CrimeNEWSಸಿನಿಪಥ

ಲವ್ ಯೂ ರಚ್ಚು : ನಾಯಕ ಅಜಯ್ ರಾವ್ ಇದ್ದರೂ ಏಕೆ ಈ ರೀತಿ ಹೇಳಿಕೆ ನೀಡಿದರೋ ಗೊತ್ತಿಲ್ಲ ಎಂದ ಗಾಯಾಳು ಫೈಟರ್

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನಿನ್ನೆ ಬಿಡದಿಯಲ್ಲಿ ಲವ್ ಯೂ ರಚ್ಚು ಸಿನಿಮಾದ ಸಾಹಸ ದೃಶ್ಯಗಳ ಚಿತ್ರೀಕರಣ ವೇಳೆ ಅವಘಡ ಸಂಭವಿಸಿ ವಿವೇಕ್ ಎಂಬ ಫೈಟರ್ ಸಾವನ್ನಪ್ಪಿದ್ದರು. ಮತ್ತೊಬ್ಬ ಫೈಟರ್ ರಂಜಿತ್ ಗಾಯಗೊಂಡು ಇದೀಗ ಆಸ್ಪತ್ರೆಯಲ್ಲಿದ್ದಾರೆ.

ಈ ದುರಂತ ನಡೆದಾಗ ನಾನು ಸ್ಪಾಟ್​ನಲ್ಲಿ ಇರಲಿಲ್ಲ. ನಾನು ಅಲ್ಲಿ ಇದ್ದಿದ್ದರೆ ಎಚ್ಚರಿಕೆ ವಹಿಸುವಂತೆ ಹೇಳುತ್ತಿದ್ದೆ ಎಂದು ಲವ್ ಯೂ ರಚ್ಚು ಚಿತ್ರದ ನಾಯಕನಟ ಅಜಯ್ ರಾವ್ ಹೇಳಿಕೆ ನೀಡಿದ ಬೆನ್ನಲ್ಲೇ ಗಾಯಾಳು ಫೈಟರ್ ರಂಜಿತ್ ನಾಯಕನಟನ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ.

ಆಸ್ಪತ್ರೆಯಲ್ಲಿ ಮಾತನಾಡಿದ ಫೈಟರ್ ರಂಜಿತ್, ತಾನು ಪೆಟ್ಟಾಗಿ ಬಿದ್ದಾಗ ಹೀರೋ ಅಲ್ಲೇ 10-15 ಮೀಟರ್ ದೂರದಲ್ಲೇ ಇದ್ದರು. ನನ್ನ ಸಹಾಯಕ್ಕೆ ಬರದೇ ಸುಮ್ಮನೆ ನೋಡುತ್ತಾ ಕೂತಿದ್ದರು. ಘಟನೆ ಸ್ಥಳದಲ್ಲಿ ತಾನು ಇರಲಿಲ್ಲ ಅಂತ ಮಾಧ್ಯಮದ ಮುಂದೆ ಯಾಕೆ ಹೇಳಿದ್ದಾರೋ ಗೊತ್ತಿಲ್ಲ ಎಂದು ಅಜಯ್ ರಾವ್ ಹೇಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಮೆಟಲ್ ರೋಪ್ ಬಳಸಿ ಸಾಹಸ ಚಿತ್ರೀಕರಣ ನಡೆಸಲಾಗುತ್ತಿತ್ತು. ಈ ವೇಳೆ ಕ್ರೇನ್ ಆಕಸ್ಮಿಕವಾಗಿ ಹೈ ಟೆನ್ಷನ್ ವೈರ್​ಗೆ ತಾಕಿದ ಪರಿಣಾಮ ಇಬ್ಬರು ಫೈಟರ್​ಗಳಿಗೆ ಶಾಕ್ ಹೊಡೆದಿದೆ. ವಿವೇಕ್ ಈ ಸಂದರ್ಭದಲ್ಲಿ ಮೆಟಲ್ ರೋಪ್ ಎಳೆಯುತ್ತಿದ್ದರೆನ್ನಲಾಗಿದೆ.

ಈ ಘಟನೆ ಬಗ್ಗೆ ನಾಯಕನಟ ಅಜಯ್ ರಾವ್ ಆಕ್ರೋಶ ವ್ಯಕ್ತಪಡಿಸಿದ್ದರು. ಸರಿಯಾದ ಮುಂಜಾಗ್ರತೆ ಇಲ್ಲದೇ ಚಿತ್ರೀಕರಣ ನಡೆಯುತ್ತಿತ್ತೆಂದು ಅವರು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಮೆಟಲ್ ರೋಪ್ ಬಳಕೆಯಿಂದ ಈ ದುರಂತ ಸಂಭವಿಸಿದೆ. ಸಾಹಸ ದೃಶ್ಯ ಚಿತ್ರೀಕರಣ ವೇಳೆ ಮುಂಜಾಗ್ರತೆ ವಹಿಸಬೇಕೆಂದು ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಹೀಗಾಗಿ ಎಲ್ಲದರಲ್ಲೂ ಮೂಗು ತೂರಿಸುತ್ತೇನೆಂದು ದೂರುತ್ತಾರೆ. ಮೆಟಲ್ ರೋಪ್ ಬಳಸಬಾರದು ಎಂದು ಹೇಳಿ ನಾನು ಕೆಟ್ಟವನಾಗಿ ಹೋಗಿದ್ದೆ. ಈಗ ದುರಂತ ಆಗಿ ಹೋಗಿದೆ. ಮೃತ ವಿವೇಕ್​ಗೆ ನ್ಯಾಯ ಸಿಗುವವರೆಗೂ ಶೂಟಿಂಗ್​ಗೆ ಹೋಗುವುದಿಲ್ಲ ಎಂದು ಅಜಯ್ ರಾವ್ ಹೇಳಿದ್ದರು.

ಈ ಪ್ರಕರಣದಲ್ಲಿ ಪೊಲೀಸರು ಚಿತ್ರದ ನಿರ್ದೇಶಕ ಶಂಕರ್ ರಾಜು, ಸ್ಟಂಟ್ ಮಾಸ್ಟರ್ ವಿನೋದ್, ಶೂಟಿಂಗ್ ಸ್ಪಾಟ್​ನ ಜಮೀನು ಮಾಲೀಕ ಪುಟ್ಟರಾಜು ಹಾಗೂ ಕ್ರೇನ್ ಚಾಲಕ ಮುನಿಯಪ್ಪ ಈ ನಾಲ್ವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇಂದು ಬಿಡದಿ ಠಾಣೆಯಲ್ಲಿ ಮೃತ ವಿವೇಕ್ ಕುಟುಂಬದವರಿಂದ ದೂರು ದಾಖಲಾಗುವ ಸಾಧ್ಯತೆ ಇದೆ.

ಸ್ಟಂಟ್ ಮಾಸ್ಟರ್ ವಿನೋದ್ ಅವರ ಬೇಜವಾಬ್ದಾರಿತನದಿಂದ ಈ ಘಟನೆ ಆಗಿ ಹೋಗಿದೆ ಎಂಬಂತಹ ದೂರುಗಳು ಕೇಳಿಬರುತ್ತಿವೆ. ಆದರೆ, ಗಾಯಗೊಂಡಿರುವ ಫೈಟರ್ ರಂಜಿತ್ ಅವರು ಈ ಅಭಿಪ್ರಾಯಗಳನ್ನ ತಳ್ಳಿಹಾಕಿದ್ದಾರೆ.

ಸ್ಟಂಟ್ ಮಾಸ್ಟರ್ ಜೊತೆ ಏಳೆಂಟು ವರ್ಷಗಳಿಂದ ತಾನು ಕೆಲಸ ಮಾಡುತ್ತಿದ್ದೇನೆ. ಅವರಷ್ಟು ಕೇರ್ ಮಾಡುವ ಮಾಸ್ಟರ್ ಅನ್ನು ನಾನು ನೋಡಿಯೇ ಇಲ್ಲ. ಅವರ ಬಗ್ಗೆ ಊಹಾಪೋಹ ಹರಿದಾಡುತ್ತಿರುವುದನ್ನು ನಾನು ಒಪ್ಪಲ್ಲ. ಕ್ರೇನ್ ಆಪರೇಟರ್ ಮಿಸ್ಟೇಕ್​ನಿಂದ ಮಾತ್ರ ಈ ಘಟನೆ ಆಗಿದೆ. ಅದು ಬಿಟ್ಟರೆ ಬೇರೆ ಯಾರೂ ಇದಕ್ಕೆ ಹೊಣೆಯಲ್ಲ ಎಂದು ರಂಜಿತ್ ಹೇಳಿದ್ದಾರೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು