ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ದೇಶಾದ್ಯಂತ ಕೊರೊನಾ ಸೋಂಕು ನಿಯಂತ್ರಕ್ಕೆ ಲಸಿಕೆ ಹಾಕುವ ಅಭಿಯಾನ ಇಂದು ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಹಲವು ಕೇಂದ್ರಗಳಲ್ಲಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಇನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿ ಅವರು, ರಾಜ್ಯದ 243 ಕಡೆ ಲಸಿಕೆ ಅಭಿಯಾನ ಇಂದು ಆರಂಭವಾಗಿದ್ದು, ಪ್ರತಿ ಕೇಂದ್ರದಲ್ಲಿ 100 ಜನರಿಗೆ ಲಸಿಕೆ ಹಾಕಲಾಗುವುದು. ಇನ್ನು ನಾಳೆಯಿಂದ ಪ್ರತಿನಿತ್ಯ ಲಸಿಕೆ ಹಾಕುವುದು ಹೆಚ್ಚಾಗುತ್ತ ಹೋಗುತ್ತದೆ ಎಂದು ತಿಳಿಸಿದರು.
ದೇಶದ ಪ್ರಧಾನಿ ನರೇಂದ್ರ ಮೋದಿಯವರು ದೇಶಾದ್ಯಂತ 3 ಕೋಟಿ ಜನರಿಗೆ ಲಸಿಕೆ ಹಾಕುವುದುಕ್ಕೆ ಚಾಲನೆ ನೀಡಿದ್ದಾರೆ. ಅವರ ಪ್ರಯತ್ನ ಮತ್ತು ವಿಜ್ಞಾನಿಗಳ ಅವಿರತ ಶ್ರಮದಿಂದ ಇಂದು ನಮ್ಮ ದೇಶದಲ್ಲೇ ಲಸಿಕೆ ಕಂಡು ಹಿಡಿದು ಹಾಕಲಾಗುತ್ತಿದೆ. ಇದಕ್ಕೆ ಮೋದಿಯವರಿಗೆ ರಾಜ್ಯದ ಜನರ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ ಎಂದು ಹೇಳಿದರು.
ಜತೆಗೆ ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್ಗೆ ಲಸಿಕೆ ಹಾಕಲಾಗುತ್ತಿದೆ. ನಂತರ ಪೊಲೀಸ್ ಇಲಾಖೆ ಸೇರಿ ವಿವಿಧ ವಿಭಾಗದಲ್ಲಿ ಲಸಿಕೆ ಹಾಕಲಾಗುವುದು.
ಇನ್ನು ವಿಕ್ಟೋರಿಯಾ ಆಸ್ಪತ್ರೆಯ ಡಿ ಗ್ರೂಪ್ ನೌಕರೆ ನಾಗರತ್ನ ಎಂಬುವರಿಗೆ ಲಸಿಕೆ ನೀಡಲಾಗಿದೆ. ಇವರ ಜತೆಗೆ ಹಲವರಿಗೆ ಲಸಿಕೆ ಹಾಕುವ ಕಾರ್ಯ ಮುಂದುವರಿದಿದೆ.
ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಕೋವಿಡ್ ಮೊದಲ ಲಸಿಕೆಯನ್ನು ಕೊರೊನಾ ವಾರಿಯರ್ಸ್ ಮತ್ತು ಆಸ್ಪತ್ರೆಯ ಡಿ ಗ್ರೂಪ್ ನೌಕರ ಚಂದ್ರಶೇಖರ್ ಎಂಬುವರಿಗೆ ನೀಡಲಾಗಿದ್ದು, ಅವರಿಗೆ 30 ನಿಮಿಷಗಳ ಬಳಿಕವು ಯಾವುದೇ ಕೆಟ್ಟ ಪರಣಾಮ ಬೀರಿಲ್ಲ.
ಹೀಗಾಗಿ ಚಂದ್ರಶೇಖರ್ ಅವರೇ ಬೇರೆಯವರಿಗೆ ಈ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದು, ಕೋವಿಶೀಲ್ಡ್ ವ್ಯಾಕ್ಸಿನ್ನಿಂದ ಯಾವುದೇ ದುಷ್ಪರಿಣಾಮವಿಲ್ಲ ಧೈರ್ಯದಿಂದ ಲಸಿಕೆ ಪಡೆದುಕೊಳ್ಳಿ ಎಂದು ಹೇಳಿದ್ದಾರೆ.
ಇನ್ನು ಎರಡನೇಯದಾಗಿ ಮಲ್ಲಸಂದ್ರದ ಆರೋಗ್ಯ ಕೇಂದ್ರದಲ್ಲಿ ಡಾ. ಕೋಮಲಾ ಅವರಿಗೆ ಲಸಿಕೆ ನೀಡಿದ್ದು ಅವರಿಗೂ ಯಾವುದೇ ರೀತಿಯ ಸೈಟ್ ಎಫೆಕ್ಟ್ ಆಗಿಲ್ಲ.
Flagged off the Covid vaccination drive in Karnataka at the Bangalore Medical College. The first vaccination was administered to Smt Nagarathna, a Corona warrior working at the Victoria Hospital. Health Minister @mla_sudhakar & Union Minister @JoshiPralhad were present. pic.twitter.com/QGA9XJlbjh
— B.S. Yediyurappa (@BSYBJP) January 16, 2021