ಬೆಂಗಳೂರು: ಹನುಮಂತನಗರದ ಗವಿಪುರಂನಲ್ಲಿ ಶುಕ್ರವಾರ ಮೃತಪಟ್ಟ ಹನುಮಂತರಾಜು ಅವರ ಮನೆಗೆ ಶನಿವಾರ ಭೇಟಿ ನೀಡಿದ ಬಿಬಿಎಂಪಿ ಆಯುಕ್ತ ಅನೀಲ್ ಕುಮಾರ್ ಕುಟಂಬಸ್ಥರಿಗೆ ಸ್ವಾಂತನ ಹೇಳಿದರು.
ನಿನ್ನೆ ಕೊರೊನಾ ಸೋಂಕಿನಿಂದ ಬಳಲಿ ರಸ್ತೆಯಲ್ಲೇ ಮೃತಪಟ್ಟಿದ್ದು. ಮಳೆಯಲ್ಲೇ ಅವರ ಮೃತದೇಹ ಬಿದ್ದಿತ್ತು. ವಿಷಯ ತಿಳಿದ ಸುಮಾರು ಗಂಟೆನಂತರ ಬಿಬಿಎಂಪಿ ನೌಕರರು ಬಂದು ಮೃತದೇಹವನ್ನು ತೆಗೆದುಕೊಂಡು ಹೋಗಿದ್ದರು.
ಕೊರೊನಾ ಪಾಸಿಟಿವ್ ಇದ್ದರು ಅವರಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ಬಿಬಿಎಂಪಿ ವಿಫಲವಾಗಿತ್ತು. ಇಂತಹ ಘಟನೆ ನಡೆದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಆಯುಕ್ತರು ಬಿಬಿಎಂಪಿ ಅಧಿಕಾರಿಗಳ ಪರವಾಗಿ ಕ್ಷಮೆ ಕೋರುತ್ತಿರುವುದಾಗಿ ತಿಳಿಸಿದರು.