬಿತ್ತುವ ಮುನ್ನ ಇವುಗಳನ್ನ ಗಮನಿಸಬೇಕು

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಚಿಕ್ಕಮಗಳೂರು: ತೋಟಗಾರಿಕೆ ಇಲಾಖೆಯ ವತಿಯಿಂದ ರೈತರು ಆಲೂಗಡ್ಡೆ ಬೆಳೆಯನ್ನು ಬೀತ್ತುವುದರಿಂದ ಆಲೂಗಡ್ಡೆ ಬೇಸಾಯದಲ್ಲಿ ಗಮನಿಸಬೇಕಾದ ಅಂಶಗಳ ಬಗ್ಗೆ ಮಾಹಿತಿ ನೀಡಲಾಗಿದೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಭೂಮಿ ತಯಾರಿ: ಬಿತ್ತನೆ 15 ದಿವಸ ಮುಂಚಿತವಾಗಿ ಭೂಮಿ ಸಿದ್ದಗೊಳಿಸುವುದು. ಜೈವಿಕ ಗೊಬ್ಬರ ಮತ್ತು ಸಾವಯವ ಗೊಬ್ಬರದೊಂದಿಗೆ ಜೈವಿಕ ಶಿಲೀಂಧ್ರ ನಾಶಕಗಳ ಮಿಶ್ರ ಮಾಡಿ ಮಣ್ಣಿನಲ್ಲಿ ಬೆರೆಸುವುದು.

ಶೀತಲ ಗೃಹದಿಂದ ತೆಗೆದ ನಂತರ: 10 ರಿಂದ 15 ದಿವಸಗಳ ಕಾಲ ಮಂದ ಬೆಳಕಿನಲ್ಲಿ ಗಾಳಿಯಾಡುವ ಸ್ಥಳದಲ್ಲಿ ತೆಳ್ಳಗೆ ಹರಡಿ ಹದಗೊಳಿಸಬೇಕು.

ಬಿತ್ತನೆಗೆ ಯೋಗ್ಯವಾದ ಆಲೂಗಡ್ಡೆಯ ಲಕ್ಷಣಗಳು: ಸ್ವಲ್ಪ ಸುಕ್ಕುಗಟ್ಟಿದ್ದು ಮೃದುವಾಗಿರುವುದು. ಮೊಳಕೆ ಬರಲು ಪ್ರಾರಂಭವಾಗಿರುವುದು ನಂತರ ಕತ್ತರಿಸುವಾಗ ಕರಕ್ ಶಬ್ದಬಾರದಿರುವುದು.

ಬಿತ್ತನೆ ಬೀಜದ ಗಾತ್ರ: ಪ್ರತಿ ಬೀಜ 35-40 ಗ್ರಾಂ ಇರಬೇಕು. ಆಲೂಗಡ್ಡೆ ಗಾತ್ರ ದೊಡ್ಡದಾಗಿದ್ದಲ್ಲಿ ಉದ್ದವಾಗಿ ಕತ್ತರಿಸಬೇಕು. ಪ್ರತಿ ಹೋಳು 35-40 ಗ್ರಾಂ ಇರಬೇಕು. ಪ್ರತಿ ಬೀಜದಲ್ಲಿ ಕನಿಷ್ಟ 2-3 ಕಣ್ಣುಗಳು ಇರಬೇಕು.

ಬೀಜೋಪಚಾರ: ಮ್ಯಾಂಕೋಜೆಬ್ ದ್ರಾವಣದಲ್ಲಿ (4ಗ್ರಾಂ/ಲೀ) 10 ನಿಮಿಷ ನೆನೆಸುವುದು. ಸದರಿ ದ್ರಾವಣವನ್ನು ಒಂದು ಬಾರಿ ಉಪಯೋಗಿಸಬಹುದು.

ಬಿತ್ತನೆ ಮಾಡುವುದು: 60×20 ಸೇ.ಮೀ. ಅಂತರದಲ್ಲಿ ಬಿತ್ತನೆ ಮಾಡುವುದು. ಗೆಡ್ಡೆ ಬಿತ್ತಿದ ಸಾಲಿನಿಂದ ಮೂರು ಅಂಗುಲ ದೂರದಲ್ಲಿ 30:30:40 (ಓ.P.ಏ) ರಾಸಾಯನಿಕ ಗೊಬ್ಬರವನ್ನು ನೀಡುವುದು. ಒತ್ತು ನೇಗಿಲು ಹೊಡೆದು ದಿಂಡು ಏರಿಸುವುದು.

ಔಷಧ ಸಿಂಪರಣೆ: ಬಿತ್ತಿದ 20-25 ದಿನಗಳ ನಂತರ ಮ್ಯಾಂಕೊಜಿಬ್ (3 ಗ್ರಾಂ/ಲೀ ನೀರಿನಲ್ಲಿ) ಮತ್ತು ಡೈಮಿಥೋಯೆಟ್ (2.5 ಮೀ.ಲೀ./ಲೀ ನೀರಿನಲ್ಲಿ) ಅಥವಾ ಬಿತ್ತಿದ 40-45 ದಿನಗಳ ನಂತರ- ಮ್ಯಾಂಕೋಜಿಬ್ (3 ಗ್ರಾಂ/ಲೀ ನೀರಿನಲ್ಲಿ) ಮತ್ತು ಡೈಮಿಥೋಯೆಟ್ (1.7 ಮೀ.ಲೀ./ಲೀ ನೀರಿನಲ್ಲಿ ಅಥವಾ ಇಮಿಡೋಕ್ಲೋರೋಪೈಟ್ (0.5 ಮೀಲೀ/ಲೀ ನೀರಿನಲ್ಲಿ) ಸಿಂಪರಣೆ ಮಾಡಬಹುದು.

ಬಿತ್ತಿದ 50-60 ದಿನಗಳ ನಂತರ – ಸೈಮೋಕ್ಸಾನಿಲ್ = ಮ್ಯಾಂಕೋಜೆಬ್ (2.5 ಗ್ರಾ/ಲೀ ನೀರಿನಲ್ಲಿ) ಬಿತ್ತಿದ 70-80 ದಿನಗಳ ನಂತರ – ಮ್ಯಾಂಕೋಜೇಬ್ (2.5 ಗ್ರಾಂ/ಲೀ ನೀರಿನಲ್ಲಿ) ಮತ್ತು ನೀರಿನಲ್ಲಿ ಕರುವ ಗಂಧಕ (3 ಗ್ರಾಂ/ಲೀ ನೀರಿನಲ್ಲಿ) ಸಿಂಪರಣೆ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯಿತಿ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಛೇರಿಯ ದೂ.ಸಂ: 9845527625 ಲಕ್ಯಾ ಸಹಾಯಕ ತೋಟಗಾರಿಕ ಅಧಿಕಾರಿ ದೂ.ಸಂ: 9108948434, ಕಸಬಾ ದೂ.ಸಂ: 7899048055 ಹಾಗೂ ಅಂಬಳೆ ಮೊ.ಸಂ: 7892338387 ನ್ನು ಸಂಪರ್ಕಿಸುವಂತೆ ಜಿಲ್ಲಾ ಪಂಚಾಯಿತಿಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ