Vijayapatha – ವಿಜಯಪಥ
Saturday, November 2, 2024
NEWSನಮ್ಮಜಿಲ್ಲೆನಮ್ಮರಾಜ್ಯಸಿನಿಪಥ

ಅಭಿಮಾನಿಗಳಿಗೆ ಎರಡೆರಡು ಸಿಹಿಸುದ್ದಿಕೊಟ್ಟ ಡಿ ಬಾಸ್‌

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟು ಹಬ್ಬಕ್ಕೆ ಶುಭಾಶಯಗಳ ಮಹಾಪೂರ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಿನಿ ಸುದ್ದಿ
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ 44ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ಜತೆಗೆ ಅಭಿಮಾನಿಗಳಿಗೆ ಇನ್ನೊಂದು ಸಿಹಿ ಸುದ್ದಿ ನೀಡುವ ಮೂಲಕ ಅಭಿಮಾನಿಗಳ ಖುಷಿಗೆ ಪಾತ್ರರಾಗಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಹೌದು ಒಂದೆಡೆ ನೆಚ್ಚಿನ ನಟನ ಹುಟ್ಟುಹಬ್ಬ ಆದರೆ ಮತ್ತೊಂದೆಡೆ ಉಡುಗೊರೆ ನೀಡಿದ್ದು ರಾಬರ್ಟ್ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಲಾಗಿದೆ. ರಣ ರೋಚಕ ಅಲ್ಲ, ಮಾಸ್ ಡೈಲಾಗ್ ಡಿ ಬಾಸ್ ಹೇಳಿದಂತೆ ಫುಲ್ ಕದರ್ ಕಡಕ್ ಲುಕ್ ನ ಟ್ರೈಲರ್ ಬಿಡುಗಡೆ ಮಾಡಲಾಗಿದೆ.

44ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳು ಸಹ ಅಷ್ಟೇ ಖುಷಿ ಪಡುತ್ತಿದ್ದು, ಹಬ್ಬದಂತೆ ಎರಡು ಸಿಹಿಯನ್ನು ಹಂಚಿಕೊಳ್ಳುತ್ತಿದ್ದಾರೆ. ನೇರವಾಗಿ ದರ್ಶನ್ ಅವರಿಗೆ ಅಭಿಮಾನಿಗಳೊಂದಿಗೆ ಈ ಬಾರಿಯ ಹುಟ್ಟುಹಬ್ಬ ಆಚರಿಸಲು ಸಾಧ್ಯವಾಗದಿದ್ದರೂ ಸಾಮಾಜಿಕ ಜಾಲತಾಣಗಳ ಮೂಲಕ ಸಂಭ್ರಮಿಸುತ್ತಿದ್ದಾರೆ.

ಇತ್ತ ಟ್ರೈಲರ್ ಬಿಡುಗಡೆ ಮೂಲಕ ಚಿತ್ರತಂಡ ಅಭಿಮಾನಿಗಳಿಗೆ ಹುಡುಗೊರೆ ನೀಡಿದ್ದು, ಫುಲ್ ಖುಷಿಯಾಗಿದ್ದಾರೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ವ್ಯೂಸ್ ಪಡೆದಿದ್ದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಟ್ರೇಲರ್ ನಲ್ಲಿ ಮಾತು ಕ್ಲಾಸ್ ಆಗೋ ಭಾವನಾತ್ಮಕತೆ ಚಿತ್ರವನ್ನು ನೀಡಲಾಗಿದ್ದು ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ

ಟೀಸರ್ ಆರಂಭದಲ್ಲಿ ಡಿ ಬಾಸ್ ಮಾಸ್ ಲುಕ್ ನಲ್ಲಿ ಕಾಣಿಸಿಲಿದ್ದು, ನಂತರ ಕಡಕ್‌ ಡೈಲಗ್‌ಗಳನ್ನು ಹೊಡೆದಿದ್ದಾರೆ. ಒಬ್ಬರ ಲೈಫ್ ನಲ್ಲಿ ನಾನು ಹೀರೊ ಆಗಬೇಕೆಂದರೆ ಇನ್ನೊಬ್ಬರ ಲೈಫ್ ನಲ್ಲಿ ನಾನು ಆಗಲೇಬೇಕು ಎಂಬ ಮಾತು.

ತೆಲುಗು ನಟ ಜಗಪತಿ ಬಾಬು ಫುಲ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಮನುಷ್ಯನಿಗೆ ಎರಡು ಸಾರಿ ಮೈ ನಡುಗುತ್ತೆ ಒಂದು ತುಂಬಾ ಚಳಿಯಾದಾಗ ಮತ್ತೊಂದು ತುಂಬಾ ಭಯ ಆದಾಗ ಎಂಬ ಡೈಲಾಗ್ ಹೊಡೆದಿದ್ದಾರೆ. ಶಬರಿ ಮುಂದೆ ಸೋಲೋದು ಗೊತ್ತು ರಾವಣನ ಮುಂದೆ ಗೆಲ್ಲೋದು ಗೊತ್ತು ಎಂದು ಕೊನೆಗೆ ಡಿ ಬಾಸ್ ಹೇಳಿರುವುದು ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ.

ಪ್ರತಿವರ್ಷದಂತೆ ದರ್ಶನ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಸಾಗರವೇ ಅವರ ಮನೆ ಮುಂದೆ ನೆರೆದಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಈ ಬಾರಿ ಅಭಿಮಾನಿಗಳೊಂದಿಗೆ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಬದಲಿಗೆ ಬಡವರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿ, ನನ್ನ ಹುಟ್ಟುಹಬ್ಬಕ್ಕೆ ಅನಾವಶ್ಯಕವಾಗಿ ಖರ್ಚು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಪುನೀತ್‌ ರಾಜ್‌ಕುಮಾರ್‌ ಸೇರಿದಂತೆ ನಟ ನಟಿಯರು ಜನ್ಮದಿನದ ಶುಭಾಶಯಗಳನ್ನು ಕೋರುತ್ತಿದ್ದಾರೆ.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ