ಬೆಂಗಳೂರು: ಕಳ್ಳದಾರಿಯಲ್ಲಿ ಕರ್ನಾಟಕ ಪ್ರವೇಶಿಸುತ್ತಿರುವ ತಮಿಳಿಗರು ರಾಜ್ಯಕ್ಕೆ ಬಳುವಳಿಯಾಗಿ ಕೊರೊನಾ ಹಂಚಲು ಸಜ್ಜಾದಂತೆ ಕಂಡು ಬರುತ್ತಿದೆ.
ಕರ್ನಾಟಕ ತಮಿಳುನಾಡು ಗಡಿಯಾದ ಅತ್ತಿಬೆಲೆ ಬಳಿ ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುವವರಿಗೆ ಸ್ಥಳೀಯರು ಹಣದ ಮೋಹಕ್ಕೆ ಬಲಿಯಾಗಿ ನಕಲಿ ಪಾಸ್‌ನೀಡಿ ರಾಜ್ಯಕ್ಕೆ ಬರುವವರಿಗೆ ಸಹಕರಿಸುತ್ತಿದ್ದಾರೆ. ಇದು ಕೊರೊನಾ ವಿಶ್ವಮಾರಿ ಕಾಡುತ್ತಿರುವ ಈ ಹೊತ್ತಿನಲ್ಲಿ ನಿಜಕ್ಕೂ ಆತಂಕ ಮೂಡಿಸುತ್ತಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಕರ್ನಾಟಕದಿಂದ ತಮಿಳುನಾಡಿಗೆ ಹೋಗುವ ಲಾರಿಗಳು, ಬೈಕ್‌ಗಳ ಸವಾರರು ತಮಿಳುನಾಡು ಪ್ರವೇಶಿಸುತ್ತಿದ್ದಂತೆ ಅಲ್ಲಿಂದ ಕರ್ನಾಟಕಕ್ಕೆ ಬರಲು ಕಾದು ಕುಳಿತಿರುವವರಿಂದ 2ಸಾವಿರದಿಂದ 3 ಸಾವಿರ ರೂ. ಪಡೆದು ಅವರಿಗೆ ಬೇಕಾದ ಪಾಸ್ ಮತ್ತು ಐಡಿ ಕಾರ್ಡ್‌ಗಳನ್ನು ಸೃಷ್ಟಿಸಿಕೊಡುತ್ತಿದ್ದಾರೆ.
ತಮಿಳುನಾಡಿನಲ್ಲಿ ಈಗಾಗಲೇ ಕೊರೊನಾ ಅಟ್ಟಹಾಸ ಹೆಚ್ಚಾಗಿರುವ ಈ ಸಮಯದಲ್ಲಿ ರಾಜ್ಯಕ್ಕೆ ಅಲ್ಲಿಂದ ಬರುವ ಜನರನ್ನು ಈ ರೀತಿ ಕೆಲ ಕಿಡಿಗೇಡಿಗಳು ಕಳುಹಿಸಿಕೊಡಲು ನಕಲಿ ಐಡಿಕಾರ್ಡ್ ಪಾಸ್ ಸೃಷ್ಟಿಕೊಂಡು ಕಾಯುತ್ತಿರುವುದು ಈಗ ಗಡಿ ಭಾಗದ ಜನರಲ್ಲಿ ಆತಂಕ ಹೆಚ್ಚಿಸಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಅಲ್ಲದೆ ಸೂಕ್ತ ಪೊಲೀಸ್ ಭದ್ರತೆ ಇಲ್ಲದೆ ಈರೀತಿ ನುಸುಳುಕೋರರಿಗೆ ಅನುಕೂಲವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಅಲ್ಲದೆ ಈಗ ಇರುವ ಪೊಲೀಸರು ಕೂಡ ಸ್ಥಳೀಯರೊಂದಿಗೆ ಸೇರಿ ಗಡಿಯಿಂದ ರಾಜ್ಯಕ್ಕೆ ಬರುವವರಿಗೆ ಎಡೆಮಾಡಿಕೊಡುತ್ತಿದಾರೆ ಎಂಬ ದೂರು ಕೇಳಿಬರುತ್ತಿದೆ.
ಕೊರೊನಾ ಸೋಂಕು ಇಡೀ ವಿಶ್ವವನ್ನೇ ಬಾಧಿಸುತ್ತಿರುವ ಈ ಸಮಯದಲ್ಲಿ ನಕಲಿ ದಾಖಲೆ ಸೃಷ್ಟಿಸಿ ರಾಜ್ಯಕ್ಕೆ ಬರುವವರಿಗೆ ಅವಕಾಶ ಮಾಡಿಕೊಡುವುದು ರಾಜ್ಯ-ರಾಜ್ಯಗಳ ನಡುವೆ ವೈರಸ್ ರುದ್ರ ನರ್ತನಕ್ಕೆ ರಹದಾರಿ ನೀಡಿದಂತ್ತಾಗುತ್ತದೆ. ಆದ್ದರಿಂದ ಸ್ಥಳೀಯರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ. ಜತೆಗೆ ಪೊಲೀಸರು ತಮ್ಮ ಕರ್ತವ್ಯವನ್ನು ಹಣಕ್ಕಾಗಿ ಮಾರಿಕೊಳ್ಳದೆ ನಿಷ್ಠೆಯಿಂದ ನಿರ್ವಹಿಸಬೇಕಿದೆ.
ಇನ್ನು ಸಿಂಗಂ ಎಂದೇ ಕರೆಸಿಕೊಳ್ಳುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣವರ ಅವರು ಕೂಡ ಇಂಥ ಸ್ಥಳದಲ್ಲಿ ಭದ್ರತೆಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ. ಅದನ್ನು ಬಿಟ್ಟು ಮೀಸೆ ತಿರುವಿಕೊಂಡು ಓಡಾಡುವುದೆ ಕಾಯಕವಾಗಬಾರದು ಎಂಬುವುದು ಸ್ಥಳೀಯರು ಮನವಿಯಾಗಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail