ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ತನ್ನ ಆರ್ಭಟವನ್ನು ತೀವ್ರಗೊಳಿಸಿರುವುದರಿಂದ ರಾಜ್ಯ ಸರ್ಕಾರ ಘೋಷಿಸಿರು ಭಾನುವಾರ ಲಾಕ್‌ಡೌನ್‌ಗೆ ಜನರು ಸಹಕಾರ ನೀಡುತ್ತಿದ್ದು, ರಾಜಧಾನಿ ರಸ್ತೆಗಳು ಮುಂಜಾನೆಯಿಂದಲೇ ಬಿಕೋ ಎನ್ನುತ್ತಿವೆ.
ಕೊರೊನಾ ಸೋಂಕಿನಿಂದ ಹೈರಾಣಾಗಿರುವ ಜನರು ಸದ್ಯ ಮನೆಯಿಂದ ಹೊರಹೋಗದಿದ್ದರೆ ಸಾಕು ಎನ್ನುತ್ತಿದ್ದಾರೆ. ಇದರಿಂದ ಇಂದು ರಾಜ್ಯಾದ್ಯಂತ ಘೋಷಣೆಯಾಗಿರುವ ಲಾಕ್‌ಡವ್‌ಗೆ ಬೆಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ ಇತರ ಇಲ್ಲೆಗಳಲ್ಲೂ ವಾಹನಗಳ ಓಡಾಟ ಸ್ತಬ್ಧಗೊಂಡಿದೆ.
ರಾಜ್ಯ ರಸ್ತೆ ಸಾರಿಗೆ ಬಸ್‌ಗಳು ಸೇರಿದಂತೆ ಖಾಸಗಿ ವಾಹನಗಳು ರಸ್ತೆಗಿಳಿದಿಲ್ಲ. ಇದರಿಂದ ರಸ್ತೆಗಳು ಬಿಕೋ ಎನ್ನುತ್ತಿವೆ. ಇನ್ನು ಆಟೋ ಟ್ಯಾಕ್ಸಿ ಕೂಡ ರಸ್ತೆಗಿಳಿಯದ ಕಾರಣ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಯಶಸ್ವಿಯಾಗುತ್ತಿದೆ.
ಇನ್ನು ನಿತ್ಯ ಬಳಕೆಯ ವಸ್ತುಗಳಾದ ತರಕಾರಿ, ಹಾಲು, ಮಾಂಸ ಮಾರಾಟಕ್ಕೆ ಯಾವುದೇ ನಿರ್ಬಂಧ ಇಲ್ಲ. ಜತೆಗೆ ಅಗತ್ಯತೆ ಇದ್ದರೆ ಮಾತ್ರ ಮನೆಯಿಂದ ಹೊರಬನ್ನಿ ಎಂಬ ಬಿಬಿಎಂಪಿ ಆಯುಕ್ತರ ಸೂಚನೆಯನ್ನು ಜನರು ತಪ್ಪದೆ ಪಾಲಿಸುತ್ತಿದ್ದಾರೆ.
ಇನ್ನು ಮೈಸೂರು, ಮಂಡ್ಯ, ರಾಮನಗರ, ಹುಬ್ಬಳ್ಳಿ, ಧಾರವಾಡ, ವಿಜಯಪುರ, ಕಲಬುರುಗಿ ಸೇರಿದಂತೆ ರಾಜ್ಯಾದ್ಯಂತ ಕೊರೊನಾ ಸೋಂಕಿನ ವಿರುದ್ಧದ ನಿಷೇಧಾಜ್ಞೆಗೆ ಜನರು ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.