NEWSನಮ್ಮರಾಜ್ಯಸಿನಿಪಥ

ಚಿರಂಜೀವಿ ಕಳೆದುಕೊಂಡಿರುವ ಸರ್ಜಾ ಕುಟುಂಬಕ್ಕೆ ಆಘಾತ ನೀಡಿದ ಇಂದ್ರಜಿತ್ ವಿರುದ್ಧ ಧ್ರುವ ಬೇಸರ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನಮ್ಮ ಕುಟುಂಬ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ನೋವಿನಿಂದ ಇನ್ನು ಹೊರಬಂದಿಲ್ಲ. ಈ ನಡುವೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ನನ್ನಣ್ಣ ಸಾವಿನ ಕುರಿತು ಪ್ರಶ್ನೆ ಮಾಡಿರುವುದು ಇನ್ನಷ್ಟು ನೋವುಂಟು ಮಾಡಿದೆ ಎಂದು ಧ್ರುವ ಸರ್ಜಾ ತಿಳಿಸಿದ್ದಾರೆ.

ಪ್ರಶಾಂತ್ ಸಂಬರಗಿ ಜತೆ ಧ್ರುವ ಸರ್ಜಾ ಅವರು ವಾಟ್ಸ್‌ ಆಪ್ ಮೂಲಕ ಮಾತನಾಡಿದ್ದು, ಅಣ್ಣ ಚಿರು ಸರ್ಜಾ ಸಾವಿನ ಬಗ್ಗೆ ಮಾತಾಡಿದ್ದ ಇಂದ್ರಜಿತ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದು, ನೀವು ಚಿರು ಪರ ರಕ್ಷಣೆಗೆ ನಿಂತಿದ್ದು ನೋಡಿದೆ. ನಿಮಗೆ ನಮ್ಮ ಕುಟುಂಬದ ವತಿಯಿಂದ ಧನ್ಯವಾದಗಳು. ಆದರೆ ನಮಗೆ ಈ ವಿಚಾರದಿಂದ ಬಹಳ ನೋವಾಗಿದೆ ಎಂದು ಧ್ರುವ ಬೇಸರದಿಂದ ಮೆಸೇಜ್ ಮಾಡಿದ್ದಾರೆ.

ಇಂದ್ರಜಿತ್ ಅವರು ಇತ್ತೀಚಿಗೆ ಮೃತಪಟ್ಟ ನಟನ ಮರಣೋತ್ತರ ಪರೀಕ್ಷೆ ಬಗ್ಗೆ ಮಾತನಾಡಿದ್ದರು. ಅಲ್ಲದೇ ಮರಣೋತ್ತರ ಪರೀಕ್ಷೆ ಯಾಕೆ ನಡೆಸಿಲ್ಲ ಎಂದು ಪ್ರಶ್ನಿಸಿದ್ದರು. ಇದರಿಂದ ಧ್ರುವ ಸರ್ಜಾ ಇಂದ್ರಜಿತ್ ಲಂಕೇಶ್ ವಿರುದ್ಧ ಸಿಟ್ಟಾಗಿದ್ದಾರೆ.

ಚಿರು ಸಾವಿನ ಬಗ್ಗೆ ಇಂದ್ರಜಿತ್ ಲಂಕೇಶ್ ಮಾತಿಗೆ ಪ್ರಶಾಂತ್ ಸಂಬರಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾವಿನ ನೋವಿನಲ್ಲಿರುವ ಸರ್ಜಾ ಫ್ಯಾಮಿಲಿಗೆ ಇಂದ್ರಜಿತ್ ಮತ್ತಷ್ಟು ನೋವು ಕೊಡುವ ಕೆಲಸ ಮಾಡಿದ್ದಾರೆ. ತುಂಬು ಗರ್ಭಿಣಿ ಮೇಘನಾಗೆ ಈ ವಿಚಾರ ಆಘಾತ ಉಂಟು ಮಾಡಿದೆ. ಈ ವಿಚಾರ ತಿಳಿದು ಮೇಘನಾ ಕಣ್ಣೀರು ಹಾಕಿದ್ದಾರೆ. ಡ್ರಗ್ ಮಾಫಿಯಾದಲ್ಲಿ ಅಣ್ಣನ ಹೆಸರು ಬಂದಿರುವುಕ್ಕೆ ಧ್ರುವ ಸರ್ಜಾ ಅವರಿಗೆ ಬೇಸರ ತಂದಿದೆ ಎಂದಿದ್ದಾರೆ.

ಇದೇ ಅಲ್ಲದೇ ಚಿರಂಜೀವಿ ಸರ್ಜಾ ಅವರ ಸಾವಿನ ಬಗ್ಗೆ ಅನುಮಾನ ಮೂಡುವಂತ ಹೇಳಿಕೆ ನೀಡಿರುವ ಇಂದ್ರಜಿತ್ ಕ್ಷಮೆಕೇಳಿ ಅವರ ಕುಟುಂಬದವರಿಗೆ ಆಗಿರುವ ಮಾನಸಿಕ ಅಘಾತವನ್ನು ಸ್ವಲ್ಪಮಟ್ಟಿಗಾದರೂ ನಿವಾರಿಸುವ ಪ್ರಯತ್ನ ಮಾಡಬೇಕು. ಜತೆಗೆ ಚಿರಂಜೀವಿ ಸರ್ಜಾ ಅವರ ಅಭಿಮಾನಿಗಳಲ್ಲಿ ಮೂಡಿರುವ ಗೊಂದಲಕ್ಕೆ ಇಂದ್ರಜಿತ್‌ ಸ್ಪಷ್ಟನೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

Leave a Reply

error: Content is protected !!
LATEST
ಬಡವರು-ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ನಿವೇಶನ ವಿತರಣೆ: ಡಾ.ಬಸ್ತಿ ರಂಗಪ್ಪ KSRTC ನಿರ್ದೇಶಕರ ಆದೇಶಕ್ಕೂ ಕಿಮ್ಮತ್ತಿಲ್ಲ: ಅಮಾನತು ತೆರವು ಮಾಡದೆ ಚಾಲಕನಿಗೆ ಮಾನಸಿಕ ಹಿಂಸೆ ಕೊಡುತ್ತಿರುವ ತುಮಕೂರು ... ಪ್ರಜ್ವಲ್ ರೇವಣ್ಣ ಪ್ರಕರಣ: ಅಶ್ಲೀಲ ವಿಡಿಯೋಗಳ ಹಂಚಿಕೆ ಅತ್ಯಂತ ಪಾಪ ಕೃತ್ಯ, ಸಂತ್ರಸ್ತೆಯರಿಗೆ ಅವಮಾನ- ಹೈಕೋರ್ಟ್ ವಿಶ್ವವಿಖ್ಯಾತ ಮೈಸೂರು ದಸರಾ ಗಂಡಾನೆಗಳ ನಡುವೆ ಕಿತ್ತಾಟ: ದಿಕ್ಕಾಪಾಲಾಗಿ ಓಡಿದ ಜನರು ಬನ್ನೂರು: ಬಸವನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಹೆಣ್ಣು ಚಿರತೆ ಸಾವು ಅ.3ರಿಂದ ಶಾಲೆಗಳಿಗೆ ದಸರಾ ರಜೆ: ಶಾಲಾ ಶಿಕ್ಷಣ ಇಲಾಖೆ ಆದೇಶ BMTC ನೌಕರರ ₹400 ಕೋಟಿ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮೀನಮೇಷ..!! KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ