ಬೆಂಗಳೂರು: ವಿಶ್ವಮಾರಿ ಕೊರೊನಾ ರಾಜ್ಯದಲ್ಲಿ ಇಂದು ಕೂಡ ತನ್ನ ಅಟ್ಟಹಾಸವನ್ನು ಮುಂದುವರಿಸಿದ್ದು, 1925 ಹೊಸ ಸೋಂಕಿತರ ಪತ್ತೆಯಾಗಿದ್ದಾರೆ. ಇನ್ನು ಈವರೆಗೆ ರಾಜ್ಯದಲ್ಲಿ ಒಟ್ಟು 23474 ಮಂದಿ ಸೋಂಕಿಗೆ ಒಳಗಾಗಿದ್ದಾರೆ.
ಇದು 38 ಮಂದಿ ಸೋಂಕಿಗೆ ಬಲಿಯಾಗಿದ್ದು, ಒಟ್ಟಾರೆ ಈವರೆಗೆ ರಾಜ್ಯದಲ್ಲಿ 377 ಮಂದಿ (ಅನ್ಯಕಾರಣಕ್ಕೆ 4 ಮಂದಿ ಸೇರಿ) ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಒಟ್ಟು 23,474 ರಲ್ಲಿ 13250 ಸಕ್ರಿಯ ಕೊರೊನಾ ಪ್ರಕರಣಗಳಿವೆ. ಇಂದು ಒಟ್ಟು 373 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಒಟ್ಟಾರೆ 9847 ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ 38 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ 16, ಬೀದರ್‌ನಲ್ಲಿ 9, ಚಿಕ್ಕಬಳ್ಳಾಪುರ 2, ಹಾಸನ, ಮೈಸೂರು ಮತ್ತು ಬಳ್ಳಾರಿಯಲ್ಲಿ ತಲಾ ಒಬ್ಬರು ಕೊರೊನಾಗೆ ಬಲಿಯಾಗಿದ್ದಾರೆ.
ಇನ್ನು ಬೆಂಗಳೂರಿನಲ್ಲಿ 1235, ದಕ್ಷಿಣ ಕನ್ನಡದಲ್ಲಿ 147, ಬಳ್ಳಾರಿಯಲ್ಲಿ 90, ವಿಜಯಪುರ 51, ಕಲಬುರಗಿ 49, ಉಡುಪಿ ಮತ್ತು ಧಾರವಾಡ ತಲಾ 45, ಬೀದರ್ 29, ಮೈಸೂರು 25, ಹಾವೇರಿ15, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಕೋಲಾರ, ತಲಾ 13, ಹಾಸನ 14, ಬೆಳಗಾವಿ, ದಾವಣಗೆರೆ ತಲಾ 11, ರಾಯಸೂರು ಮತ್ತು ಮಂಡ್ಯ ತಲಾ 10, ಚಿಕ್ಕಮಗಳೂರು 9, ಶಿವಮೊಗ್ಗ8, ಗದಗ 7, ರಾಮನಗರದಲ್ಲಿ 6, ಬಾಗಲಕೋಟೆ 4, ಚಿತ್ರದುರ್ಗ ಜಿಲ್ಲೆಯಲ್ಲಿ 3 ಸೇರಿ ಇಂದು ಒಟ್ಟು 1925 ಮಂದಿಯನ್ನು ಸುತ್ತಿಕೊಂಡಿದೆ ಮಹಾಮಾರಿ ಕೊರೊನಾ.