ಬೆಂಗಳೂರು: ಡಿಜೆ ಹಳ್ಳಿಯಲ್ಲಿ ನಡೆದ ಗಲಭೆ ದುರಾದೃಷ್ಟಕರ ಪ್ರಕರಣ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ನಿರಪರಾಧಿಗಳಿಗೆ ಶಿಕ್ಷೆ ಆಗದಂತೆ ನೋಡಿಕೊಳ್ಳಿ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ.
ನಗರದ ಜೆಪಿ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪುಲಿಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸ್ ಅವರ ಮನೆ ಮೇಲಿನ ದಾಳಿ ದುರದೃಷ್ಟಕರ ಘಟನೆ. ದೊಂಬಿ ಗಲಾಟೆ ಘಟನೆ ಸಂಬಂಧ ಪೊಲೀಸರು 150 ಜನರನ್ನು ಬಂಧಿಸಿದ್ದಾರೆ. ಆದರೆ ಇವರಲ್ಲಿ ನಿಜವಾದ ಅಪರಾಧಿಗಳು ಎಷ್ಟು? ಎಲ್ಲರೂ ಅಪರಾಧಿಗಳಾಗಿರಲು ಸಾಧ್ಯವಿಲ್ಲ. ಆದ್ದರಿಂದ ತಪ್ಪಿತಸ್ಥರನ್ನು ಮಾತ್ರ ಘಟನೆಗೆ ಹೊಣೆಗಾರರನ್ನಾಗಿ ಮಾಡಿ ಅಂತವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ. ನಿರಪರಾಧಿಗಳಿಗೆ ಶಿಕ್ಷೆ ಆಗುವುದು ಬೇಡ ಎಂದು ಪೊಲೀಸರಲ್ಲಿ ನಾನು ಮನವಿ ಮಾಡಿದರು.
ಗಲಭೆ ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಹೇಳಿದ್ದಾರೆ. ನಗರದ ಪೊಲೀಸ್ ಆಯುಕ್ತರು ಹಿಂದೆ ಸಿಬಿಐನಲ್ಲಿ ಕೆಲಸ ಮಾಡಿದ್ದಾರೆ. ಹೀಗಾಗಿ ಅವರು ತಾರತಮ್ಯ ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಾರೆಂಬ ಭಾವನೆ ತಮಗಿದೆ. ಆದರೂ ಅಂತಿಮ ನಿರ್ಧಾರ ಸರ್ಕಾರವೇ ತೆಗೆದುಕೊಳ್ಳಲಿ. ಮನೆ ಸುಡುವುದು, ಕಾರುಗಳಿಗೆ ಬೆಂಕಿ ಹಚ್ಚುವುದು,ಮನೆ ದೋಚುವುದು ಎಂದೂ ರಾಜ್ಯದಲ್ಲಿ ನಡೆದಿದ್ದನ್ನು ನಾನು ನೋಡಿಲ್ಲ. ಅದರಲ್ಲೂ ಶಾಸಕರ ಮನಗೆ ಬೆಂಕಿ ಹಚ್ಚಿರುವುದು ಇತಿಹಾಸದಲಿಯೇ ಇದು ಮೊದಲು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ಅಖಂಡ ಅವರಿಗೆ ಹಾಗೂ ಕುಟುಂಬಕ್ಕೆ ಆಗಿರುವ ಅನ್ಯಾಯಕ್ಕೆ ನ್ಯಾಯ ಸಿಗಬೇಕು. ಆಸ್ತಿ ಪಾಸ್ತಿ ಹಾನಿಯ ನಷ್ಟವನ್ನು ಸರಕಾರ ತನಿಖೆ ನಡೆಸಬೇಕು. ಅಲ್ಲದೆ ಶಾಸಕರಿಗೆ ಧೈರ್ಯ ತುಂಬುದು ಕೆಲಸವನ್ನು ಮಾಡಬೇಕು ಎಂದು ಸರ್ಕಾರಕೆಕ ಸಲಹೆ ನೀಡಿದರು.
ಈ ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದರು ಎನ್ನುವ ವಿಚಾರ ಬೇರೆಯದು. ಆದ್ರೆ ಯಾರಿಗೂ ಅವರು ಮೋಸ, ಅನ್ಯಾಯ ಮಾಡಿಲ್ಲ. ಗಲಭೆ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಕೆಸರೆರಚಾಟ ಮಾಡಬಾರದು. ಇದರಲ್ಲಿಯೂ ರಾಜಕೀಯ ಚೆಲ್ಲಾಟ ಬೇಡ. ಎರಡೂ ಪಕ್ಷಗಳು ಶಾಂತಿ ಸಮಾಧಾನದಿಂದ ವರ್ತಿಸಿ ಎಂದರು.
ಅಧಿಕಾರಿಗಳು ತಮ್ಮ ಜವಾಬ್ದಾರಿ ನಿರ್ವಹಣೆ ಮಾಡುವಾಗ ರಾಜಕೀಯ ಪಕ್ಷಗಳು ಮಧ್ಯ ಪ್ರವೇಶ ಮಾಡಬಾರದು. ಬಿಜೆಪಿ ಸರಕಾರವೇ ಅಧಿಕಾರದಲ್ಲಿ ಇದೆ. ಘಟನೆ ಕುರಿತು ಈಗಾಗಲೇ ಮುಖ್ಯಮಂತ್ರಿ ಅವರು ತನಿಖೆಗೆ ಆದೇಶ ಮಾಡಿದ್ದಾರೆ. ಇದಾದ ಮೇಲೂ ಕೆಲವು ಸಚಿವರು ಹೇಳಿಕೆ ನೀಡುತ್ತಿದ್ದಾರೆ. ಮುಖ್ಯಮಂತ್ರಿ ಅವರ ಆದೇಶ ನೀಡಿದ ಮೇಲೆ ಇತರರು ಮಾತನಾಡುವುದು ಎಷ್ಟು ಸರಿ,ಹಾಗಿದ್ದರೆ ಅವರ ಮಾತಿಗೆ ಏನು ಬೆಲೆ ಎಂದು ಸಚಿವರ ವರ್ತನೆಯನ್ನು ಮಾಜಿ ಪ್ರಧಾನಿ ಪ್ರಶ್ನಿಸಿದರು.