Friday, November 1, 2024
CrimeNEWSದೇಶ-ವಿದೇಶರಾಜಕೀಯ

ನಿನ್ನೆ ಸಂಜೆ ಬಂಧಿಸಿದ್ದ ದುಬೆ ಇಂದು ಮುಂಜಾನೆ ಎನ್‌ಕೌಂಟರ್‌: ಭಾರಿ ಚರ್ಚೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಲಖನೌ: ನಿನ್ನೆ ಸಂಜೆ ಬಂಧಿಸಿದ್ದ ರೌಡಿ ವಿಕಾಸ್‌ ದುಬೆಯನ್ನು ಇಂದು ಬೆಳ್ಳಂಬೆಳಗ್ಗೆ ಎನ್‌ಕೌಂಟರ್‌ನಲ್ಲಿ ಪೊಲೀಸರು ಹೊಡೆದುರಿಳಿಸಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಕುಖ್ಯಾತ ರೌಡಿ ದುಬೆ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿರುವ ಘಟನೆ, ಇದೀಗ ರಾಜಕೀಯ ವಲಯದಲ್ಲಿ ಬಿರುಸಿನ ಚರ್ಚೆಗೆ ಗ್ರಾಸವಾಗಿದ್ದು, ಗುರುವಾರ ಸಂಜೆ  ಪೊಲೀಸರು ಬಂಧಿಸಿದ ಸಂದರ್ಭದಲ್ಲಿ, ಇದು ಪೊಲೀಸರು ದುಬೆಯನ್ನು ಬಂಧಿಸಿದ್ದಲ್ಲ, ಬದಲಿಗೆ ಆತನೇ ಶರಣಾಗಿದ್ದಾನೆ ಎಂಬ ಬಗ್ಗೆಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಘಂಟಾಘೋಷವಾಗಿ ಹೇಳಿದ್ದರು.  ಇನ್ನುಶಯಕ್ರವಾರ (ಇಂದು) ಕೂಡ ಇದೊಂದು ಫೇಕ್‌ ಎನ್‌ಕೌಂಟರ್‌ ಎಂದು ಕಿಡಿ ಕಾರಿದ್ದಾರೆ.

ಇನ್ನು ದುಬೆ ಇರುವ ಕಾರು ವಾಸ್ತವದಲ್ಲಿ ಉರುಳಿಲ್ಲ, ಬದಲಿಗೆ ಸರ್ಕಾರದ ರಹಸ್ಯ ಬಹಿರಂಗಗೊಂಡು ಅದು ಉರುಳದಂತೆ ಮಾಡುವ ನಿಟ್ಟಿನಲ್ಲಿ ಆಡಿರುವ ನಾಟಕವಿದು ಎಂದು ಟ್ವಿಟರ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾವು ಊಹಿಸಿದ ಹಾಗೆಯೇ ದುಬೆಯನ್ನು ಸರ್ಕಾರ ಮುಗಿಸಿದೆ ಅಂದರೆ ಹೀಗೆಯೇ ಆಗುತ್ತದೆ   ಎಂದು ಮೊದಲೇ ಗೊತ್ತಿತ್ತು ಎಂದು ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಹೇಳಿದ್ದಾರೆ.

ರೌಡಿ ದುಬೆಗೆ ಅನೇಕ ಪೊಲೀಸರು ಹಾಗೂ ಸರ್ಕಾರಿ ಅಧಿಕಾರಿಗಳ ಸಂಪರ್ಕವಿತ್ತು. ಅ ಎಲ್ಲಾ ರಹಸ್ಯ ಎಲ್ಲಿ ಹೊರಬರುವುದೋ ಎಂಬ ಭಯ ಆತಂಕದಲ್ಲಿ ಎನ್‌ಕೌಂಟರ್‌ ನಾಟಕವಾಡಿದೆ ಸರ್ಕಾರ ಎಂದು ಕಿಡಿಕಾರಿದ್ದು, ದುಬೆ ಜತೆಗೆ ಇತರ ಇಬ್ಬರು ಸಹವರ್ತಿಗಳನ್ನೂ ಎನ್‌ಕೌಂಟರ್‌ ಮಾಡಲಾಗಿದ್ದು, ಎಲ್ಲವೂ ಏಕರೀತಿಯಲ್ಲಿಯೇ ನಡೆದಿರುವುದನ್ನು ನೋಡಿದರೆ ಇದೊಂದು ದೊಡ್ಡ ಷಡ್ಯಂತ್ರ ಎನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದು ಹೇಳಿದ್ದಾರೆ.

ಸತ್ತ ವ್ಯಕ್ತಿ ಏನನ್ನೂ ಹೇಳಲು ಸಾಧ್ಯವಿಲ್ಲ. ಪೊಲೀಸರು ಹಾಗೂ ರಾಜಕಾರಣಿಗಳ ಗುಟ್ಟು ಅವನ ಜತೆಯೇ ಸತ್ತುಹೋಯಿತು. ಅದನ್ನೀಗ ಹೇಳಲು ಆತ ಬದುಕಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಮುಖಂಡ ಓಮನ್‌ ಅಬ್ದುಲ್ಲಾ ಕೂಡ ಟ್ವೀಟ್‌ ಮಾಡಿದ್ದಾರೆ.

ಎಂಟು ಪೊಲೀಸರ ಹತ್ಯೆ ಮಾಡಿದ್ದ
ಕಾನ್ಪುರ ಸಮೀಪದ ಬಿಕ್ರು ಗ್ರಾಮದಲ್ಲಿ ಎಂಟು ಪೊಲೀಸರ ಹತ್ಯೆ ಮಾಡಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೇ ಬಂಧನಕ್ಕೊಳಗಾಗಿದ್ದ  ರೌಡಿ​ ವಿಕಾಸ್​ ದುಬೆ ಪೊಲೀಸ್​ ಎನ್​ಕೌಂಟರ್​ನಲ್ಲಿ ಮೃತಪಟ್ಟಿದ್ದಾನೆ. ಈ ಬಗ್ಗೆ ಉತ್ತರ ಪ್ರದೇಶ ಪೊಲೀಸರು ಖಚಿತಪಡಿಸಿದ್ದಾರೆ.

ಶುಕ್ರವಾರ ಬೆಳ್ಳಂಬೆಳಗ್ಗೆಯೇ ಕಾನ್ಪುರದ ಸಾಚೆಂಡಿ ಗಡಿಯಲ್ಲಿ ಎನ್​ಕೌಂಟರ್​ ನಡೆದಿದೆ. ಕಾನ್ಪುರಕ್ಕೆ ತೆರಳುವ ಮಾರ್ಗ ಮಧ್ಯೆ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆಯ (ಎಸ್​ಟಿಎಫ್​) ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ವಿಕಾಸ್​ ದುಬೆ ಮೇಲೆ ಪೊಲೀಸರು ಗುಂಡುಹಾರಿಸಿದ್ದಾರೆ. ಈ ವೇಳೆ  ಇಬ್ಬರು ಪೊಲೀಸ್​ ಕಾನ್‌ಸ್ಟೆಬಲ್​ಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪೊಲೀಸರ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ​ ದುಬೆಯನ್ನು ಲಾಲಾ ಲಜಪತ್​ ರಾಯ್​ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಗಂಭೀರ ಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಹತ್ಯೆ ಬಳಿಕ ತಲೆ ಮರೆಸಿಕೊಂಡಿದ್ದ
ಪೊಲೀಸರ ಹತ್ಯೆಮಾಡಿ ಬಳಿಕ ತಲೆಮರೆಸಿಕೊಂಡಿದ್ದ​ ದುಬೆಯನ್ನು ಮಧ್ಯಪ್ರದೇಶದ ಉಜ್ಜೈನ್‌ನಲ್ಲಿ ನಿನ್ನೆ ಬಂಧಿಸುವಲ್ಲಿ ಪೊಲೀಸರು  ಯಶಸ್ವಿಯಾಗಿದ್ದರು.  ವಿಕಾಸ್ ದುಬೆ ಉಜ್ಜೈನ್​ನಲ್ಲಿರುವ ಮಹಾಕಾಲ್ ದೇವಸ್ಥಾನಕ್ಕೆ ಹೋಗಿದ್ದ. ಅಲ್ಲಿಯ ಭದ್ರತಾ ಸಿಬ್ಬಂದಿ ಈತನನ್ನು ಗುರುತಿಸಿ ಗುಟ್ಟಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು.  ದೇವಸ್ಥಾನದಿಂದ ಹೊರ ಬರುತ್ತಿದ್ದಂತೆಯೇ ಪೊಲೀಸರು ಆತನನ್ನು ಬಂಧಿಸಿದ್ದರು ಎಂದು ಹೇಳಲಾಗಿದೆ. ಈ ನಡುವೆ   ಆತನನ್ನು ಇಂದು ಬೆಳಗ್ಗೆ ಕಾನ್ಪುರಕ್ಕೆ ಕರೆತರುವಾಗ ಮಾರ್ಗ ಮಧ್ಯೆ ತಪ್ಪಿಸಿಕೊಳ್ಳಲು ಯತ್ನಿಸಿದ ಈ ವೇಳೆ ಎನ್​ಕೌಂಟರ್​ನಲ್ಲಿ ಬಲಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

1 Comment

Leave a Reply

error: Content is protected !!
LATEST
KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ: ಈಗಲೇ ಅರ್ಜಿ ಹಾಕಿ ಬಿಬಿಎಂಪಿ: ಅನಧಿಕೃತ ಹೆಚ್ಚುವರಿ ಮಹಡಿಗಳು, ಪಾದಚಾರಿ ಮಾರ್ಗ ಒತ್ತುವರಿ ತೆರವು KSRTC ಸಮಸ್ತ 4ನಿಗಮಗಳ ಅಧಿಕಾರಿಗಳು ನೌಕರರು ಒಗ್ಗಟ್ಟಾಗಿ: ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವತ್ತ ಚಿಂತಿಸಿದರೆ ಅಸಾ...