NEWSಉದ್ಯೋಗ

ಶೇ.50ರಷ್ಟು ಸಾರಿಗೆ ನೌಕರರಿಗೆ 4ತಿಂಗಳು ಕಡ್ಡಾಯ ರಜೆ ನೀಡಲು ಮುಂದಾದ ಇಲಾಖೆ

ಸ್ಪಷ್ಟನೆ ಕೇಳಿದರೆ ಉಡಾಫೆಯಿಂದ ವರ್ತಿಸಿದ ಬಿಎಂಟಿಸಿ  ಮುಖ್ಯ ಸಂಚಾರ ವ್ಯವಸ್ಥಾಪಕ ರಾಜೇಶ್‌

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೊರೊನಾ ವಿಶ್ವಮಾರಿಗೆ ತತ್ತರಿಸಿರುವ  ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳು  ಶೇ.50ರಷ್ಟು ನೌಕರರನ್ನು ನಾಲ್ಕು ತಿಂಗಳು ವೇತನ ರಹಿತ  ಕಡ್ಡಾಯ ರಜೆ ಮೇಲೆ ಕಳುಹಿಸಲು ನಾಲ್ಕು ನಿಗಮಗಳು ಮುಂದಾಗಿವೆ.

ಈ ಸಂಬಂಧ ಪ್ರಸ್ತಾವನೆಯನ್ನು ಸಾರಿಗೆ ಇಲಾಖೆ ಸರ್ಕಾರಕ್ಕೆ ಸಲ್ಲಿಸಿದ್ದು, ಇದರಿಂದ ಸುಮಾರ 60 ಸಾವಿರ ನೌಕರರಿಗೆ ಕಡ್ಡಾಯ ರಜೆ ನೀಡುವುದಾಗಿ ತಿಳಿಸಿದೆ. ಇದರಲ್ಲಿ ಭದ್ರತ ಸಿಬ್ಬಂದಿ ಸೇರಿ ಹೊರಗುತ್ತಿಗೆ ನೌಕರರನ್ನು ಕೈಬಿಡಲು ಅಂದರೆ ನಾಲ್ಕು ತಿಂಗಳವರೆಗೆ ರಜೆ ಮೇಲೆ ಕಳುಹಿಸಲು ನಿರ್ಧಿಸಿದೆ.

ಇನ್ನು ಸಾರಿಗೆ ನಾಲ್ಕು ನಿಗಮಗಳ ನೌಕರರಿಗೆ ಸರಿಸುಮಾರು 656 ಕೋಟಿ ರೂ. ವೇತನವನ್ನು ತಿಂಗಳಿಗೆ ನಿಗಮ ಭರಿಸುತ್ತಿತ್ತು. ಆದರೆ ಕೊರೊನಾ ಸೋಂಕಿನ ಭಯದಲ್ಲಿ ಪ್ರಯಾಣಿಕರು ಬಸ್‌ಗಳಲ್ಲಿ ಪ್ರಯಾಣಿಸುವಲ್ಲಿ ಹಿಂದೆಟು ಹಾಕಿದ್ದರಿಂದ ನಷ್ಟದಲ್ಲೇ ಇಂದಿಗೂ ಕೂಡ ಸಂಚರಿಸುತ್ತಿವೆ. ಹೀಗಾಗಿ ಸರ್ಕಾರ ತನ್ನ ಬೊಕ್ಕಸದಿಂದ ನೌಕರರಿಗೆ ವೇತನವನ್ನು ನೀಡಲಾಗುತ್ತಿತ್ತು.

ಇನ್ನು ಮುಂದೆ ಸರ್ಕಾರದ ಖಜಾನೆಯಲ್ಲೂ ಹಣವಿಲ್ಲದಿರುವುದರಿಂದ ಸಾರಿಗೆ ನೌಕರರಿಗೆ ವೇತನ ನೀಡಲು ಕಷ್ಟಸಾಧ್ಯವಾಗುತ್ತಿರುವ ಹಿನ್ನೆಲೆಯಲ್ಲಿ ನೌಕರರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲು ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಒಂದು ವೇಳೆ ಇದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದರೆ 60 ಸಾವಿರ ನೌಕರರು ವೇತನ ರಹಿತ ಕಡ್ಡಾಯ ರಜೆ ತೆಗೆದುಕೊಳ್ಳುವುದು ಅನಿವಾರ್ಯವಾಗಲಿದೆ.

ಬಿಎಂಟಿಸಿ   ಮುಖ್ಯ ಸಂಚಾರ ವ್ಯವಸ್ಥಾಪಕರ ಉಡಾಫೆ ಹೇಳಿಕೆ
ಈ ಬಗ್ಗೆ  ‌ಸ್ಪಷ್ಟನೆ ಕೇಳಲು ವಿಜಯಪಥ  ನ್ಯೂಸ್‌‌ ಡೆಸ್ಕ್‌ಯಿಂದ ದೂರವಾಣಿ ಕರೆ ಮಾಡಿದರೆ ಕರೆ ಸ್ವೀಕರಿಸಿದ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿರುವ  ಮುಖ್ಯ ಸಂಚಾರ ವ್ಯವಸ್ಥಾಪಕ (CTM) ರಾಜೇಶ್‌ ಅವರು ಈ ಬಗ್ಗೆ  ಸ್ಪಷ್ಟನೆ ನೀಡಲು ನಿರಾಕರಿಸಿದರು. ಅಲ್ಲದೆ ಇದನ್ನು ನಿಮಗೆ ಹೇಳಿದವರನ್ನೇ ಕೇಳಿ ಈ ರೀತಿ ಯಾರು ಹೇಳಿದರು ಎಂದು ನಮ್ಮನ್ನೇ ಪ್ರಶ್ನಿಸಿದ್ದು ಅಲ್ಲದೆ ಉಡಾಫೆ ಉತ್ತರನೀಡಿ  ಫೋನ್‌ ಕರೆಯನ್ನು ಸ್ಥಗಿತಗೊಳಿಸಿದರು. ಅದರೆ ಈ ಅಧಿಕಾರಿ ಒಂದು ಮಾಧ್ಯಮಕ್ಕೆ ಸರಿಯಾದ ಹೇಳಿಕೆ ಕೊಡದೆ ಒಂದು ರೀತಿ ಉಡಾಫೆ ಉತ್ತರ ನೀಡುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ.

 

 

1 Comment

Leave a Reply

error: Content is protected !!
LATEST
KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ