NEWSದೇಶ-ವಿದೇಶನಮ್ಮರಾಜ್ಯ

ಕ್ವಾರಂಟೈನ್‌ ಕರ್ಮಕಾಂಡ; ವಿದೇಶದಿಂದ ಬಂದವರ ಸುಲಿಗೆ

ಕ್ವಾರಂಟೈನ್‌ ಹೋಟೆಲ್‌ಗಳಿಗೆ ಕರೆತರುವ ಅಧಿಕಾರಿಗಳ ಹಿಂಬಾಗಿಲ ನಡೆಗೆ ಧಿಕ್ಕಾರ  

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ವಿದೇಶದಿಂದ ಬರುವವರಿಗೆ ಐಷಾರಾಮಿ ಹೋಟೆಲ್‌ಗಳಲ್ಲಿ ಕ್ವಾರಂಟೈನ್‌ ಮಾಡಲಾಗುತ್ತಿದೆ. ಕ್ವಾರಂಟೈನ್‌ ಅವಧಿಯಲ್ಲಿ ಬರುವ ಖರ್ಚನ್ನು ಸರ್ಕಾರವೇ ಭರಸುತ್ತದೆ ಎಂದು ಹಲವರು ಅಂದುಕೊಂಡಿದ್ದಾರೆ. ಆದರೆ ಇಲ್ಲಿ ನಡೆಯುತ್ತಿರುವುದೇ ಬೇರೆ.

ವಿದೇಶದಲ್ಲಿ ಸಿಲುಕಿದ್ದವರನ್ನು ವಿಮಾನದ ಮೂಲಕ ರಾಜ್ಯಕ್ಕೆ ಕರೆದುಕೊಂಡು ಬಂದಿರುವ ರಾಜ್ಯ ಸರ್ಕಾರ ಈಗ ಅವರ ಜೇಬಿಗೆ ಕತ್ತರಿಹಾಕುವ ಮೂಲಕ ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ ಮಂದಿಯನ್ನು ಸುಲಿಯುತ್ತಿದೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ    https://play.google.com/store/apps/detail

ಹೌದು! ವಿದೇಶದಿಂದ ಬರುವವರನ್ನು ಕ್ವಾರಂಟೈನ್‌ ನೆಪಹೇಳಿಕೊಂಡು ಹೋಟೆಲ್‌ಗಳಲ್ಲಿ ಕೂಡಿಹಾಕಲಾಗುತ್ತಿದ್ದು, ಆ ಹೋಟೆಗಳಲ್ಲಿ ದಿನಕ್ಕೆ ಒಬ್ಬ ವ್ಯಕ್ತಿಗೆ 1800 ರೂ.ಗಳಿಂದ 4 ಸಾವಿರ ರೂ. ವರೆಗೂ ವಸೂಲಿ ಮಾಡುತ್ತಿದೆ. ಅಷ್ಟೇ ಅಲ್ಲ ಅವರಿಗೆ ಸರಿಯಾದ ಆಹಾರವನ್ನು ಕೊಡುವಲ್ಲಿ ವಿಫಲವಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ವಿದೇಶದಿಂದ ಬಂದವರು ಒಂದು ರೀತಿಯ ನರಕದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದೇ ಹೇಳಬಹುದು.

ತಮ್ಮ ಹೊಟೆಪಾಡಿಗಾಗಿಯೋ ಅಥವಾ ತಮ್ಮ ಅರ್ಹತೆಗೆ ತಕ್ಕ ಕೆಲಸವನ್ನು ಇಲ್ಲಿನ ಸರ್ಕಾರಗಳು ಕೊಡದ ಹಿನ್ನೆಲೆಯಲ್ಲೋ ವಿದೇಶಕ್ಕೆ ಹೋಗಿದ್ದವರು ಈ ವಿಶ್ವಮಾರಿ ಕೊರೊನಾ ಸೋಂಕಿನಿಂದ ಬಸವಳಿದು ತಮ್ಮ ತಾಯಿನಾಡಿಗೆ ಹಿಂದಿರುಗಿದ್ದಾರೆ. ಅವರನ್ನು ಕರೆತಂದ ಸರ್ಕಾರ ಈಗ ಅವರ ಆರೋಗ್ಯ ವಿಚಾರಿಸುವ ದೃಷ್ಟಿಯಿಂದ ಅವರು ಆರ್ಥಿಕವಾಗಿ ಹೇಗಿದ್ದಾರೆ ಎಂಬುದನ್ನು ವಿಚಾರಿಸದೆ ಸುಲಿಗೆ ಮಾಡಲು ಇಳಿದಿದೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ    https://play.google.com/store/apps/detail

ಕ್ವಾರಂಟೈನ್‌ ನೆಪ ಹೇಳುವ ಅಧಿಕಾರಿಗಳು ಮಕ್ಕಳು ಗರ್ಭಿಣಿಯರು ಮತ್ತು ವೃದ್ಧರು ಎನ್ನದೆ ಎಲ್ಲರನ್ನೂ ಒಂದೆಡೆ ಕೂಡಿಹಾಕಿ ಸರಿಯಾಗಿ ನೋಡಿಕೊಳ್ಳದೆ ಸುಲಿಗೆ ಮಾಡಲು ಮುಂದಾಗಿದ್ದಾರೆ. ಇದರಿಂದ ಹೊರಬರಲು ಸಾಧ್ಯವಾಗದೆ ಹಲವರು ಮಾನಸಿಕ ವೇದನೆಯನ್ನು ಅನುಭವಿಸುತ್ತಿದ್ದಾರೆ. ಈ ನಡುವೆ  ಇತ್ತ ಕೊರೊನಾ ವೈರಸ್‌ಗಿಂತ್ತ ಕ್ರೋರಿಯಾಗಿ ಅಧಿಕಾರಿಗಳು ನಡೆದುಕೊಳ್ಳುತ್ತಿರುವುದು ಮಾತ್ರ ತಲೆ ತಗ್ಗಿಸುವ ವಿಷಯ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ    https://play.google.com/store/apps/detail

10 ವರ್ಷದೊಳಗಿ ಮಕ್ಕಳು ಗರ್ಭಿಣಿಯರನ್ನು ಉಪಚರಿಸಬೇಕಾದ ಅಧಿಕಾರಿಗಳೇ ಈ ರೀತಿ ಸುಲಿಗೆಗೆ ಇಳಿದರೆ ಇಂಥ ವಿಷಯಗಳನ್ನು ಯಾರಿಗೆ ಹೇಳುವುದು. ಈ ರೀತಿ ನಡೆದುಕೊಳ್ಳಲು ಇವರಿಗೆ ಪ್ರೇರೇಪಿಸಿರುವವರು ಯಾರು. ಇದನ್ನು ಕೇಳಲು ಮತ್ತು ಅಂಥ ಅಧಿಕಾರಿಗಳನ್ನು ಮಟ್ಟಹಾಕಲು ರಾಜ್ಯದ ಮುಖ್ಯಮಂತ್ರಿಗಳಿಗೆ ಸಾಧ್ಯವಾಗುತ್ತಿವೇ? ಅಥವಾ ಈ ವಿಷಯ ಒಬ್ಬ ಮುಖ್ಯಮಂತ್ರಿಯಾದವರ ಗಮನಕ್ಕೆ ಬಂದಿಲ್ಲವೇ ಎಂಬ ಪ್ರಶ್ನೆ ಈಗ ನರಕದಲ್ಲಿ ಸಿಲುಕಿರುವವರನ್ನು ಕಾಡುತ್ತಿದೆ.

ಅದೇನೆ ಇರಲಿ ಇಂಥ ಸಮಯದಲ್ಲಿ ಅಧಿಕಾರಿಗಳು ಈ ರೀತಿ ನಡೆದುಕೊಳ್ಳುತ್ತಿರುವುದು ನಿಜಕ್ಕೂ ಸಮಾಜ ತಲೆತಗ್ಗಿಸುವಂತಹದ್ದು, ಇನ್ನಾದರೂ ತಮ್ಮ ತಪ್ಪು ನಡೆಯನ್ನು ಬದಲಿಕೊಂಡು ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಅಧಿಕಾರಿಗಳು ಮುಂದಾಗಬೇಕಿದೆ. ಸರ್ಕಾರವು ಕೂಡ ಇಂಥ ಭ್ರಷ್ಟ ಅಧಿಕಾರಿಗಳಿಗೆ ತಕ್ಕ ಪಾಠಕಲಿಸಬೇಕಿದೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ    https://play.google.com/store/apps/detail

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...