CrimeNEWSನಮ್ಮಜಿಲ್ಲೆ

ಕಾರು-ಬೈಕ್‌ ಅಪಘಾತ ಪ್ರಕರಣ: ನಮ್ಮ ಮನೆದೇವರಾಣೆ ನಾ ಅಲ್ಲಿರಲಿಲ್ಲ ಎಂದ ಡಿಸಿಎಂ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಳಗಾವಿ: ಡಿಸಿಎಂ ಲಕ್ಷ್ಮಣ ಸವದಿ ಪುತ್ರನ ಕಾರು ಬೈಕ್‌ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟಿದ್ದ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮ ಕ್ರಾಸ್ ಬಳಿ ರಾ.ಹೆ.50ರಲ್ಲಿ ಸೋಮವಾರ ನಡೆದಿತ್ತು.

ಅಪಘಾತದ ಬಳಿಕ ತಂದೆ ಲಕ್ಷ್ಮಣ ಸವದಿ ಜತೆ ನಿರಂತರ ಫೋನ್‌ ಸಂಪರ್ಕದಲ್ಲಿದ್ದರು. ಅಪಘಾತದ ಸುದ್ದಿ ಕೇಳಿ ಮಗನಿಗೆ ಲಕ್ಷ್ಮಣ ಸವದಿ ತರಾಟೆಗೆ ತೆಗೆದುಕೊಂಡು, ಬಳಿಕ ಬಾಗಲಕೋಟೆ ಎಸ್‌ಪಿಗೆ ಕರೆ ಮಾಡಿ ಮಾತಾಡಿ ನಿನ್ನೆ ಸಂಜೆ ಅಥಣಿಯಿಂದ ಬೆಂಗಳೂರಿಗೆ ತೆರಳಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಚಿದಾನಂದ ಸವದಿ ಕೊಪ್ಪಳ ಪ್ರವಾಸಕ್ಕೆ ಬಂದಿದ್ದರು. ನಿನ್ನೆ ಮಧ್ಯಾಹ್ನ ಕೊಪ್ಪಳ ಪ್ರವಾಸಿ ಮಂದಿರದಲ್ಲಿ ಊಟ ಮುಗಿಸಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಹೋಗಿದ್ದರು. ಹೀಗೆ ಕಳೆದ ಮೂರು ದಿನ‌ ಜಿಲ್ಲೆಯ ವಿವಿಧ ಕಡೆ ಪ್ರವಾಸ ಮಾಡಿದ್ದರು. ಚಿದಾನಂದ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಮನೆಗೆ ಭೇಟಿ ನೀಡಿ ಕೊಪ್ಪಳದಿಂದ‌ ಪ್ರವಾಸ ಮಗಿಸಿ ತೆರಳಿದ್ದ ವೇಳೆ ಅಪಘಾತ ಸಂಭವಿಸಿದೆ.

ಇನ್ನು ಚಿದಾನಂದ ಕಾರು ಅಪಘಾತದಲ್ಲಿ ಮೃತಪಟ್ಟ ಕೂಡಲೆಪ್ಪ ಬೋಳಿ ಮರಣೋತ್ತರ ಪರೀಕ್ಷೆ ಬಾಗಲಕೋಟೆ ನಗರದಲ್ಲಿರುವ ಕುಮಾರೇಶ್ವರ ಖಾಸಗಿ ಆಸ್ಪತ್ರೆಯಲ್ಲಿ ಕೂಡಲೆಪ್ಪ ಕುಟುಂಬಸ್ಥರ ಸಮ್ಮುಖದಲ್ಲಿ ನಡೆಯಿತು. ಬಳಿಕ ಕುಟುಂಬಸ್ಥರಿಗೆ ಕೂಡಲೆಪ್ಪ ಮೃತದೇಹವನ್ನು ಹಸ್ತಾಂತರಿಸಲಾಗಿದ್ದು ಚಿಕ್ಕ ಹಂಡರಗಲ್ ಗ್ರಾಮಕ್ಕೆ ರವಾನಿಸಲಾಗಿದೆ.

ಕಾರಿಗೆ ಅಡ್ಡಬಂದಿದ್ದರಿಂದ ಅಪಘಾತ: ಮನೆ ದೇವರಾಣೆಗೂ ನಾನು ಯಾರಿಗೂ ಧಮ್ಕಿ ಹಾಕಿಲ್ಲ. ಆಕಸ್ಮಿಕವಾಗಿ ಕಾರಿಗೆ ಅಡ್ಡಬಂದಿದ್ದರಿಂದ ಅಪಘಾತವಾಗಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಮಗ ಚಿದಾನಂದ ಸುದ್ದಿಗಾರರಿಗೆ ಹೇಳಿಕೆ ನೀಡಿದ್ದಾರೆ.

ಅಪಘಾತವಾದ ಕಾರಿನಲ್ಲಿ ನಾನು ಇರಲಿಲ್ಲ. ಆದರೆ, ಅಪಘಾತವಾದ ತಕ್ಷಣ ಆ್ಯಂಬುಲೆನ್ಸ್‌ಗೆ ಕರೆ ಮಾಡಿ ಅವರನ್ನು ನಾನೇ ಆಸ್ಪತ್ರೆಗೆ ದಾಖಲಿಸಿದ್ದೆ. ದೇವರಾಣೆಗೂ ನಾನೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು. ಮಾನವೀಯತೆ ದೃಷ್ಟಿಯಿಂದ ಮೃತನ ಕುಟುಂಬಕ್ಕೆ ನಾನು ಸಹಾಯ ಮಾಡುತ್ತೇನೆ ಎಂದು ಚಿದಾನಂದ ಹೇಳಿದರು.

ನಾನು ಸ್ನೇಹಿತನ ಕಾರಿನಲ್ಲಿ ಮುಂದೆ ತೆರಳುತ್ತಿದ್ದೆ. ನಾನು ತೆರಳುತ್ತಿದ್ದ ಕಾರು 30 ಕಿಲೋಮೀಟರ್ ಮುಂದಿತ್ತು. ನನ್ನ ಕಾರನ್ನು ನನ್ನ ಚಾಲಕ ಚಲಾಯಿಸುತ್ತಿದ್ದ. ನನ್ನ ಕಾರಿನಲ್ಲಿ ಮೂವರು ಸ್ನೇಹಿತರು ಪ್ರಯಾಣಿಸುತ್ತಿದ್ದರು. ಸುಮಾರು 6 ಗಂಟೆಗೆ ನನಗೆ ಕರೆ ಬಂದಿತ್ತು. ಕಾರು ಅಪಘಾತವಾಗಿರುವ ಬಗ್ಗೆ ನನ್ನ ಚಾಲಕ ಕರೆ ಮಾಡಿದ್ದ. ನಾನು, ನನ್ನ ಸ್ನೇಹಿತರು ಯಾರಿಗೂ ಬೆದರಿಕೆಯನ್ನು ಹಾಕಿಲ್ಲ. ಬೈಕ್ ಸವಾರ ಹೆಲ್ಮೆಟ್‌ನ್ನೂ ಧರಿಸಿರಲಿಲ್ಲ. ಘಟನೆಯ ಬಗ್ಗೆ ನಮಗೂ ನೋವಿದೆ ಎಂದರು.

ಸಾಂತ್ವನ ಹೇಳುವ ಬದಲು ಸುಳ್ಳು ಹೇಳುತ್ತಿದ್ದಾರೆ.
ಚಿದಾನಂದ ಸವದಿ ಹೇಳುತ್ತಿರುವುದು ಸುಳ್ಳು. ಅವರು ಸ್ಥಳದಲ್ಲಿ ಏನು ಮಾಡಿದರು ಎಂದು ಸ್ಥಳದಲ್ಲಿದ್ದವರು ಎಲ್ಲವನ್ನೂ ನೋಡಿದ್ದಾರೆ ಎಂದು ಮೃತ ಕೂಡಲೆಪ್ಪ ಬೋಳಿ ಸಂಬಂಧಿ ಸಿದ್ದಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ರಸ್ತೆ ಪಕ್ಕವೇ 10-15 ಅಡಿ ದೂರದಲ್ಲಿ ಓರ್ವ ರೈತನಿದ್ದ. ಅವರು ಚಿದಾನಂದ ಸವದಿ ಮಾಡಿದ್ದೆಲ್ಲವನ್ನೂ ಹೇಳಿದ್ದಾರೆ. ಘಟನೆ ವಿಡಿಯೋ ಮಾಡುತ್ತಿದ್ದವನ ಮೊಬೈಲ್ ಕಸಿದಿದ್ದಾರೆ. ಚಿದಾನಂದ ಸವದಿ ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದರೆ ಆಸ್ಪತ್ರೆಯಲ್ಲಿ ಇರಬೇಕಿತ್ತು. ನಮ್ಮ ಜತೆ ಮಾತಾಡಬೇಕಿತ್ತು. ಚಿದಾನಂದ ಸವದಿ ಘಟನೆಯನ್ನು ತಿರುಚಿ ಹೇಳುತ್ತಿದ್ದಾರೆ.

ಸಾಂತ್ವನ ಹೇಳುವ ಬದಲು ಅವರು ಸುಳ್ಳು ಹೇಳುತ್ತಿದ್ದಾರೆ. ರಕ್ಷಣೆ ಮಾಡಿರುವವರು ಪರಾರಿ ಆಗಿರುವುದು ಏಕೆ? ಪ್ರಕರಣವನ್ನು ಮುಚ್ಚಿಹಾಕುವ ಎಲ್ಲ ಪ್ರಯತ್ನ ನಡೆದಿದೆ. ಪೊಲೀಸರು ಇದುವರೆಗೂ ಯಾರನ್ನೂ ಅರೆಸ್ಟ್ ಮಾಡಿಲ್ಲ. ಈ ಪರಿಸ್ಥಿತಿ ಅವರ ಅಪ್ಪನಿಗೆ ಆಗಿದ್ದರೆ ಕಷ್ಟ ತಿಳಿಯುತ್ತಿತ್ತು ಎಂದು ಸಿದ್ದಪ್ಪ ಆಕ್ರೋಶ ಹೊರ ಹಾಕಿದ್ದಾರೆ.

Leave a Reply

error: Content is protected !!
LATEST
ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ...