ಬೆಂಗಳೂರು: ರಾಜ್ಯದಲ್ಲಿ ಒಬ್ಬರು ಮೃತಪಟ್ಟಿದ್ದು ಈ ಮೂಲಕ ಇದುವರೆಗೆ ಕೊರೊನಾಗೆ ಬಲಿಯಾದವರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಜತೆಗೆ ಇಂದು ಬೆಳಗ್ಗೆ 8 ಹೊಸ ಕೊರೊನಾ ಪಾಲಿಸಿಟಿವ್ ಇದ್ದದ್ದು ಸಂಜೆ ವೇಳೆಗೆ 4 ಪ್ರಕರಣ ಕಾಣಿಸಿಕೊಂಡು ಒಟ್ಟು ಒಂದು 12 ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ಕೋವಿಡ್-19 ಸೋಂಕಿತರ ಸಂಖ್ಯೆ 705ಕ್ಕೆ ಏರಿಕೆಯಾಗಿದೆ.
ದಾವಣಗೆರೆಯಲ್ಲಿ ರೋಗಿ ಸಂಖ್ಯೆ 694ರ 55 ವರ್ಷದ ಕೊರೊನಾ ಸೋಂಕಿತ ಮಹಿಳೆ ಮೃತಪಟ್ಟಿದ್ದು ಈ ಮೂಲಕ ರಾಜ್ಯದಲ್ಲಿ 30 ಜನರು ಮೃತಪಟ್ಟಿದ್ದು, 366 ಜನರು ರೋಗದಿಂದ ಮುಕ್ತಗೊಂಡು ಮನೆಗೆ ಮರಳಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಿ: https://play.google.com/store/apps/detail
ಇನ್ನು ದಾವಣಗೆರೆಯಲ್ಲಿ 4, ಬಾಗಲಕೋಟೆಯ ಬಾದಾಮಿ ಮತ್ತು ಕಲಬುರಗಿಯಲ್ಲಿ ತಲಾ ಮೂರು ಸೋಂಕಿತರು ಹಾಗೂ ಬೆಳಗಾವಿಯ ಹಿರೇಬಾಗೇವಾಡಿ, ಬೆಂಗಳೂರಿನಲ್ಲಿ ತಲಾ ಒಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟಾರೆ 705 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.
ಇನ್ನು 308 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ 30 ಮಂದಿ ಮೃತಪಟ್ಟಿದ್ದಾರೆ. ಮೈಸೂರಿನಲ್ಲಿ ಯಾವುದೇ ಪಾಸಿಟಿವ್ಪ್ರಕರಣ ವರದಿಯಾಗಿಲ್ಲ.
ದೇಶದಲ್ಲಿ 53,049 ಕ್ಕೇರಿದ ಸೋಂಕಿತರ ಸಂಖ್ಯೆ
ಇನ್ನು ದೇಶದಲ್ಲಿ ಈವರೆಗೆ 53,049 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. 1,787 ಮಂದಿ ಮೃತಪಟ್ಟಿದ್ದಾರೆ. 15,331 ಮಂದಿ ರೋಗಮುಕ್ತರಾಗಿದ್ದಾರೆ. ಪ್ರಪಂಚಾದ್ಯಂತ ಈವರೆಗೆ 38,46,533 ಜನರಲ್ಲಿ ಸೋಂಕು ಇರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಖಚಿತಪಡಿಸಿದೆ. ಇನ್ನು 2,65,882 ಜನರು ಮೃತಪಟ್ಟಿದ್ದಾರೆ. 13,15,718 ಮಂದಿ ರೋಗದಿಂದ ಮುಕ್ತಗೊಂಡಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಿ: https://play.google.com/store/apps/detail