ಬೆಂಗಳೂರು: ರಾಷ್ಟ್ರ ಪ್ರಶಸ್ತಿ ವಿಜೇತ ಪುನೀತ್ ರಾಜ್ ಕುಮಾರ್ ಅವರ ಅಂತಿಮ ವಿಧಿವಿಧಾನಗಳನ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ಸ್ಥಳವನ್ನು ಅವರ ಕುಟುಂಬದವರು ನಿರ್ಧಾರ ಮಾಡುತ್ತಾರೆ. ಅದರಂತೆಯೇ ನಾವು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸುತ್ತೇವೆ ಎಂದು ತಿಳಿಸಿದರು.
ಅಪ್ಪು ನನಗೆ ಚಿಕ್ಕಂದಿನಿಂದಲೂ ಪರಿಚಯ. ಅವರ ಕುಟುಂಬದೊಂದಿಗೆ ನನಗೆ ಒಳ್ಳೆಯ ಸಂಬಂಧ ಇತ್ತು, ಅವರ ಆ ಚಿಕ್ಕ ವಯಸ್ಸಿನಿಂದ ಹಿಡಿದು ಅವರು ನಟನೆಯಲ್ಲಿ ಇಷ್ಟು ಎತ್ತರಕ್ಕೆ ಬೆಳೆದಿದ್ದನ್ನು ನಾನು ನೋಡಿದ್ದೆ. ಆದರೆ ಇಷ್ಟು ಚಿಕ್ಕ ವಯಸ್ಸಿಗೆ ವಿಧಿ ಅವರ ಬಾಳಲ್ಲಿ ಹೀಗೆ ಆಟವಾಡಬಾರದಿತ್ತು ಎಂದು ಕಂಬನಿ ಮಿಡಿದರು.
ನವೆಂಬರ್ 1ನೇ ತಾರೀಕು ತಮ್ಮ ಮಹತ್ವಾಕಾಂಕ್ಷೆಯ ಲರ್ನಿಂಗ್ ಆಪ್ ಅನ್ನು ಬಿಡುಗಡೆ ಮಾಡುವುದಕ್ಕೆ ಯೋಜನೆ ರೂಪಿಸಿದ್ದರು. ಹೀಗಾಗಿ ಅಪ್ಪು ಇಂದು ನನ್ನನ್ನು ಭೇಟಿಯಾಗುವುದಕ್ಕೆ ಸಮಯ ಕೂಡ ನಿಗದಿಯಾಗಿತ್ತು, ಆದರೆ ಇಂದು ನನ್ನನ್ನು ಭೇಟಿ ಈ ರೀತಿಯಾಗಿ ಮಾಡಿಸಿದ್ದಾನೆ ಎಂದು ತಮ್ಮ ಹೇಳಿದರು.