CrimeNEWSದೇಶ-ವಿದೇಶ

ಪತ್ನಿಕುತ್ತಿಗೆ ಕತ್ತರಿಸಿ ಕುಲದೇವತೆಗೆ ಬಲಿ ಕೊಟ್ಟ ಮೂಢಪತಿ

ಸದ್ಯ ಕಂಬಿಹಿಂದೆ ಮುದ್ದೆ ಮುರಿಯುತ್ತಿದ್ದಾನೆ ದುರಳ

ವಿಜಯಪಥ ಸಮಗ್ರ ಸುದ್ದಿ

ಭೋಪಾಲ್: ಮೂಢನಂಬಿಕೆಗೆ ದಾಸನಾದ ದುರುಳನೊಬ್ಬ ಪತ್ನಿಯ ಕತ್ತು ಕತ್ತರಿಸುವ ಮೂಲಕ ಕುಲದೇವರಿಗೆ ಬಲಿ ಕೊಟ್ಟಿರುವ ಘಟನೆ ಮಧ್ಯಪ್ರದೇಶದ ಸಿಂಗರೌಲಿಯ ಬಸೌಡಾ ಗ್ರಾಮದಲ್ಲಿ ನಡೆದಿದೆ.

ಬ್ರಿಜೇಶ್ ಕೆವಟ್ ಎಂಬಾತನೆ ಪತ್ನಿ ಬಿಟ್ಟಿದೇವಿ ಎಂಬಾಕೆಯನ್ನು ಹತ್ಯೆ ಮಾಡಿದವ. ಅಪ್ಪನ ಕೃತ್ಯಕ್ಕೆ ಮಗನೇ ಪೊಲೀಸರ ಮುಂದೆ ಸಾಕ್ಷಿ ಹೇಳಿದ್ದಾನೆ. ತಂದೆ-ತಾಯಿ ಕುಲದೇವತೆಗೆ ಪೂಜೆ ಸಲ್ಲಿಸಿದ ಬಳಿಕ ನಾವೆಲ್ಲ ಮಲಗಿದ್ದೆವು. ತಡರಾತ್ರಿ ಒಳಗೆ ಅಪ್ಪ-ಅಮ್ಮ ಜಗಳ ಆಡುತ್ತಿರುವ ಧ್ವನಿ ಕೇಳಿಸಿದ್ದರಿಂದ ನನಗೆ ಎಚ್ಚರವಾಯ್ತು. ಇಬ್ಬರ ಜಗಳ ಆಡುತ್ತಾ ಜೋರು ಜೋರಾಗಿ ಮಾತನಾಡುತ್ತಿದ್ದರು. ನಾನು ಅಪ್ಪನನ್ನ ತಡೆಯಲು ಹೋದಾಗ, ನೀನು ಮಧ್ಯ ಬರಬೇಡ ಅಂತಾ ನನ್ನನ್ನು ಹೊರಗೆ ಕಳಿಸಿದ.

ಹೊರಗೆ ಬಂದ ಕೂಡಲೇ ಮನೆಯ ಬಾಗಿಲು ಹಾಕಿದ. ಬಳಿ ಅಮ್ಮನನ್ನ ಕೊಲೆಮಾಡಿ ಶವದ ಜೊತೆ ಹೊರ ಬಂದ. ನಂತರ ರುಂಡ ಮತ್ತು ಶವವನ್ನು ಹೂತರು. ನಾನು ಭಯದಿಂದ ಅಳಲು ಶುರು ಮಾಡಿದಾಗ ಕಿರುಚಾಡಬೇಡ, ಇಲ್ಲವಾದಲ್ಲಿ ನಿನ್ನನ್ನು ಕೊಂದು ಬಿಡ್ತೀನಿ ಅಂದು ಹೆದರಿಸಿದ ಎಂದು ನಡೆದ ಘಟನೆಯನ್ನು ಪೊಲೀಸರ ಮುಂದೆ ಬಿಕ್ಕಿಬಿಕ್ಕಿ ಅಳುವ ಮೂಲಕ ಮಗ ವಿವರಿಸಿದ್ದಾನೆ.

ಮಗುವಿನ ಅಳು ಶಬ್ಧ ಕೇಳಿ ಬಂದ ನೆರೆಹೊರೆಯವರು ಒಂದು ಕ್ಷಣ ಶಾಕ್ ಆಗಿದ್ದಾರೆ. ಕೂಡಲೇ ಪೊಲೀಸರಿಗೆ ಫೋನ್ ಮಾಡಿ ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಎಸ್‍ಪಿ ವೀರೇಂದ್ರ ಪ್ರತಾಪ್ ಸಿಂಗ್, ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ಪೂಜೆ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.

ನಮ್ಮ ದೇಶದಲ್ಲಿ ಇಂಥ ಘಟನೆಗಳು ಮಡಿ ಮೈಲಿಗೆ ಡಂಬಾಚಾರ ಮೂಢನಂಬಿಕೆಗಳು ಇನ್ನು ತೊಲಗದಿರುವುದು ದೇಶವನ್ನು ಹಿಂದೆ ಆಳಿದ ಮತ್ತು ಇಂದು ಆಳುತ್ತಿರುವವರ  ನಡೆಯನ್ನು ಸ್ಪಷ್ಟಪಡಿಸುತ್ತವೆ. ಇನ್ನಾದರೂ ಇಂಥ ಮೂಢನಂಬಿಕೆಗಳಿಗೆ ಅಮಾಯಕರು ಬಲಿಯಾಗುವುದನ್ನು ತಡೆಯಲು ಸರ್ವಪಕ್ಷ ನಾಯಕರು, ಪ್ರತಿಯೊಬ್ಬರಿಗೂ ಕಡ್ಡಾಯ ಶಿಕ್ಷಣ ಅದರಲ್ಲೂ ಸರ್ಕಾರಿ ಶಾಲೆಯಲ್ಲೇ 1ನೇ ತರಗತಿಯಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡಬೇಕು ಎಂಬ ಕಾಯ್ದೆಯನ್ನು ಜಾರಿಗೆ ತಂದು ಈರೀತಿಯ ಕಂದಾಚಾರಿಗಳಿಗೆ ಬಲಿಯಾಗುವುದನ್ನು ತಪ್ಪಿಸಬೇಕಿದೆ.

Leave a Reply

error: Content is protected !!
LATEST
KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ