ವಿಜಯಪಥ ಸಮಗ್ರ ಸುದ್ದಿ
ಮೈಸೂರು : ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ವರ್ಗಾವಣೆ ಬಳಿಕವೂ ಸಚಿವ ಸಾ.ರಾ.ಮಹೇಶ್ – ನಿರ್ಗಮಿತ ಡಿಸಿ ನಡುವಿನ ಜಟಾಪಟಿ ಮುಂದುವರೆದಿದೆ.
ಜಿಲ್ಲೆಯಿಂದ ವರ್ಗಾವಣೆಗೊಂಡಿರುವ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಾ. ರಾ. ಮಹೇಶ್ ವಾಗ್ದಾಳಿ ನಡೆಸಿದ್ದಾರೆ. ಭೂ ವಿವಾದ ತನಿಖೆಗೆ ಆದೇಶಿಸಿದ ಹಿನ್ನೆಲೆಯಲ್ಲಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿದ್ದಾರೆ ಎಂಬ ಗಂಭೀರ ಆರೋಪಕ್ಕೆ ತಿರುಗೇಟು ನೀಡಿರುವ ಸಾ.ರಾ. ಅವರು, ಕಳೆದ ಎಂಟು ತಿಂಗಳಿಂದ ಇವರು ಏನು ಮಾಡುತ್ತಿದ್ದರು. ಅಂದಿನಿಂದ ಏಕೆ ಭೂ ವಿವಾದದ ತನಿಖೆ ಮಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಮೈಸೂರು ಜಿಲ್ಲಾಧಿಕಾರಿಯಾದ ದಿನದಿಂದಲೂ ಆವಮ್ಮನ ಬಗ್ಗೆ ಆರೋಪ ಮಾಡುತ್ತಿದ್ದೇನೆ. ಇನ್ನು ಅವರ ಬಗ್ಗೆ ಸದನದಲ್ಲೂ ಹೋರಾಟ ಮಾಡುತ್ತೇನೆ. ಇಂದಿನಿಂದ ನನ್ನ ಹೋರಾಟ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಂದು ಗುಡುಗಿದರು.