NEWSದೇಶ-ವಿದೇಶರಾಜಕೀಯ

ಅನಗತ್ಯ ರೆಮ್‌ಡಿಸಿವರ್ ಔಷಧದ ಬಳಕೆ ತಡೆದು ಜನತೆಯ ಗೊಂದಲ ಬಗೆಹರಿಸಿ: ಡಾ. ರಮೇಶ್ ಬೆಳ್ಳಕೊಂಡ ಆಗ್ರಹ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಅನಗತ್ಯ ರೆಮ್‌ಡಿಸಿವರ್ ಔಷಧದ ಬಳಕೆಯನ್ನು ತಡೆಹಿಡಿದು ಜನತೆಯ ಗೊಂದಲವನ್ನು ಬಗೆಹರಿಸಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಆಮ್ ಆದ್ಮಿ ಪಕ್ಷದ ವೈದ್ಯಕೀಯ ವಿಭಾಗದ ಹಿರಿಯ ಮುಖಂಡ ಡಾ. ರಮೇಶ್ ಬೆಳ್ಳಕೊಂಡ ಆಗ್ರಹಿಸಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಇಂದು ನಗರದ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಜನತೆ ವೈದ್ಯಕೀಯ ಸೌಲಭ್ಯಗಳಿಗಾಗಿ ಪರದಾಡುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಬೆಡ್, ಆಮ್ಲಜನಕ, ವೆಂಟಿಲೇಟರ್, ಔಷಧ ಮೊದಲಾದವು ಇಲ್ಲದೆ ತತ್ತರಿಸಿ ಹೋಗಿದ್ದಾರೆ. ಇವೆಲ್ಲದರ ನಡುವೆ ದೇಶದಲ್ಲಿ ಔಷಧ ಮಾಫಿಯಾಗಳು ತಲೆ ಎತ್ತಿ ಜನತೆಯ ರಕ್ತ ಹೀರುತ್ತಿವೆ. ಇವುಗಳಿಗೆ ಸರಕಾರದ ನೀತಿಗಳು ಕೂಡ ಪೂರಕವಾಗಿವೆ ಎಂದು ಆರೋಪಿಸಿದರು.

ಕರ್ನಾಟಕ ಸೇರಿದಂತೆ ದೇಶದಾದ್ಯಂತ ಜನರು ರೆಮ್‌ಡಿಸಿವರ್ ಔಷಧದ ಬೆನ್ನು ಬಿದ್ದಿದ್ದಾರೆ. ಈ ಔಷಧದ ಬಗ್ಗೆ ವ್ಯಾಪಕ ಭಿನಾಭಿಪ್ರಯಾಗಳು ಇರುವುದರಿಂದ ಅವೆಲ್ಲವನ್ನೂ ಪರಿಗಣಿಸದೆ ಒಂದು ಡೋಸ್ ಗೆ ಐದು ಸಾವಿರ ರೂಪಾಯಿಗಳಿಗೆ ಆಸ್ಪತ್ರೆಗಳಲ್ಲಿ ಅಧಿಕೃತವಾಗಿ ನೀಡಲಾಗುತ್ತಿದೆ. ಜನತೆ ಈ ಇಂಜಕ್ಷನ್ ಸಿಗದೆ ಕಾಳ ಸಂತೆಯಲ್ಲಿ ಹತ್ತು ಸಾವಿರಕ್ಕೂ ಅಧಿಕ ಬೆಲೆ ನೀಡಿ ಖರೀದಿಸುತ್ತಿದ್ದಾರೆ. ಆದರೆ ಕೇಂದ್ರ ಮತ್ತು ರಾಜ್ಯ ಸರಕಾರ ಮಾತ್ರ ರೆಮ್‌ಡಿಸಿವರ್ ಔಷಧ ಅಗತ್ಯತೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ಜನರು ಈ ಔಷಧಕ್ಕಾಗಿ ಹಾಹಾಕಾರ ಪಡುವಂತೆ ಮಾಡಿದೆ ಕಿಡಿಕಾರಿದರು.

ನವೆಂಬರ್ 20,2021 ರಂದು ವಿಶ್ವ ಆರೋಗ್ಯ ಸಂಸ್ಥೆ 7 ಸಾವಿರ ರೋಗಿಗಳ ಮೇಲೆ ನಾಲ್ಕು ಬಾರಿ ಟ್ರಯಲ್ ನಡೆಸಿ ರೆಮ್‌ಡಿಸಿವರ್ ಕೊರೊನಾ ರೋಗಿಗಳ ಮೇಲೆ ಯಾವುದೇ ಧನಾತ್ಮಕ ಪರಿಣಾಮವನ್ನು ಬೀರುವುದಿಲ್ಲ ಎಂದು ವರದಿ ಮಾಡಿದೆ.

ಪಾಟ್ನಾ ಏಮ್ಸ್ (AIIMS) ನ ನಿರ್ದೇಶಕ ಡಾ. ಪ್ರಭಾತ್ ಕುಮಾರ್ ಸಿಂಗ್ ರೆಮಿಡಿಸಿವರ್ ಒಂದು ಜೀವ ಉಳಿಸುವ ಡ್ರಗ್ ಅಲ್ಲ, ಇದರಿಂದ ಏನೂ ಪ್ರಯೋಜನ ಇಲ್ಲ ಎಂದು ಹೇಳಿಕೆಯನ್ನು ನೀಡಿದ್ದಾರೆ. ಅಲ್ಲದೆ ಪಾಟ್ನಾ ಏಮ್ಸ್ ಕೋವಿಡ್-19 ರೋಗಿಗಳಿಗೆ ಈ ಔಷಧವನ್ನು ನೀಡುತ್ತಿಲ್ಲ ಎಂದು ಪಾಟ್ನಾ ಹೈಕೋರ್ಟ್ ನಲ್ಲಿ ಹೇಳಿಕೆ ನೀಡಿದ್ದಾರೆ.

ದೆಹಲಿ ಏಮ್ಸ್ (AIIMS) ನ ನಿರ್ದೇಶಕ ರಣದೀಪ್ ಗುಲೇರಿಯ ರೆಮಿಡಿಸಿವರ್ ಇಂಜೆಕ್ಷನ್ ಕೊರೋನ ಸೋಂಕು ಗುಣಪಡಿಸುವ ಮ್ಯಾಜಿಕ್ ಬುಲ್ಲೆಟ್ ಅಲ್ಲ, 85% ಸೋಂಕಿತರು ರೆಮಿಡಿಸಿವರ್ ನಂತಹ ಚಿಕಿತ್ಸೆಯ ಅಗತ್ಯ ಇಲ್ಲದೆ ಗುಣಮುಖವಾಗಬಲ್ಲರು ಎಂದು ಹೇಳಿಕೆ ನೀಡಿದ್ದಾರೆ.

ರೆಮ್‌ಡಿಸಿವರ್ ಅಗತ್ಯ ಇಲ್ಲ ಎಂದು ಅಧಿಕೃತ ಆರೋಗ್ಯ ಸಂಸ್ಥೆಗಳು ಹೇಳಿಕೆ ನೀಡಿರುವಾಗ ಕೇಂದ್ರ ಮತ್ತು ರಾಜ್ಯ ಸರಕಾರ ಈ ಔಷಧದ ಬೆನ್ನು ಬಿದ್ದಿರುವುದು ಯಾಕೆ? ಔಷಧ ಕಂಪನಿಗಳ ಜೊತೆಗೆ ಶಾಮೀಲಾಗಿರುವುದರಿಂದ ಅವಶ್ಯಕವಲ್ಲದ ಈ ಔಷಧವನ್ನು ಬಳಸುತ್ತಿದೆಯೇ ಎಂದು ಪ್ರಶ್ನಿಸಿದರು.

ಸೋಂಕನ್ನು ಗುಣಪಡಿಸದ ರೆಮಿಡಿಸಿವರ್ ಬಳಕೆಯ ಬಗ್ಗೆ ಅಧಿಕೃತ ಹೇಳಿಕೆಗಳನ್ನು ನೀಡಿ ಜನತೆಯಲ್ಲಿರುವ ಗೊಂದಲವನ್ನು ಸರಕಾರ ಬಗೆಹರಿಸಬೇಕು. ಈ ನಿಟ್ಟಿನಲ್ಲಿ ತಕ್ಷಣ ವೈದ್ಯಕೀಯ ತಜ್ಞರ ತಂಡವನ್ನು ರಚಿಸಿ ರೆಮ್‌ಡಿಸಿವರ್ ನ ಅಗತ್ಯದ ಬಗ್ಗೆ ಚರ್ಚೆ ನಡೆಸಿ ಅಧಿಕೃತ ಹೇಳಿಕೆಯನ್ನು ನೀಡಬೇಕು. ಅನಗತ್ಯ ಔಷಧಗಳ ಬಳಕೆಯನ್ನು ಜಾರಿಗೆ ತಂದು ಜನತೆಯನ್ನು ಗೊಂದಲಕ್ಕೆ ತಳ್ಳುವ ಬದಲು ಆಕ್ಸಿಜನ್ ಕೊರತೆ, ವೆಂಟಿಲೇಟರ್, ಬೆಡ್ ಮೊದಲಾದ ಅಗತ್ಯದ ಸೌಲಭ್ಯಗಳ ಕಡೆಗೆ ಗಮನ ನೀಡಬೇಕು ಎಂದು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

Leave a Reply

error: Content is protected !!
LATEST
ಬೆಳಗಾವಿಯಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಬರಾಕ್ ಓಬಾಮಾ ಆಹ್ವಾನಕ್ಕೆ ಚಿಂತನೆ : ಸಚಿವ ಎಚ್.ಕೆ. ಪಾಟೀಲ ಹಸಿರು ಪಟಾಕಿ ಬಳಸಿ ದೀಪಾವಳಿ ಹಬ್ಬ ಆಚರಿಸಿ- ನಿಷೇಧಿತ ಪಟಾಕಿ ಮಾರಾಟ, ಬಳಕೆ ನಿಷೇಧ: ಜಿಲ್ಲಾಧಿಕಾರಿ ಡಾ.ಶಿವಶಂಕರ ಕೆಂಗೇರಿ ಕೆರೆಯಲ್ಲಿ ಮೃತಪಟ್ಟ ಇಬ್ಬರು ಮಕ್ಕಳ ಕುಟುಂಬಕ್ಕೆ ₹5 ಲಕ್ಷ ಪರಿಹಾರ APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು? APSRTC ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿ, 5 ತಿಂಗಳ ಫ್ಯಾಮಿಲಿ ಪಾಸ್‌, ಇನ್ನಷ್ಟು ಸೌಲಭ್ಯಗಳು ಸೇರ್ಪಡೆ BBMP: ನಗರದಲ್ಲಿ ವಿಪತ್ತು ನಿರ್ವಹಣೆಯ ನಿವಾರಣೆಗೆ ತುರ್ತು ಕ್ರಮ: ತುಷಾರ್ ಗಿರಿನಾಥ್ ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ ! KSRTC: ಇದು ನಿನ್ನ ಮಗುವಲ್ಲ, ಪ್ಯಾಸೆಂಜರ್‌, ಫ್ಯಾಮಿಲಿ ಎದುರೆ ಸಹೋದ್ಯೋಗಿಯ ಅವಮಾನಿಸಿದ ಕಂಡಕ್ಟರ್‌!!? ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ