ಬೆಂಗಳೂರು: ಹೈದರಾಬಾದ್‌ನಿಂದ ಬಂದ ದಂಪತಿಯ ಕೈಯಲ್ಲಿ ಹೋಂ ಕ್ವಾರಂಟೈನ ಸೀಲ್ ಇರುವುದನ್ನು ನೋಡಿ ಪ್ರಯಾಣಿಕರು ಭಯಗೊಂಡ ಘಟನೆ ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಜರುಗಿದೆ.
ಈ ದಂಪತಿ ಇಂದು ರೈಲಿನ ಮೂಲಕ ನಗರಕ್ಕೆ ಬಂದಿದ್ದಾರೆ. ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಅವರು ತೆರಳಬೇಕಿದ್ದು, ಅದಕ್ಕಾಗಿ ಮೆಜೆಸ್ಟಿಕ್‌ಗೆ ಬಂದು ಬಸ್ ಹತ್ತಲು ಮುಂದಾಗಿದ್ದಾರೆ. ಆದರೆ ಅವರ ಕೈಯನ್ನು ಗಮನಿಸಿದ ಪ್ರಯಾಣಿಕರು ಸ್ಥಳದಲ್ಲೇ ಇದ್ದ ಸಾರಿಗೆ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಸಾರಿಗೆ ಸಿಬ್ಬಂದಿ ಅವರನ್ನು ತಡೆದು ವಿಚಾರಿಸಿದಾಗ ನಾವು ಹೈದರಾಬಾದ್‌ನಿಂದ ಬಂದಿದ್ದೇವೆ. ಅಲ್ಲಿ ಟ್ರೈನ್ ಮೂಲಕ ಬಂದಿದ್ದು, ರೈಲು ಸಿಬ್ಬಂದಿ ನಿಮ್ಮ ಊರಿಗೆ ಹೋಗಿ ಹೋಂ ಕ್ವಾರಂಟೈನ್ ಆಗಿ ಎಂದು ತಿಳಿಸಿದ್ದಾರೆ. ಆದರೆ ನೀವು ಬಸ್ ಹತ್ತಲು ಬಿಡುತಿಲ್ಲ ಎಂದು ಹೇಳಿದ್ದಾರೆ.
ಸಾರಿಗೆ ಸಿಬ್ಬಂದಿ ನಿಮ್ಮ ಕೈಯಲ್ಲಿ ಹೋಂ ಕ್ವಾರಂಟೈನ್ ಸೀಲ್ ಇರುವುದರಿಂದ ನಾವು ನಿಮಗೆ ಬಸ್‌ನಲ್ಲಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗುವುದಿಲ್ಲ. ಒಂದುವೇಳೆ ನಿಮಗೆ ಅವಕಾಶ ಮಾಡಿಕೊಟ್ಟರೆ ನಮ್ಮ ಕೆಲಸಕ್ಕೆ ತೊಂದರೆಯಾಗುತ್ತದೆ ಎಂದು ಹೇಳಿ, ನೀವು ಖಾಸಗಿ ವಾಹನದಲ್ಲಿ ಪ್ರಯಾಣಿಸಿ ಎಂದು ಸಲಹೆ ನೀಡಿದರು.
ಆದರೆ, ಹೋಂ ಕ್ವಾರಂಟೈನ್‌ನಲ್ಲಿ ಇರಬೇಕು ಎಂದು ಸೀಲ್ ಹಾಕಿದ ಅಧಿಕಾರಿಗಳು ಅವರನ್ನು ಗಮನಿಸದೆ ಹೊರಗೆ ಹೇಗೆ ಬಿಟ್ಟರು ಎಂಬ ಪ್ರಶ್ನೆ ಕಾಡುತ್ತಿದೆ. ಅಧಿಕಾರಿಗಳ ಈ ಎಡವಟ್ಟಿನಿಂದ ಇನ್ನು ಎಷ್ಟು ಜನರಿಗೆ ಕೊರೊನಾ ವಕ್ಕರಿಸಲಿದೆಯೋ ಎಂಬ ಆತಂಕವು ವ್ಯಕ್ತವಾಗುತ್ತಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail