ಬೆಂಗಳೂರು: ಕರ್ನಾಟಕದಲ್ಲಿ ಇಂದು 75ಮಂದಿಯಲ್ಲಿ ಸೋಂಕು ಹರಡುವ ಮೂಲಕ ಕೊರೊನಾ ವೈರಸ್ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ.
ಈವರೆಗೆ ರಾಜ್ಯದಲ್ಲಿ 2,493 ಮಂದಿ ಈ ವಿಶ್ವಮಾರಿಯಿಂದ ಬಳಲುತ್ತಿದ್ದು, ಅದರಲ್ಲಿ ಈಗಾಗಲೇ 49 ಮಂದಿ ಮೃತಪಟ್ಟಿದ್ದಾರೆ. ಇನ್ನು 809ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರೆ 1,635ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಇನ್ನು ಇಂದು ರಾಜ್ಯದಲ್ಲಿ ಅತ್ಯಂತ ಹೆಚ್ಚು ಕೊರೊನಾ ಸೋಂಕಿತ ಜಿಲ್ಲೆಯಾಗಿ ಉಡುಪಿ ಗುರುತಿಸಿಕೊಂಡಿ ಇಲ್ಲಿ 27 ಪ್ರಕರಣಗಳು ಪತ್ತೆಯಾಗಿವೆ. ಉಳಿದಂತೆ ಹಾಸನ 13, ಯಾದಗಿರಿ, ಬೆಂಗಳೂರು ತಲಾ 7, ಚಿತ್ರದುರ್ಗ ಮತ್ತು ದಕ್ಷಣ ಕನ್ನಡ ಜಿಲ್ಲೆಯಲ್ಲಿ ತಲಾ 6, ಕಲಬುರಗಿಯಲ್ಲಿ 3, ಚಿಕ್ಕಮಗಳೂರು ಮತ್ತು ವಿಜಯಪುರತಲ್ಲಿ ತಲಾ 2, ರಾಯಚೂರಿನಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ಇನ್ನು ಇಂದು ಕಂಡಿರುವ 75 ಕೇಸ್‌ಗಳಲ್ಲಿ 41 ಮಹಾರಾಷ್ಟ್ರದಿಂದ ಬಂದವರದ್ದಾಗಿದೆ.
ದೇಶದಲ್ಲಿ 158,613 ಕ್ಕೇರಿದ ಸೋಂಕಿತರ ಸಂಖ್ಯೆ
ಇನ್ನು ದೇಶದಲ್ಲಿ ಈವರೆಗೆ 158,613 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. 4,540 ಮಂದಿ ಮೃತಪಟ್ಟಿದ್ದಾರೆ. 67,753 ಮಂದಿ ರೋಗಮುಕ್ತರಾಗಿದ್ದಾರೆ. ಪ್ರಪಂಚಾದ್ಯಂತ ಈವರೆಗೆ 5,794,350 ಜನರಲ್ಲಿ ಸೋಂಕು ಇರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಖಚಿತಪಡಿಸಿದೆ. ಇನ್ನು 357,516 ಜನರು ಮೃತಪಟ್ಟಿದ್ದಾರೆ 2,499,801 ಮಂದಿ ರೋಗದಿಂದ ಮುಕ್ತಗೊಂಡಿದ್ದಾರೆ. view by country
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail