ಧಾರವಾಡ : ಆರು ವರ್ಷದ ಬಾಲಕನ ಮೇಲೆ ಬೀದಿನಾಯಿಗಳು ದಾಳಿ ಮಾಡಿ ಕಚ್ಚಿ ಸಾಯಿಸಿರುವ ಘಟನೆ ನಗರದಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಲಿಂಗಸೂರು ಮೂಲದ ಕಟ್ಟಡ ಕಾರ್ಮಿಕರ ಪುತ್ರ ಬಾಬುಲ್ ರಾಠೋಡ ನಾಯಿಗಳ ಅಟ್ಟಹಾಸಕ್ಕೆ ಬಲಿಯಾದ ಕಂದಮ್ಮ.
ಈ ಬಾಲಕನ ಪಾಲಕರು ಕಟ್ಟಡ ಕಾರ್ಮಿಕರಾಗಿದ್ದು, ಕೂಲಿಗಾಗಿ ಧಾರವಾಡಕ್ಕೆ ಬಂದಿದ್ದಾರೆ. ಈ ವೇಳೆ ಧಾರವಾಡ ಹೊರವಲಯದ ನವಲೂರ ಗ್ರಾಮದ ರೈಲು ನಿಲ್ದಾಣದ ಬಳಿ ಬಾಬುಲ್ ರಾಠೋಡ ಮೇಲೆ 8 ನಾಯಿಗಳು ಏಕಾಎಕಿ ದಾಳಿ ಮಾಡಿ ಕಚ್ಚಿ ಕೊಂದಿವೆ.
ನಾಯಿಗಳ ದಾಳಿಯಿಂದ ಗಾಯಗೊಂಡ ಬಾಲಕ ನೋಡು ನೋಡುತ್ತಿದ್ದಂತೆಯೇ ನರಳಿ ನರಳಿ ಸ್ಥಳದಲ್ಲೇ ಅಸುನೀಗಿದ್ದಾನೆ.