NEWSದೇಶ-ವಿದೇಶಲೇಖನಗಳು

80 ಸಾವಿರ ರೂ. ಇದ್ದ ಬ್ಯಾಗನ್ನು ಆಕೆ ಆಟೋದಲ್ಲಿ ಮರೆತುಹೋದಳು.! ಇಂದು ಪ್ರಾಮಾಣಿಕತೆ ಎಂಬುದು ಎಲ್ಲಿದೆ?

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ
  • ಶಾಲೆಗೆ ಕರೆಸಿ ಆತನಿಗೆ ರೂ.10 ಸಾವಿರ ನಗದನ್ನು ಬಹುಮಾನವಾಗಿ ನೀಡಿದರು
  • ಆತನ ಇಬ್ಬರು ಮಕ್ಕಳಿಗೆ ತನ್ನ ಶಾಲೆಯಲ್ಲೇ ಉಚಿತವಾಗಿ ಶಿಕ್ಷಣ ನೀಡುವುದಾಗಿ ಭಾಷೆ ಕೊಟ್ಟರು

80 ಸಾವಿರ ರೂ. ಇದ್ದ ಬ್ಯಾಗನ್ನು ಆಕೆ ಆಟೋದಲ್ಲಿ ಮರೆತುಹೋದಳು.! ಬಳಿಕ ಆಟೋ ಡ್ರೈವರ್ ತಂದುಕೊಟ್ಟರೆ ಆಕೆ ಏನು ಮಾಡಿದರು ಗೊತ್ತಾ?

ಇಂದು ಪ್ರಾಮಾಣಿಕತೆ ಎಂಬುದು ಎಲ್ಲಿದೆ?: ಬಹುತೇಕ ಮಂದಿ ಪ್ರಾಮಾಣಿಕವಾಗಿ ಇರುವುದಿಲ್ಲ. ಆ ರೀತಿ ಇರುವವರು ನೂರಕ್ಕೋ, ಕೋಟಿಗೋ ಒಬ್ಬರಿರುತ್ತಾರೆ. ಅಂತಹವರಲ್ಲಿ ಈಗ ನಾವು ಹೇಳಲಿರುವ ಈತನೂ ಇದ್ದಾನೆ.

ಆತನೊಬ್ಬ ಆಟೋಡ್ರೈವರ್. ಆದರೆ ಪ್ರಾಮಾಣಿಕತೆಗೆ ಹೆಸರುವಾಸಿ. ಮಹಿಳೆಯೊಬ್ಬರು ತನ್ನ ಆಟೋದಲ್ಲಿ ತನ್ನ ಬ್ಯಾಗ್ ಮರೆತಿದ್ದರೆ ಅದನ್ನು ಅವರಿಗೆ ಹಿಂತಿರುಗಿಸಿದ. ಆತನಿಗೆ ಆ ಮಹಿಳೆ ಊಹಿಸದಂತಹ ಬಹುಮಾನ ನೀಡಿದರು. ಇಷ್ಟಕ್ಕೂ ನಡೆದದ್ದೇನು ಏನೆಂದರೆ..

ಅದು ಮುಂಬೈನಲ್ಲಿನ ಚೆಂಚೂರ್ ಎಂಬ ಪ್ರದೇಶ. ಅಲ್ಲಿ ಸರಳಾ ನಂಬೂದರಿ (68) ಎಂಬ ಮಹಿಳೆ ಇಂಗ್ಲಿಷ್ ಮೀಡಿಯಂ ಶಾಲೆಯನ್ನು ನಡೆಸುತ್ತಿದ್ದಾರೆ. ಆದರೆ ಕಳೆದ ವರ್ಷ ಡಿಸೆಂಬರ್ 21ರಂದು ಆಕೆ ಮಧ್ಯಾಹ್ನ ಶಾಲೆ ಮುಗಿದ ಕೂಡಲೆ ಅಲ್ಲಿಂದ ಸ್ವಲ್ಪ ದೂರದಲ್ಲಿ ಇರುವ ಪಾರ್ಕ್ ಮಾಡಿರುವ ತನ್ನ ಕಾರಿನ ಬಳಿಗೆ ಹೋಗಲು ಆಟೋ ಒಂದನ್ನು ಕರೆದರು. ಅದರಲ್ಲಿ ಆಕೆ ಹೋದರು.

ಕಾರು ಬಳಿಗೆ ತಲುಪಿ ಅದನ್ನು ಓಡಿಸುತ್ತಾ ಸ್ವಲ್ಪ ದೂರ ಹೋದಾಗ ಆಗಲೇ ಆಕೆಗೆ ನೆನಪಾಗಿದ್ದು, ಆಟೋದಲ್ಲಿ ತಾನು ಬ್ಯಾಗ್ ಮರೆತಿದ್ದೇನೆಂದು. ಅದರಲ್ಲಿ ರೂ.80 ಸಾವಿರ ನಗದು, ತನ್ನ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳು, ಮನೆಯ ಬೀಗ, ಪಾನ್ ಕಾರ್ಡ್ ಇನ್ನಿತರೆ ಮುಖ್ಯವಾದ ಪತ್ರಗಳು, ನಗದು ಇತ್ತು. ಇದರಿಂದ ಒಮ್ಮೆಲೆ ಶಾಕ್ ಆದರು.

ಆ ರೀತಿ ತಾನು ಬ್ಯಾಗ್ ಆಟೋದಲ್ಲಿ ಮರೆತಿದ್ದೇನೆಂದು ಗ್ರಹಿಸಿದ ಸರಳಾ ಕೂಡಲೆ ತನ್ನನ್ನು ಆ ಆಟೋ ಡ್ರೈವರ್ ಇಳಿಸಿದ ಪ್ರದೇಶದ ಬಳಿಗೆ ಹೋದರು. ಅಲ್ಲಿ ಆಟೋ ಇಲ್ಲ. ಪಕ್ಕದಲ್ಲೇ ಇದ್ದ ಪಾನ್ ಶಾಪ್ ಆತನನ್ನು ಕೇಳಿದರು.

ಆದರೂ ಆಟೋ ಡ್ರೈವರ್ ವಿವರಗಳು ಗೊತ್ತಾಗಲಿಲ್ಲ. ಇದರಿಂದ ಆಕೆ ವಿಧಿಯಿಲ್ಲದೆ ಪೊಲೀಸರಿಗೆ ದೂರು ನೀಡೋಣ ಎಂದುಕೊಂಡರು. ಆದರೆ ಅಷ್ಟರಲ್ಲೇ ಆ ಆಟೋ ಡ್ರೈವರ್ ಬಂದು ಆಕೆಗೆ ಬ್ಯಾಗ್ ವಾಪಸ್ ಮಾಡಿ ಹೊರಟು ಹೋದರು.

ಆರಂಭದಲ್ಲಿ ಶಾಕ್ ಆದರೂ, ಆತನ ವಿವರಗಳನ್ನು ತಿಳಿದುಕೊಳ್ಳಲು ಹೋಗಲಿಲ್ಲ. ಬಳಿಕ ಆತನ ಬಗ್ಗೆ ತಿಳಿದುಕೊಳ್ಳಲು ತೀವ್ರವಾಗಿ ಪ್ರಯತ್ನಿಸಿದರು. ಕಡೆಗೆ ಹೇಗೋ ತಿಳಿದುಕೊಂಡರು. ಆತನ ಹೆಸರು ಅಮಿತ್ ಗುಪ್ತಾ ಎಂದು ಗೊತ್ತಾಯಿತು.

ಇದರಿಂದ ಆತನನ್ನು ಶಾಲೆಗೆ ಕರೆಸಿ ಆತನಿಗೆ ರೂ.10 ಸಾವಿರ ನಗದನ್ನು ಬಹುಮಾನವಾಗಿ ನೀಡಿದರು. ಬಳಿಕ ಆತನ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಎಂದು ತಿಳಿದು ಆತನ ಇಬ್ಬರು ಮಕ್ಕಳಿಗೆ ತನ್ನ ಶಾಲೆಯಲ್ಲೇ ಉಚಿತವಾಗಿ ಶಿಕ್ಷಣ ನೀಡುವುದಾಗಿ ಭಾಷೆ ಕೊಟ್ಟರು. ಅದೇ ರೀತಿ ಮಾಡಿದರು. ಏನೇ ಆಗಲಿ ಆ ಇಬ್ಬರು ಮಾಡಿದ್ದು ಒಳ್ಳೆಯ ಕೆಲಸ ಅಲ್ಲವೇ..?

ಸಂಗ್ರಹ
ಡಾ.ಈಶ್ವರಾನಂದ ಸ್ವಾಮೀಜಿ.

Leave a Reply

error: Content is protected !!
LATEST
ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ ಕೃಷ್ಣರಾಜಪೇಟೆ ತ್ರಿವೇಣಿ ಸಂಗಮದಲ್ಲಿ ಕಾರ್ತಿಕ ಮಾಸದ ಮೊದಲ ಸೋಮವಾರ ಅದ್ದೂರಿಯಾಗಿ ಜರುಗಿದ ಹುಲಿ ವಾಹನ ಉತ್ಸವ ತಿ.ನರಸೀಪುರ: ಭತ್ತದ ಬೆಂಬಲ ಬೆಲೆ ಜತೆಗೆ ಕ್ವಿಂಟಾಲ್‌ಗೆ 500 ರೂ. ಪ್ರೋತ್ಸಾಹ ಧನ ನೀಡಿ - ರೈತ ಮುಖಂಡರ ಆಗ್ರಹ ಅಪಾರ್ಟ್‌ಮೆಂಟ್‌ನಲ್ಲಿ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ ಹಾಸನಾಂಬೆ ದರ್ಶನ ಅಂತ್ಯ-ಹರಿದು ಬಂತ್ತು ₹9 ಕೋಟಿಗೂ ಅಧಿಕ ಆದಾಯ ನ.3ರಂದುಇಪಿಎಸ್ ಪಿಂಚಿಣಿದಾರರ ಮಾಸಿಕ ಸಭೆ: ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ KSRTCಯ ಸಮಸ್ತ ನೌಕರರ ಸಮಸ್ಯೆ, ಅಸಮಾಧಾನದ ನಡುವೆಯೂ ಕನ್ನಡ ರಾಜ್ಯೋತ್ಸವ ಆಚರಣೆ ತುಂಬಾ ವಿಜೃಂಭಣೆ