ಮೈಸೂರು: ಪತಿಯ ಅಗಲಿಕೆಯಿಂದ ಮನನೊಂದು ಖಿನ್ನತೆಗೆ ಒಳಗಾಗಿದ್ದ 25 ವರ್ಷದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಗರದ ಜೆ.ಪಿ.ನಗರದ ನಿವಾಸಿ ಚಾಂದಿನಿ ಆತ್ಮಹತ್ಯೆ ಮಾಡಿಕೊಂಡವರು. ಈಕೆ ಪತಿ ಮಧುಸೂದನ್ 20 ದಿನಗಳ ಹಿಂದೆ ಮೃತಪಟ್ಟಿದ್ದರು. ಈ ನಡುವೆ ಚಾಂದಿನಿಗೆ ಅವರ ಪಾಲಕರು ಮತ್ತೊಂದು ಮದುವೆ ಮಾಡಲು ನಿರ್ಧರಿಸಿದ್ದರು ಎನ್ನಲಾಗಿದೆ. ಪತಿ ಅಗಲಿಕೆಗೆ ನೋವಿನಿಂದ ಹೊರಬರದ ಆಕೆ ಈ ತಯಾರಿಗೆಯಿಂದ ಇನ್ನಷ್ಟು ಖಿನ್ನತೆಗೆ ಜಾರಿದ್ದರು ಎಂದು ಹೇಳಲಾಗಿದೆ.
ಐದು ವರ್ಷದ ಹಿಂದೆ ಮದುವೆಯಾಗಿದ್ದ ಚಾಂದಿನಿ, ಪತಿಯ ನೆನಪಿನಿಂದ ಹೊರಬರಲು ಆಗದೆ, ಇನ್ನೊಂದೆಡೆ ಪಾಲಕರ ನಿರ್ಧಾರವನ್ನು ತಿರಸ್ಕರಿಸಲು ಆಗದೆ ಈರೀತಿ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ.
ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಗಿದ್ದು ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.