NEWSಕೃಷಿದೇಶ-ವಿದೇಶ

ದಾಸ್ತಾನು ಕುಸಿತ: ಈರುಳ್ಳಿ ರಫ್ತಿಗೆ ನಿಷೇಧ ಹೇರಿದ ಕೇಂದ್ರ ಸರ್ಕಾರ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ದಾಸ್ತಾನು ಪ್ರಮಾಣ ಗಣನೀಯವಾಗಿ ಕುಸಿದು, ಬೇಡಿಕೆ ತೀವ್ರ ಹೆಚ್ಚಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಈರುಳ್ಳಿ ರಫ್ತಿಗೆ ನಿಷೇಧ ಹೇರಿದೆ.

ಭಾರತದ ದಕ್ಷಿಣ ರಾಜ್ಯಗಳಾದ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಅತಿಯಾದ ಮಳೆಯಿಂದಾಗಿ ಬೇಸಿಗೆಯಲ್ಲಿ ಬಿತ್ತನೆ ಮಾಡಿದ ಬೆಳೆ ಹಾನಿಯಾಗಿದೆ ಮತ್ತು ಇತರ ರಾಜ್ಯಗಳಲ್ಲಿ ಕೊಯ್ಲು ವಿಳಂಬವಾಗಿರುವ ಕಾರಣ ಈರುಳ್ಳಿ ದಾಸ್ತಾನು ಕುಸಿದು. ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿ ಉಂಟಾಗಿರುವ ಈರುಳ್ಳಿ ಕೊರತೆ ಮತ್ತು ದರ ಏರಿಕೆ ಹಿನ್ನೆಲೆಯಲ್ಲಿ ರಫ್ತು ನಿಷೇಧಕ್ಕೆ ನಿರ್ಧರಿಸಲಾಗಿದೆ.

ಕತ್ತರಿಸಿದ ಮತ್ತು ಪುಡಿಯ ರೂಪದಲ್ಲಿರುವ ಈರುಳ್ಳಿ ಹೊರತುಪಡಿಸಿ, ಬೆಂಗಳೂರು ಗುಲಾಬಿ ಈರುಳ್ಳಿ, ಕೃಷ್ಣಾಪುರಂ ಈರುಳ್ಳಿ ಸೇರಿ ಎಲ್ಲ ಬಗೆಯ ಈರುಳ್ಳಿಯ ರಫ್ತನ್ನು ನಿಷೇಧಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರ ನಿರ್ದೇಶನಾಲಯ (ಡಿಜಿಎಫ್‌ಟಿ) ತಿಳಿಸಿದೆ.

ವಿದೇಶಾಂಗ ವ್ಯವಹಾರ ನಿರ್ದೇಶನಾಲಯ ತನ್ನ ವೆಬ್‌ಸೈಟ್‌ನಲ್ಲಿ ಈ ಕ್ಷಣದಿಂದಲೆ ಈರುಳ್ಳಿಯ ರಫ್ತನ್ನು ನಿಷೇಧಿಸಲಾಗಿದೆ ಎಂದು ಪ್ರಕಟಿಸಿದೆ. ರಫ್ತುದಾರರಿಗೆ ಯಾವುದೇ ರೀತಿಯ ಈರುಳ್ಳಿ ರಫ್ತು ಮಾಡದಂತೆ ಸೂಚನೆ ನೀಡಿದೆ. ಇದಕ್ಕೆ ಪ್ರಮುಖಕಾರಣ ಎಂದರೆ ದೇಶದಲ್ಲಿ ಈರುಳ್ಳಿಗೆ ಬೇಡಿಕೆ ಹೆಚ್ಚಾಗಿರುವುದು. ಹೌದು! ದಿನೇದಿನೆ ಈರುಳ್ಳಿ ದರ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೂಡಲೇ ಜಾರಿಗೆ ಬರುವಂತೆ ಈರುಳ್ಳಿ ರಫ್ತಿಗೆ ನಿಷೇಧ ಹೇರಿ, ಅಧಿಸೂಚನೆ ಹೊರಡಿಸಿದೆ.

ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಈರುಳ್ಳಿಯ ಬೆಲೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ ಭಾರಿ ಮಹತ್ವಪಡೆದುಕೊಂಡಿದೆ. ರಾಷ್ಟ್ರರಾಜಧಾನಿ ನ್ಯೂಡೆಲ್ಲಿಯಲ್ಲಿ ಈರುಳ್ಳಿ ಪ್ರತಿ ಕೆಜಿಗೆ ರೂ.40 ರಂತೆ ಮಾರಾಟವಾಗುತ್ತಿದೆ. ಇನ್ನೊಂದೆಡೆ ದೇಶದ ಇತರೆ ಭಾಗಗಳಲ್ಲಿ ಹಲವು ನಗರಗಳಲ್ಲಿ ಈರುಳ್ಳಿ ಪ್ರತಿ ಕೆಜಿ.ಗೆ 50 ರೂ. ನಂತೆ ಮಾರಾಟವಾಗುತ್ತಿದೆ.

ಬಾಂಗ್ಲಾದೇಶಕ್ಕೆ ಹೊಡೆತ?
ಭಾರತವು ವಿಶ್ವದ ಅತಿ ದೊಡ್ಡ ದಕ್ಷಿಣ ಏಷ್ಯಾದ ಅಡುಗೆಯ ಪ್ರಧಾನ ವಸ್ತುಈರುಳ್ಳಿ ರಫ್ತುದಾರ. ಬಾಂಗ್ಲಾದೇಶ, ನೇಪಾಳ, ಮಲೇಷ್ಯಾ ಮತ್ತು ಶ್ರೀಲಂಕಾ ಮುಂತಾದ ದೇಶಗಳು ಭಾರತೀಯ ಸಾಗಣೆಯನ್ನು ಅವಲಂಬಿಸಿವೆ. ಕಳೆದ ಏಪ್ರಿಲ್-ಜೂನ್ ಅವಧಿಯಲ್ಲಿ ಭಾರತ ಒಟ್ಟು 19.8 ಕೋಟಿ ಡಾಲರ್ ಮೌಲ್ಯದ ಈರುಳ್ಳಿಯನ್ನು ರಫ್ತು ಮಾಡಿತ್ತು. ಈಗ ಭಾರತ ಈರುಳ್ಳಿ ರಫ್ತನ್ನು ನಿಷೇಧಿಸಿರುವುದರಿಂದ ಭಾರಿ ಹೊಡೆತ ತಿನ್ನುವಂತಾಗಿದೆ.

ಆ ದೇಶಗಳಲ್ಲಿ ಪ್ರಮುಖವಾಗಿ ಬಾಂಗ್ಲಾದೇಶವೂ ಒಂದು. ಈರುಳ್ಳಿ ಆಮದಿನಲ್ಲಿ ಭಾರತವನ್ನೆ ನೆಚ್ಚಿಕೊಂಡಿರುವ ಬಾಂಗ್ಲಾದೇಶ ಅತೀ ಹೆಚ್ಚು ಅಂದರೆ 7-8 ಲಕ್ಷ ಟನ್‌ ವರ್ಷಕ್ಕೆ ಆಮದು ಮಾಡಿಕೊಳ್ಳುತ್ತದೆ. ಕಳೆದ ಹಲವು ತಿಂಗಳಿಂದ ಬಾಂಗ್ಲಾ ಈರುಳ್ಳಿ ಕೊರತೆಯನ್ನು ಎದುರಿಸುತ್ತಿದೆ. ಕಳೆದ ವರ್ಷ ಸಪ್ಟೆಂಬರ್‌ನಲ್ಲಿ ಭಾರತ ಬಾಂಗ್ಲಾದೇಶಕ್ಕೆ ಈರುಳ್ಳಿ ರಫ್ತು ನಿಲ್ಲಿಸಿತ್ತು. ಬಾಂಗ್ಲಾದೇಶ ಮಾತ್ರವಲ್ಲದೇ ಮಲೇಷಿಯಾ, ಯುಎಇ ಹಾಗೂ ಶ್ರೀಲಂಕಾ ರಾಷ್ಟ್ರಗಳಿಗೂ ಭಾರತ ಈರುಳ್ಳಿ ರಫ್ತು ಮಾಡುತ್ತದೆ.

Leave a Reply

error: Content is protected !!
LATEST
KSRTC ನಿರ್ದೇಶಕರ ಆದೇಶಕ್ಕೂ ಕಿಮ್ಮತ್ತಿಲ್ಲ: ಅಮಾನತು ತೆರವು ಮಾಡದೆ ಚಾಲಕನಿಗೆ ಮಾನಸಿಕ ಹಿಂಸೆ ಕೊಡುತ್ತಿರುವ ತುಮಕೂರು ... ಪ್ರಜ್ವಲ್ ರೇವಣ್ಣ ಪ್ರಕರಣ: ಅಶ್ಲೀಲ ವಿಡಿಯೋಗಳ ಹಂಚಿಕೆ ಅತ್ಯಂತ ಪಾಪ ಕೃತ್ಯ, ಸಂತ್ರಸ್ತೆಯರಿಗೆ ಅವಮಾನ- ಹೈಕೋರ್ಟ್ ವಿಶ್ವವಿಖ್ಯಾತ ಮೈಸೂರು ದಸರಾ ಗಂಡಾನೆಗಳ ನಡುವೆ ಕಿತ್ತಾಟ: ದಿಕ್ಕಾಪಾಲಾಗಿ ಓಡಿದ ಜನರು ಬನ್ನೂರು: ಬಸವನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಹೆಣ್ಣು ಚಿರತೆ ಸಾವು ಅ.3ರಿಂದ ಶಾಲೆಗಳಿಗೆ ದಸರಾ ರಜೆ: ಶಾಲಾ ಶಿಕ್ಷಣ ಇಲಾಖೆ ಆದೇಶ BMTC ನೌಕರರ ₹400 ಕೋಟಿ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮೀನಮೇಷ..!! KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್