ಬೆಂಗಳೂರು: ಡ್ರಗ್ ಡೀಲರ್ 24 ವರ್ಷ ವಯಸ್ಸಿನವಳಾದ ಅನಿಕಾ ಬಗ್ಗೆ ಎನ್‍ಸಿಬಿ ಅಧಿಕಾರಿಗಳು ಆಕೆಯೆ ಪೂರ್ಣ ಮಾಹಿತಿ ಕಲೆಹಾಕಿದ್ದು, ಈಕೆ ತಮಿಳುನಾಡು ಮೂಲದವಳು ಎಂದು ತಿಳಿಸಿದ್ದಾರೆ.
ಕಳೆದ ಗುರುವಾರ ಎನ್‍ಸಿಬಿ ಅಧಿಕಾರಿಗಳು ಹೈಟೆಕ್ ಡ್ರಗ್ ದಂಧೆ ಮಾಡುತ್ತಿದ್ದ ಮೂವರನ್ನು ಬಂಧಿಸಿದ್ದರು. ಅವರು ದೊಡ್ಡ ಶ್ರೀಮಂತರು, ಸಿನಿಮಾ ನಟ-ನಟಿಯರಿಗೆ ಡ್ರಗ್ ಸಪ್ಲೇ ಮಾಡುತ್ತಿದ್ದರು ಎಂಬ ಮಾಹಿತಿ ಹೊರಬಂದಿತ್ತು. ಅದರಲ್ಲಿ ಬಂಧಿತಳಾದ ಲೇಡಿ ಕಿಂಗ್‍ಪಿನ್ ಅನಿಕಾಳು ಒಬ್ಬಳು.
ಲೇಡಿ ಡ್ರಗ್ ಡೀಲರ್ ನಿಜವಾದ ಹೆಸರು ಅನಿಕಾ, ಆದರೆ ಇವಳು ಮೂರು ನಕಲಿ ನೇಮ್‍ಗಳನ್ನು ಇಟ್ಟುಕೊಂಡಿದ್ದಳು. ಅನಿಕಾ ಡಿ, ಅನಿ ಮತ್ತು ಬಿಮನಿ ಎಂದು. ಈ ಹೆಸರುಗಳಿಂದ ಒಂದೊಂದು ಬಾರಿಗೆ ಒಬ್ಬೊಬ್ಬರ ಪರಿಚಯಿಸಿಕೊಂಡು ಡ್ರಗ್ ಡೀಲ್ ಮಾಡುತ್ತಿದ್ದಳು. ಈಕೆ ಸಾಮಾಜಿಕ ಜಾಲತಾಣದಲ್ಲಿ ಬಿಮನಿ ಎಂಬ ಹೆಸರು ಬಳಸುತ್ತಿದ್ದಳು ಎಂಬ ಮಾಹಿತಿ ಲಭಿಸಿದೆ.
ಅನಿಕಾ ತಮಿಳುನಾಡಿನ ಸೇಲಂ ಸಮೀಪದ ಯರ್ಕಾಡ್ ಮೂಲದವಳು. ಅನಿಕಾ ತಂದೆ ದಿನೇಶ್‍ಗೆ ಮೂವರು ಮಕ್ಕಳಿದ್ದು, ಅನಿಕಾಳೇ ದೊಡ್ಡವಳು. ಅನಿಕಾಗೆ ಒಬ್ಬಳು ತಂಗಿ, ಒಬ್ಬ ತಮ್ಮ. ಅವರು ತಮಿಳುನಾಡಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅನಿಕಾ ಯರ್ಕಾಡ್‍ನ ಶೆವ್ರಾಯ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ಹೋಟೆಲ್ ಮ್ಯಾನೇಜ್‍ಮೆಂಟ್ ಡಿಗ್ರಿಯ ಎರಡನೇ ವರ್ಷದಲ್ಲಿ ಫೇಲ್ ಆಗಿ ವಿದ್ಯಾಭ್ಯಾಸ ಬಿಟ್ಟಿದ್ದಾಳೆ.
ಬಳಿಕ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ ಅನಿಕಾ, ಕೆಲಸ ಸಿಗದೇ ಡ್ರಗ್ ಜಾಲಕ್ಕೆ ಬಿದ್ದಿದ್ದಾಳೆ. ನಗರದ ದೊಡ್ಡಗುಬ್ಬಿಯ ಐಶ್ವರ್ಯ ನಿಲಯದಲ್ಲಿ ವಾಸವಾಗಿದ್ದು, ಇಲ್ಲಿಂದಲೇ ಡ್ರಗ್ ದಂಧೆ ನಡೆಸುತ್ತಿದ್ದಳು. ಮುಂಬೈನ ಡ್ರಗ್ ಪೆಡ್ಲರ್ ಕೊಟ್ಟ ಮಾಹಿತಿ ಮೇರೆಗೆ ಈಕೆ ಮನೆಯ ಮೇಲೆ ದಾಳಿ ಮಾಡಿದಾಗ, ಎಂಡಿಎಂಎ ಎಂಬ ಮಾದಕ ವಸ್ತು ಸಮೇತ ಸಿಕ್ಕಿಬಿದ್ದು ಬಂಧಿತಲಾಗಿದ್ದಾಳೆ.
ಇನ್ನು ಈ ದಂಧೆಯಲ್ಲಿ ಇರುವ ಕಿಂಗ್‌ಪಿನ್‌ಗಳು ಎಲ್ಲೆಲ್ಲೆ ಇದ್ದಾರೆ ಇವರ ಜಾಲ ಎಲ್ಲಿವರೆಗೆ ವಿಸ್ತರಿಸಿದೆ. ಬರಿ ಬೆಂಗಳೂರು ಅಷ್ಟೆಯೇ ಅಥವಾ ಇಡೀ ರಾಜ್ಯ ದೇಶವನ್ನು ಆವರಿಸಿದೆಯೇ ಎಂಬುದರ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಕಲೆಹಾಕುವತ್ತ ತನಿಖೆ ಚುರುಕುಗೊಳಿಸಿದ್ದಾರೆ.
Super huduki