ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಹಾಮಾರಿ ತನ್ನ ಅಟ್ಟಹಾಸವನ್ನು ಮರೆತ್ತಿರುವುದರಿಂದ ತತ್ತರಿಸಿರುವ ಸರ್ಕಾರ ರಾತ್ರಿ 8ಗಂಟೆಯಿಂದ ನಿತ್ಯ ಜನರ ಓಡಾಟಕ್ಕೆ ಕಡಿವಾಣ ಹಾಕುವ ನಿರ್ಧಾರಕ್ಕೆ ಸಿಎಂ ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ನಿನ್ನೆ ನಡೆದ ಸಭೆಯಲ್ಲಿ ಬರಲಾಗಿದೆ.
ಈ ಹಿನ್ನೆಲೆಯಲ್ಲಿ ನಾಳೆ (ಸೋಮವಾರ)ಯಿಂದ ಜಾರಿಗೆ ಬರುವಂತೆ ಆಟೋ, ಕ್ಯಾಬ್, ಕಾರು, ಬಿಎಂಟಿಸಿ ಬಸ್‌ಗಳ ಓಡಾಟವನ್ನು ರಾತ್ರಿ 8ಗಂಟೆ ನಂತರ ರಸ್ತೆಗೀಲಿಸದಂತೆ ಸೂಚನೆ ನೀಡಿದೆ.
ಇನ್ನು ನೈಟ್ ಕರ್ಫ್ಯೂ ಮತ್ತು ಸರ್ಕಾರಿ ನೌಕರರಿಗೆ ವಾರದಲ್ಲಿ 5 ದಿನ ಕೆಲಸ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಅದರಂತೆ ನಾಳೆಯಿಂದ ರಾತ್ರಿ 8ರಿಂದ ಬೆಳಗ್ಗೆ 5 ಗಂಟೆಯವರೆಗೂ ನೈಟ್ ಕರ್ಫ್ಯೂ, ಜುಲೈ 5ರಿಂದ ಪ್ರತಿ ಭಾನುವಾರ ಲಾಕ್ ಡೌನ್ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಜುಲೈ 5ರಿಂದ ಭಾನುವಾರ ಲಾಕ್ ಡೌನ್ ವೇಳೆ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಬಸ್, ಟ್ಯಾಕ್ಸಿ ಸೇರಿದಂತೆ ಎಲ್ಲಾ ಸೇವೆಗಳು ಬಂದ್ ಆಗಲಿವೆ.
ಅದರಂತೆ ಸರ್ಕಾರಿ ನೌಕರರೂ ಕೊರೊನಾಗೆ ತುತ್ತಾಗುತ್ತಿರುವುದರಿಂದ ಮುಂದಿನ ವಾರದಿಂದ 5 ದಿನ ಮಾತ್ರ ಕಚೇರಿಗಳಲ್ಲಿ ನೌಕರರು ಕೆಲಸ ನಿರ್ವಹಿಸುವಂತೆ ಆದೇಶ ಹೊರಡಿಸಿದ್ದು, ಒಟ್ಟಾರೆಯಾಗಿ ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ಸರ್ಕಾರ ಸಹಾಸ ಪಡುತ್ತಿದೆ.
Idu bittu bere innyava nirdaravanadaru tegedu kolli istakke saladu