NEWSನಮ್ಮಜಿಲ್ಲೆ

ಮಳೆಹಾನಿ ತಡೆಗೆ ಬಿಬಿಎಂಪಿ ಸಜ್ಜು: ಆಯುಕ್ತ ಮಂಜುನಾಥ್‌ ಪ್ರಸಾದ್‌

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು:  ಜೂನ್ ಮತ್ತು ಜುಲೈ ನಲ್ಲಿ ನಗರದಲ್ಲಿ ವಾಡಿಕೆಯಂತೆ 185 ಮಿ.ಮೀ. ಮಳೆ ಬೆಂಗಳೂರಲ್ಲಿ ಆಗಬೇಕು. ಆದರೆ, ಶೇ. 65 ರಷ್ಟು ಹೆಚ್ಚು ಮಳೆಯಾಗಿದ್ದು, ಆಗಸ್ಟ್ ತಿಂಗಳ ಒಂದು ವಾರದಲ್ಲಿ ಶೇ.28 ವಾಡಿಕೆಗಿಂತ ಕಡಿಮೆ ಮಳೆಯಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ತಿಳಿಸಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಳೆಯ ಮುಂಜಾಗ್ರತಾ ಕ್ರಮಗಳ ಸಿದ್ಧತೆ ಕುರಿತು ಶುಕ್ರವಾರ ಪಾಲಿಕೆ ಕೇಂದ್ರ ಕಚೇರಿ ಸಭಾಂಗಣ-01 ರಲ್ಲಿ ನಡೆದ ಪರಿಶೀಲನಾ ಸಭೆ  ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಳೆಗಾಲದ ವೇಳೆ ಗಾಳಿ ಬಂದು ಮರದ ಕೊಂಬೆ, ರೆಂಬೆಗಳು ಬೀಳುತ್ತವೆ. ಅದಕ್ಕಾಗಿ ಈಬಾರಿ ವಿಧಾನಸಭಾ ಕ್ಷೇತ್ರವಾರು ಮರಗಳ ನಿರ್ವಹಣೆಗೆ 28 ತಂಡ ನಿಯೋಜನೆ ಮಾಡಲಾಗಿದೆ. ಬಿದ್ದಿರುವ ಮರಗಳನ್ನು ತೆರವುಗೊಳಿಸುವ ವಾಹನಗಳಿಗೆ ಜಿಪಿಎಸ್ ಅಳವಡಿಸಿದ್ದು, ಟ್ರಾಕ್ ಮಾಡುವ ಸೌಲಭ್ಯವಿದೆ. ಎಲ್ಲೇ ದೂರು ಬಂದರೂ ಆ ತಂಡಗಳನ್ನು ಕೂಡಲೆ ಸ್ಥಳಕ್ಕೆ ಕಳಿಸಲಾಗುತ್ತದೆ. ಅವಶ್ಯಕ ಸಿಬ್ಬಂದಿ ಹಾಗೂ ಸಲಕರಣೆಗಳನ್ನು ಕೊಡಲಾಗಿದೆ. ಪಾಲಿಕೆ 9 ಕಡೆ ಶಾಸ್ವತ ನಿಯಂತ್ರಣ ಕೊಠಡಿಗಳು ಹಾಗೂ ವಲಯದ ಪ್ರತಿ ಉಪವಿಭಾಗ ಕಚೇರಿಗಳಲ್ಲಿ 63 ಕಡೆ ತಾತ್ಕಾಲಿಕ ನಿಯಂತ್ರಣ ಕೊಠಡಿಗಳನ್ನು  ಸ್ಥಾಪಿಸಲಾಗಿದೆ ಎಂದರು.

ನಗರದಲ್ಲಿ 842 ಕಿ.ಮೀ. ಉದ್ದದ ರಾಜಕಾಲುವೆಯಲ್ಲಿ 389 ಕಿ.ಮೀಟರ್ ರಾಜಕಾಲುವೆಯನ್ನು ಕಾಂಕ್ರೀಟ್ ಮಾಡಿ ಅಭಿವೃದ್ಧಿ ಪಡಿಸಲಾಗಿದೆ. ಉಳಿದೆಲ್ಲವೂ ಕಚ್ಚಾ ರಾಜಕಾಲುವೆಗಳಿವೆ. ನಗರದಲ್ಲಿ ಹೆಚ್ಚು ಮಳೆಯಾದರೆ ಪ್ರವಾಹ ಸ್ಥಿತಿ ಉಂಟಾಗುವ 209 ಪ್ರದೇಗಳನ್ನು ಗುರುತಿಸಲಾಗಿದ್ದು, 153 ಸೂಕ್ಷ್ಮ, 56 ಅತಿ ಸೂಕ್ಷ್ಮ ಪ್ರದೇಶಗಳು ಎಂದು ಪರಿಗಣಿಸಲಾಗಿದೆ. ಈ ಜಾಗಗಳಲ್ಲಿ ಆಗಬೇಕಾದ ಅತಿಮುಖ್ಯ ಕಾಮಗಾರಿಗಳನ್ನು ಮಾಡಲಾಗಿದೆ. ಅಲ್ಲದೆ ಪ್ರವಾಹ ಉಂಟಾಗುವ ಬಗ್ಗೆ ಮುಂಚಿತವಾಗಿ ಮಾಹಿತಿ ತಿಳಿಯಲು ಈಗಾಗಕೇ 28 ಕಡೆ ಸೆನ್ಸಾರ್ ಗಳನ್ನು ಅಳವಡಿಸಲಾಗಿದ್ದು, ಉಳಿದ ಕಡೆಯೂ ಅಳವಡಿಸುವಂತೆ ಸೂಚನೆ ನೀಡಲಾಗಿದೆ.  ಇದರಿಂದ ಪ್ರವಾಹ ಪರಿಸ್ಥಿತಿ ಉಂಟಾಗುವುದನ್ನು ತಿಳಿಸಿ, ಅಲ್ಲಿನ ಸ್ಥಳಿಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲು ಸುಲಭವಾಗಲಿದೆ ಎಂದರು.

ಮಳೆಗಾಲದ ವೇಳೆ ತಗ್ಗು ಪ್ರದೇಶಕ್ಕೆ ನೀರು ನುಗ್ಗಿ ಸಮಸ್ಯೆಗಳಾಗುತ್ತದೆ. ಈ ಪೈಕಿ ಕಂದಾಯ ಇಲಾಖೆಯಿಂದ 50 ಕೋಟಿ ರೂ. ಮಿಟಿಗೇಷನ್ ಫಂಡ್ ಅನ್ನು ಪಾಲಿಕೆಗೆ ನೀಡಿದ್ದೇವೆ. ಅದರಲ್ಲಿ ಬೆಂಗಳೂರಿನ ಪ್ರತೀ ನಿಮಿಷ ಮಳೆಯ ಅಂಕಿ ಅಂಶ, ಯಾವ ಪ್ರದೇಶದಲ್ಲಿ ಮಳೆ ಹೆಚ್ಚಾಗಬಹುದು, ಪ್ರವಾಹ ಭೀತಿ ಉಂಟಾಗಬಹುದು ಎಂಬುದನ್ನು ತಿಳಿದುಕೊಳ್ಳಲು ‘ರೇಡಾರ್’ ಅಳವಡಿಸಲು 15 ಕೋಟಿ ರೂ. ವ್ಯಯವಾಗುವ ಅಂದಾಜಿದ್ದು, ಅದಕ್ಕೆ ಅನುಮೋದನೆ ನೀಡಲಾಗಿದೆ. ಉಳಿದ 35 ಕೋಟಿ ರೂ. ವೆಚ್ಚದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗದಂತೆ ಯೋಜನೆ ರೂಪಿಸಲು ಇಂಜಿನಿಯರ್ ಗಳಿಗೆ ತಿಳಿಸಲಾಗಿದೆ. ಇದು ಕೇಂದ್ರ ಸರ್ಕಾರದ ಅನುದಾನ ಆಗಿದ್ದು, ಪಾಲಿಕೆಯು ಯೋಜನೆ ರೂಪಿಸಬೇಕಾಗಿದೆ ಎಂದು ತಿಳಿಸಿದರು.

ನಗರದಲ್ಲಿ  1,400 ಕಿ.ಮೀ. ಪ್ರಮುಖ ರಸ್ತೆಗಳಿದ್ದು, ಅದರ ನಿರ್ವಹಣೆಯ ಜವಾಬ್ದಾರಿಯನ್ನು ಆಯಾ ವಲಯಗಳಿಗೆ ನೀಡಲಾಗಿತ್ತು. ಆದರೆ, ಪ್ರಮುಖ ರಸ್ತೆಗಳು ಎರಡು ವಲಯಗಳಿಗೆ ಬರುತ್ತಿದ್ದ ಕಾರಣ ಮತ್ತೆ ಅದನ್ನು ಪಾಲಿಕೆ ರಸ್ತೆ ಮೂಲಭೂತ ಸೌಕರ್ಯದ ವಿಭಾಗಕ್ಕೇ ನೀಡಲಾಗಿದೆ.

ಮಳೆಗಾದಲ್ಲಿ ರಸ್ತೆಯಲ್ಲಿ ಗುಂಡಿಗಳು ಬೀಳುವ ಸಂಭವವಿದ್ದು, ಪಾಲಿಕೆ ವತಿಯಿಂದ ಸ್ಥಾಪಿಸಿರುವ ಹಾಟ್ ಮಿಕ್ಸ್ ಪ್ಲಾಂಟ್(ಡಾಂಬರು ಮಿಶ್ರಣ ಘಟಕ)ನಿಂದ ಪ್ರಮುಖ ರಸ್ತೆಗಳಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುತ್ತದೆ. ಹೊಸ ರಸ್ತೆಗಳ ನಿರ್ವಹಣೆಯನ್ನು ದೋಶ ಮುಕ್ತ ಅವಧಿ(ಡಿಎಲ್‌ಪಿ) ಅಡಿ ಗುತ್ತಿಗೆದಾರರೇ ಮುಚ್ಚಲಿದ್ದಾರೆ.

ಪಾಲಿಕೆ 198 ವಾರ್ಡ್‌ಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಈಗಾಗಲೇ ಗುತ್ತಿಗೆದಾರರನ್ನು ನಿಯೋಜನೆ ಮಾಡಲಾಗಿದ್ದು, ಎಲ್ಲಾದರು ಗುಂಡಿಗಳು ಬಿದ್ದಿದ್ದರೆ ಅವರೇ ಗುಂಡಿಗಳನ್ನು ಮುಚ್ಚಲಿದ್ದಾರೆ. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಆಗಸ್ಟ್ ತಿಂಗಳಲ್ಲಿ ಮಳೆಯಾಗುವ ಪ್ರಮಾಣ ಕಡೆಯಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದ್ದು, ಕೂಡಲೆ ರಸ್ತೆ ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ವಿಶೇಷ ಆಯುಕ್ತ (ಅರಣ್ಯ) ಜಿ.ಮಂಜುನಾಥ್, ವಿಶೇಷ ಆಯುಕ್ತ (ಯೋಜನೆ)   ರಾಜೇಂದ್ರ ಚೋಳನ್, ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಎಂ.ಆರ್.ವೆಂಕಟೇಶ್, ರಸ್ತೆ ಮೂಲಭೂತ ಸೌಕರ್ಯ ಹಾಗೂ ರಾಜಕಾಲುವೆ ವಿಭಾಗದ ಮುಖ್ಯ ಅಭಿಯಂತರ  ಪ್ರಹ್ಲಾದ್, ಯೋಜನಾ ವಿಭಾಗದ ಮುಖ್ಯ ಅಭಿಯಂತರ  ರಮೇಶ್, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ(KSNDMC) ನಿರ್ದೇಶಕ  ಡಾ. ಶ್ರೀನಿವಾಸ್ ರೆಡ್ಡಿ, ಎಲ್ಲಾ ವಲಯ ಮುಖ್ಯ ಅಭಿಯಂತರರು ಹಾಗೂ ಇತರೆ ಮಳೆ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

error: Content is protected !!
LATEST
KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ