ಬೆಂಗಳೂರು: ಬೆಡ್ ಖಾಲಿ ಎಂದು 9 ಆಸ್ಪತ್ರೆಗಳನ್ನು ಸುತ್ತಿ ಆಂಬುಲೆನ್ಸ್‌ನಲ್ಲೇ ಇರಿಸಿದ್ದ ಕೊರೊನಾ ನೆಗಿಟಿವ್ ಬಂದ ವ್ಯಕ್ತಿ ಸೂಕ್ತ ಚಿಕಿತ್ಸೆ ಸಿಗದೆ ಪ್ರಾಣಬಿಟ್ಟಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮುನೇಶ್ವರ ಬ್ಲಾಕ್‌ನ 42 ವರ್ಷದ ವ್ಯಕ್ತಿ ಮೃತರು. ಮೂರು ದಿನದ ಹಿಂದೆ ಈ ವ್ಯಕ್ತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಆತನ ಗಂಟಲು ದ್ರವವನ್ನು ಕೋವಿಡ್-19 ಪರೀಕ್ಷೆಗೆ ಕಳುಹಿಸಲಾಗಿತ್ತು. ಆ ವೇಳೆ ಆಸ್ಪತ್ರೆಯ ವೈದ್ಯರು ಒಂದು ಶರತ್ತು ಹಾಕಿದ್ದರು. ಒಂದು ವೇಳೆ ಕೊರೊನಾ ಪಾಸಿಟಿವ್ ಬಂದರೆ ಆ ವರದಿಯನ್ನು ನಿಮ್ಮ ಕೈಗೆ ಕೊಡೋದಿಲ್ಲ ನಾವು ಬಿಬಿಎಂಪಿ ಆರೋಗ್ಯಾಧಿಕಾರಿಗಳಿಗೆ ಕೊಡುತ್ತೇವೆ ಎಂದು ಅದರಂತೆ ರೀಪೋರ್ಟ್ ನೆಗೆಟಿವ್ ಬಂದಿದೆ.
ಆ ವರದಿಯನ್ನು ಈ ನಡುವೆ ಮೂರುದಿನಗಳಿಂದ ಮನೆಯಲ್ಲೇ ಇಟ್ಟುಕೊಳ್ಳಲಾಗಿತ್ತು. ನಂತರ ಅವರ ಆರೋಗ್ಯದಲ್ಲಿ ತೀವ್ರ ಸಮಸ್ಯೆಯಾದ್ದರಿಂದ ಆಂಬುಲೆನ್ಸ್ ಮೂಲಕ ಕರೆ ತರಲಾಯಿತು. ಆದರೆ, ಬೆಡ್ ಖಾಲಿಯಿಲ್ಲ ಎಂದು ಅವರನ್ನು ಆಂಬುಲೆನ್ಸ್‌ನಲ್ಲೇ ಇರಿಸಲಾಗಿತ್ತು.