NEWS

ಬೇರೆಡೆಗೆ ವರ್ಗಾವಣೆಗೊಂಡರೂ ಹೋಗದ ಚಿಂತಾಮಣಿ ಕೆಎಸ್‌ಆರ್‌ಟಿಸಿ ಘಟಕದ ಡಿಎಂ ಅಪ್ಪಿರೆಡ್ಡಿ: ಅಧಿಕಾರಿಗಳ ಜಾಣ ಮೌನ

ವಿಜಯಪಥ ಸಮಗ್ರ ಸುದ್ದಿ

ಚಿಂತಾಮಣಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ  ನಿಗಮದಲ್ಲಿ ಹಲವಾರು ವರ್ಷಗಳಿಂದ ಒಂದೇ ಕಡೆ  ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳ ಪೈಕಿ 28 ಅಧಿಕಾರಿಗಳನ್ನು ಜುಲೈ 26ರಂದು ವರ್ಗಾವಣೆ ಮಾಡಿ ನಿಗಮದ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಆದರೆ ಆ ಆದೇಶವನ್ನು ಬದಿಗೆ ಸರಿಸಿ ಚಿಂತಾಮಣಿ ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕರು ಅಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಹೌದು! ಕಳೆದ ಜುಲೈ 26ರಂದು ಕೆಎಸ್‌ಆರ್‌ಟಿಸಿಯ ವಿವಿಧ ಘಟಕಗಳಲ್ಲಿ ಕೆಲಸ ಮಾಡುತ್ತಿರುವ 28 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಅದರಲ್ಲಿ ಚಿಂತಾಮಣಿ ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕ ಅಪ್ಪಿರೆಡ್ಡಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಆದರೆ ಅವರು ವರ್ಗಾವಣೆಗೊಂಡಿದ್ದರೂ ಅದೇ ಡಿಪೋನಲ್ಲೇ ಇನ್ನೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇದನ್ನು ಗಮನಿಸಿದರೆ ಮುಷ್ಕರದ ವೇಳೆ ಏನು ತಪ್ಪು ಮಾಡದ ಸುಮಾರು 20 ಸಾವಿರ ನೌಕರರನ್ನು ವರ್ಗಾವಣೆ, ಅಮಾನತು, ವಜಾ ಮಾಡಿ ಅಧಿಕಾರಿಗಳು ಆದೇಶ ಹೊರಡಿಸಿದ್ದರು. ಜತೆಗೆ ಆದೇಶ ಹೊರಡುಸಿದ್ದ ದಿನಾಂಕದಿಂದ ಆಯಾಯ ಡಿಪೋಗಳಲ್ಲಿ ವರ್ಗಾವಣೆಗೊಂಡ ನೌಕರರಿಗೆ ಕರ್ತವ್ಯ ಕೊಡದೆ ನೀವು ವರ್ಗಾವಣೆ ಗೊಂಡಿರುವ ಡಿಪೋಗಳಲ್ಲೇ ಹೋಗಿ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಬೇಕು ಎಂದು ತಾಕೀತು ಮಾಡಿದ್ದರು.

ಆದರೆ, ಚಿಂತಾಮಣಿ ಘಟಕದ ವ್ಯವಸ್ಥಾಪಕರನ್ನು ಜುಲೈ 26 ರಂದೇ ವರ್ಗಾವಣೆ ಮಾಡಿದ್ದರೂ ಅವರು ಇನ್ನೂ ಅಲ್ಲೇ ಡ್ಯೂಟಿ ಮಾಡುತ್ತಿದ್ದಾರೆ. ಅಂದರೆ ನಿಗಮದಲ್ಲಿ ಅಧಿಕಾರಿಗಳಿಗೊಂದು ಕಾನೂನು ನೌಕರರಿಗೊಂದು ಕಾನೂನು ಇದೆಯೇ ಎಂದು ಸಾರಿಗೆ ನೌಕರರು ಕೇಳುತ್ತಿದ್ದಾರೆ. ಜತೆಗೆ ನಮ್ಮನ್ನು ವರ್ಗಾಣೆ ಮಾಡಿದ ಕೂಡಲೇ ಹೇಗೆ ವರ್ಗಾವಣೆಯಾಗಿರುವ ಡಿಪೋಗಳಗೆ ಹೋಗಿ ರಿಪೋರ್ಟ್‌ ಮಾಡಿಕೊಳ್ಳಿ ಎಂದು ಹೇಳಿದರೋ ಅದೇ ರೀತಿ ಅಧಿಕಾರಿಗಳು ಹೋಗಬೇಕಲ್ಲವೇ ಎಂದು ಹೇಳುತ್ತಿದ್ದಾರೆ.

ಇನ್ನು ಸಾರಿಗೆ ನಿಗಮಗಳಲ್ಲಿ ಅಧಿಕಾರಿಗಳು ಕಾನೂನನ್ನು ಗಾಳಿ ತೂರಿ ತಮಗಿಷ್ಟ ಬಂದರೀತಿ ವರ್ತಿಸಬಹುದು. ಅದನ್ನು ಕೇಳುವುದಕ್ಕೆ ಯಾವು ಉನ್ನತ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ?

ಅದೇ ಒಬ್ಬ ಚಾಲಕ ಇಲ್ಲ ನಿರ್ವಾಹಕ ವರ್ಗಾವಣೆಗೊಂಡ ಸ್ಥಳಕ್ಕೆ ಹೋಗುವುದಿಲ್ಲ ನಾವು ಇಲ್ಲೇ ಕೆಲಸ ಮಾಡುತ್ತೇವೆ ಎಂದು ಹೇಳಿದರೆ, ಅಧಿಕಾರಿಗಳು ಒಪ್ಪಿಕೊಳ್ಳುತ್ತಿದ್ದರಾ? ಸಾರಿಗೆ ನಿಗಮಗಳಲ್ಲಿ ಏಕೆ ಅಧಿಕಾರಿಗಳಿಗೊಂದು ನ್ಯಾಯ ಸಿಬ್ಬಂದಿಗಳಿಗೊಂದು ನ್ಯಾಯ. ಕಾನೂನು ಇಲ್ಲಿ ಸಂವಿಧಾನತ್ಮಕವಾಗಿ ಇಲ್ಲವೇ ಎಂಬ ಅನುಮಾನ ಮೂಡುತ್ತಿದೆ. ಅಂದರೆ ಇಲ್ಲಿ ಸಂವಿಧಾನಾತ್ಮಕ ಕಾನೂನುಗೆ ಬೆಲೆ ಇಲ್ಲವೇ ಎಂಬ ಪ್ರಶ್ನೆಯೂ ಮೂಡುತ್ತಿದೆ.

ಇನ್ನು ಪ್ರಸ್ತುತ ಸದ್ಯದ ಮಾಹಿತಿ ಪ್ರಕಾರ ನಮಗೆ ಚಿಂತಾಮಣಿ ಡಿಪೋ ಡಿಎಂ ಮಾತ್ರ ವರ್ಗಾವಣೆಗೊಂಡರೂ ಆ ಸ್ಥಳಕ್ಕೆ ಹೋಗದೆ ಇದ್ದಲ್ಲಿಯೇ ಕೆಲಸ ಮಾಡುತ್ತಿದ್ದಾರೆ ಎಂಬುವುದು ತಿಳಿದು ಬಂದಿದೆ. ಇವರಂತೆ ಇನ್ನೂ ಎಷ್ಟು ಜನ ಅಧಿಕಾರಿಗಳು ಹೀಗೆ ವರ್ಗಾವಣೆಗೊಂಡಿರುವುದನ್ನು ಬದಿಗೆ ಸರಿಸಿ ಇದ್ದಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ ಎಂಬುವುದರ ಬಗ್ಗೆ ಮುಂದಿನ ದಿನಗಳಲ್ಲಿ ವಿಜಯಪಥ ಬಯಲಿಗೆಳೆಯಲಿದೆ.

 ನಾವು ತುಮಕೂರು ವಿಭಾಗದ ತುರುವೇಕೆರೆ ಕೆಎಸ್‌ಆರ್‌ಟಿಸಿ ಘಟಕಕ್ಕೆ ವರ್ಗಾವಣೆ ಅಗಿರುವುದು ನಿಜ. ಆದರೆ, ಚಿಂತಾಮಣಿ ಡಿಪೋ ತುಂಬ ದೊಡ್ಡದಿದ್ದು, ಇಲ್ಲಿಗೆ ಬರಬೇಕಿರುವ ಡಿಪೋ ವ್ಯವಸ್ಥಾಪಕರು ಬಂದು ಅಧಿಕಾರ ವಹಿಸಿಕೊಳ್ಳದಿರುವುದರಿಂದ ನಾವು ಇನ್ನು ಇಲ್ಲೇ ಕೆಲಸ ಮಾಡುತ್ತಿದ್ದೇವೆ. ಆ ಅಧಿಕಾರಿ ಬಂದ ಕೂಡಲೇ ನಮಗೆ ನಿಯೋಜಿಸಿರುವ ಡಿಪೋಗೆ ಹೋಗಿ ಕೆಲಸ ಮಾಡುತ್ತೇವೆ.

l ಅಪ್ಪಿರೆಡ್ಡಿ, ಚಿಂತಾಮಣಿ ಕೆಎಸ್‌ಆರ್‌ಟಿಸಿ ಡಿಎಂ (ವರ್ಗಾವಣೆಗೊಂಡಿರುವವರು)

1 Comment

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...