ವಿಜಯಪಥ ಸಮಗ್ರ ಸುದ್ದಿ
ಚಾಮರಾಜನಗರ: ಬೆಂಗಳೂರಿನಿಂದ ಚಾಮರಾಜನಗರ ಜಿಲ್ಲೆ, ಕೊಳ್ಳೆಗಾಲ ತಾಲೂಕು, ಸರಗೂರು ಗ್ರಾಮದ ನಿವಾಸಿ ಮಹೇಂದ್ರ ಎಂಬುವರಿಗೆ ಆಕ್ಸಿಜನ್ ಕಾನ್ಸೆಂಟ್ರೇಟರ್ (Oxygen Concentrator) ತಲುಪಿಸುವ ಮೂಲಕ ಆಮ್ ಆದ್ಮಿ ಪಕ್ಷ ಮಾನವೀಯತೆ ಮೆರೆದಿದೆ.
ಶೋರೂಂ ಒಂದರಲ್ಲಿ ಆಫೀಸ್ ಬಾಯ್ ಆಗಿ ಕೆಲಸ ಮಾಡುತ್ತಿರುವ ಸರಗೂರಿನ 37 ವರ್ಷದ ಮಹೇಂದ್ರ ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಜಿಲ್ಲಾ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರೋಗಿಗಳ ಸಂಖ್ಯೆ ದಿನೇದಿನೆ ಹೆಚ್ಚುತ್ತಿದ್ದರಿಂದ, ಮೂರು ದಿನದ ಬಳಿಕ ಅಲ್ಲಿನ ವೈದ್ಯರು ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಹೋಗಲು ಒತ್ತಡ ಹಾಕುತ್ತಿದ್ದರು.
ಹೀಗಾಗಿ ಮಹೇಂದ್ರ ಮನೆಗೆ ಮರಳಿದ್ದರು. ಆದರೆ ಉಸಿರಾಟದ ಸಮಸ್ಯೆ ಮಾತ್ರ ಕಡಿಮೆಯಾಗಿರಲಿಲ್ಲ. ಆತ 75 ಸಾವಿರ ರೂ.ಕೊಟ್ಟು Oxygen Concentrator ಖರೀದಿ ಮಾಡಲು ಸಾಧ್ಯವೆ? ಹಾಗಂತ ಚಿಕಿತ್ಸೆ ಕೊಡಿಸದೆ ಇರುವುದಕ್ಕೂ ಸಾಧ್ಯವಿಲ್ಲ. ಹೀಗಾಗಿ ಮಹೇಂದ್ರ ಅವರ ಸಂಬಂಧಿಯೊಬ್ಬರು ಬೆಂಗಳೂರಲ್ಲಿ ವಾಸವಿದ್ದು ಆಮ್ ಆದ್ಮಿ ಪಾರ್ಟಿ ಬೆಂಗಳೂರಿನ ಅಧ್ಯಕ್ಷ ಮೋಹನ್ ದಾಸರಿ ಅವರನ್ನುಫೋನ್ ಮೂಲಕ ಸಂಪರ್ಕಿಸಿದರು. ಮಹೇಂದ್ರ ಅವರ ಜೀವ ಉಳಿಸಲು ಸಹಾಯಮಾಡಲು ಕೇಳಿಕೊಂಡರು. ಅವರ ಕರೆಗೆಓಗೊಟ್ಟು ಅವರಿಗೆ ಇಂದು ಬೆಳಗ್ಗೆ ಸ್ವತಃ ಗ್ರಾಮಕ್ಕೆ ಹೋಗಿ ಆಕ್ಸಿಜನ್ ಕಾಂಸೆಂಟ್ರೇಟರ್ ಕೊಟ್ಟು ಬಂದಿದ್ದಾರೆ.
ಈ ರೀತಿ ಎಷ್ಟು ಮಹೇಂದ್ರ ಅಂಥವರನ್ನು ಉಳಿಸಲು ಸಾಧ್ಯ? ನಾವು ನಮ್ಮ ಸ್ನೇಹಿತರ ದೇಣಿಗೆಗಳ ಮುಖಾಂತರ ಇಪ್ಪತ್ತು concentrator ಗಳನ್ನು ಖರೀದಿ ಮಾಡಿ ಉಚಿತವಾಗಿ ನೀಡುತ್ತಿದ್ದೇವೆ. ಇದೇ ಕೆಲಸವನ್ನು ಸರ್ಕಾರ ಮಾಡಬಹುದಲ್ಲ?
ದೆಹಲಿ ಸಿಎಂ ಅರವಿಂದ ಕೇಜ್ರೀವಾಲ್ ಅವರ ನೇತೃತ್ವದ ಆಮ್ ಆದ್ಮಿ ಪಾರ್ಟಿ ಸರ್ಕಾರ ದೆಹಲಿಯ 7 ಜಿಲ್ಲೆಗಳಲ್ಲಿ 200 Oxygen Concentrator ಬ್ಯಾಂಕ್ ಗಳನ್ನು ಸ್ಥಾಪಿಸಿದೆ. ಇದರಿಂದ ಯಾರೊಬ್ಬರೂ ಆಮ್ಲಜನಕದ ಕೊರತೆಯಿಂದ ಸಾಯುವುದಿಲ್ಲ. ಸರ್ಕಾರಗಳು ಜನರ ಪರವಾಗಿ ಕೆಲಸ ಮಾಡಬೇಕೆಂಬ ಇಚ್ಚಾಶಕ್ತಿ ಇದ್ದಲ್ಲಿ ಇವೆಲ್ಲಾ ನಮ್ಮ ಚಾಮರಾಜನಗರದಲ್ಲೂ ಮಾಡಲು ಸಾದ್ಯ ಎಂದು ಮೋಹನ್ ದಾಸರಿ ಹೇಳಿದ್ದಾರೆ.