ಮಂಡ್ಯ: ಡ್ರಗ್ಸ್ ನಶೆಯ ಮತ್ತು ಬಗೆದಷ್ಟು ಆಳವಾಗುತ್ತ ಹೋಗುತ್ತಿದ್ದು, ನಟಿ, ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಆಪ್ತ ರವಿ ಶಂಕರ್ ಬಳಿಕ ಮತ್ತೊಬ್ಬ ನಟಿ ಸಂಜನಾ ಗಲ್ರಾನಿ ಆಪ್ತ ರಾಹುಲ್ ನನ್ನು ಸಿಸಿಬಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇನ್ನೊಂದೆಡೆ ಮಂಡ್ಯದ ದೊಡ್ಡ ರಾಜಕಾರಣಿಯ ಮಗನೊಬ್ಬ ಇದರ ಹಿಂದೆ ಇದ್ದಾನೆ. ಆರಾಜಕಾರಣಿ ಯಾರು ಮತ್ತು ಅವರ ಮಗ ಯಾರು ?
ಈತ ಸಿಂಗಾಪುರ, ಶ್ರೀಲಂಕದಲ್ಲಿ ಪಾರ್ಟಿ ಮಾಡಿರುವ ವಿಡಿಯೋ ಸಾಕ್ಷ್ಯ ಸೇರಿ ಹಲವು ಪ್ರಮುಖ ಮಾಹಿತಿಯನ್ನು ಗಲ್ರಾನಿ ಆಪ್ತ ರಾಹುಲ್ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಸಿಸಿಬಿ ಪೊಲೀಸರು ಆ ರಾಜಕಾರಣಿ ಮಗನಿಗೆ ಫೋನ್ ಮಾಡಿ ಸಿಸಿಬಿ ಪೊಲೀಸರು ಎಂದು ಹೆಸರೇಳುತ್ತಿದ್ದಂತೆ ಫೋನ್ ಸ್ವಿಚ್ಆಫ್ ಮಾಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಆ ರಾಜಕಾರಣಿ ಮಗನಿಗೆ ನಟಿಯರ ಭೇಟಿ ಮಾಡಿಸುತ್ತಿದ್ದಾಗಿ ಹೇಳಿಕೆ ನೀಡಿರುವುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.