NEWSಆರೋಗ್ಯನಮ್ಮರಾಜ್ಯ

ಬಿಎಂಟಿಸಿ ನಿರ್ವಾಹಕನಲ್ಲಿ ಕೊರೊನಾ ಶಂಕೆ

ಸಾರಿಗೆ ಸಂಸ್ಥೆಯನ್ನು ಆವರಿಸಿಕೊಳ್ಳುತ್ತಿದೆಯೇ ವಿಶ್ವಮಾರಿ ಎಂಬ ಆತಂಕದಲ್ಲಿ ನೌಕರರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯನ್ನು ಕಾಡುತ್ತಿದೆಯೇ ಕೊರೊನಾ ಸೋಂಕು. ಇದಕ್ಕೆ ಉತ್ತರ ಎಂಬಂತೆ ಹೊಸಕೋಟೆಯ ಬಿಎಂಟಿಸಿ ಡಿಪೋ 24ರ ನಿರ್ವಾಹಕರೊಬ್ಬರನ್ನು ಕೊರೊನಾ ಸೋಂಕು ತಗುಲಿದೆ ಎಂದು ಶಂಕೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ತಡರಾತ್ರಿ ಕೊರೊನಾ ಸೋಂಕು ಶಂಕೆ ಹಿನ್ನೆಲೆಯಲ್ಲಿ ನಿರ್ವಾಹಕರನ್ನು ಆಸ್ಪತ್ರೆಗೆ ದಾಖಲು ಮಾಡಿ ಅವರ ರಕ್ತ ಮತ್ತು ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ಇನ್ನು ಇದರಿಂದ ಆತಂಕಗೊಂಡಿರುವ ಬಿಎಂಟಿಸಿಯ ಎಲ್ಲಾ ಡಿಪೋಗಳ ಚಾಲಕರು ಮತ್ತು ನಿರ್ವಾಹಕರು ನಮ್ಮ ಸ್ಥಿತಿ ಏನು ಎಂಬ ಭಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

ಈ ನಿರ್ವಾಹಕ ಕಳೆದ ಮೇ 30ರಿಂದ ಕರ್ತವ್ಯಕ್ಕೆ ಹಾಜರಾಗಿದ್ದರು. ಇವರು ನಿರ್ವಹಿಸಿದ ರೂಟ್‌ನಲ್ಲಿ ನೂರಾರು ಮಂದಿ ಪ್ರಯಾಣಿಕರು ಈಗಾಗಲೇ ಸಂಚರಿಸಿದ್ದು ಅವರಲ್ಲೂ ಕೊರೊನಾ ಭೀತಿ ಆವರಿಸಿದೆ. ಆದರೆ ಆ ಪ್ರಯಾಣಿಕರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಹೀಗಾಗಿ ಒಂದು ವೇಳೆ ನಿರ್ವಾಹಕನಲ್ಲಿ ಸೋಂಕು ಪಾಸಿಟಿವ್‌ ಎಂದಾದರೆ ಇದರಿಂದ ನೂರಾರು ಮಂದಿ ಸೋಂಕಿಗೆ ಒಳಗಾಗುವುದು ನಿಶ್ಚಿತ.

ಇನ್ನು ನಿರ್ವಾಹನಕನ ಜತೆ ಚಾಲಕರು ಪ್ರಥಮ ಸಂಪರ್ಕಕ್ಕೆ ಬಂದಿರುತ್ತಾರೆ. ಅಲ್ಲದೆ ಡಿಪೋನಲ್ಲಿ ಕ್ಯಾಶ್‌ ಕೌಂಟರ್‌ನಿಂದ ಹಿಡಿದು ಎಲ್ಲೆಡೆ ನಿವಾರ್ಹಕರು ಓಡಾಡಿರುತ್ತಾರೆ. ಹೀಗಾಗಿ ಇಡೀ ಡಿಪೋನಲ್ಲೇ ಕೊರೊನಾ ಅಟ್ಟಹಾಸ ಮೆರೆಯಬಹುದು. ಈ ಬಗ್ಗೆ ಡಿಪೋ ವ್ಯವಸ್ಥಾಪಕರು ಇಂದಿನಿಂದಲೇ ಎಚ್ಚರ ವಹಿಸುವುದು ಮುಖ್ಯವಾಗಿದೆ.  ಒಂದು ವೇಳೆ ನಿರ್ವಾಹಕರಲ್ಲಿ ಸೋಂಕು ದೃಢಪಟ್ಟರೆ ಇಡೀ ಡಿಪೋವನ್ನೇ ಸೀಲ್ ಡೌನ್ ಮಾಡಬೇಕಾಗಿ ಬರಬಹುದು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

ಬಹುತೇಕ ಡಿಪೋಗಳಲ್ಲೂ ಸಾಮಾಜಿಕ ಅಂತರವಿಲ್ಲ
ಬಹುತೇಕ ಬಿಎಂಟಿಸಿ ಡಿಪೊಗಳಲ್ಲಿ ಚಾಲಕರು ಮತ್ತು ನಿರ್ವಾಹಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಗುಂಪುಗೂಡಿ,  ಹೆಗಲ ಮೇಲೆ ಕೈ ಹಾಕಿಕೊಂಡು   ಓಡಾಡುವುದು ಸಾಮಾನ್ಯವಾಗಿದೆ. ಹೀಗಾಗಿ ಡಿಪೊಗಳಲ್ಲಿ ಸಾಮಾಜಿಕ ಅಂತರ ಎಂಬುದು ಮಾತಿಗಷ್ಟೇ ಉಳಿದಿದೆ.

ಇನ್ನು ಡಿಪೋಗೆ ಕರ್ತವ್ಯಕ್ಕಾಗಿ ಮುಂಜಾನೆ ಐದೂವರೆಯಿಂದ ಆರು ಗಂಟೆಯೊಳಗೆ ಬಂದವರನ್ನು ಸೀಮಿತ ರೂಟ್‌ಗಳಲ್ಲಿ ಬಸ್‌ಗಳು ಓಡಾಡುತ್ತಿರುವುದರಿಂದ ಮಧ್ಯಾಹ್ನ ಎರಡು ಗಂಟೆಯವರೆಗೂ ನೂರಾರು ಚಾಲಕರು ಮತ್ತು ನಿರ್ವಾಹಕರನ್ನು ನಿಲ್ಲಿಸುತ್ತಿದ್ದಾರೆ. ಹೀಗೆ ಒಂದೆಡೆ ಚಾಲಕ ಮತ್ತು ನಿರ್ವಾಹಕರು ಸೇರುತ್ತಿರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸಾಧ್ಯವಾಗದೆ ಕೊರೊನಾ ಭೀತಿ ಆವರಿಸುತ್ತಿದೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

ಬೆಳಗ್ಗೆ ಡಿಪೋಗೆ ಬರುವ ಚಾಲಕ ಮತ್ತು ನಿರ್ವಾಹಕರನ್ನು ರೂಟ್‌ಮೇಲೆ ಕಳುಹಿಸಿದರೆ ಡಿಪೋಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬಹುದು. ಆದರೆ ಸಂಸ್ಥೆ ಅಂದುಕೊಂಡ ಮಟ್ಟಕ್ಕೆ ಪ್ರಯಾಣಿಕರು ಬಾರದಿರುವ ಹಿನ್ನೆಲೆಯಲ್ಲಿ  ಕೆಲವು ರೂಟ್‌ಗಳಿಗೆ ಮಾತ್ರ ಬಸ್‌ಗಳನ್ನು ಕಳುಹಿಸುತ್ತಿದ್ದು, ಇನ್ನು ನೂರಾರು ಚಾಲಕ ಮತ್ತು ನಿರ್ವಾಹಕರು ಕೆಲಸದ ಅವಧಿ ಅಂದರೆ  8 ಗಂಟೆಯೂ ಡಿಪೋನಲ್ಲೇ ಇರಬೇಕು ಎಂದು ಡಿಪೋ ವ್ಯವಸ್ಥಾಪಕರು ತಾಕೀತು ಮಾಡಿರುವುದರಿಂದ ಎಲ್ಲರೂ ಒಂದೆಡೆ ಸೇರುತ್ತಿದ್ದಾರೆ.

ಹೀಗಾಗಿ ಸಾಮಾಜಿಕ ಅಂತರ ಡಿಪೋಗಳಲ್ಲಿ ಇಲ್ಲವಾಗಿದೆ.  ಇನ್ನಾದರೂ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳು ರೂಟ್‌ ಇಲ್ಲದ ನೌಕರರನ್ನು ಮನೆಗೆ ಹೋಗುವಂತೆ ಸೂಚಿಸಬೇಕು. ಈ ಮೂಲಕ ಕೊರೊನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಿದೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ