Friday, November 1, 2024
NEWSನಮ್ಮಜಿಲ್ಲೆ

ಅಧಿಕಾರಿಯ ದರ್ಪ: ಸಾರಿಗೆ ಇಲಾಖೆ ವಾಹನ ಬಳಸಿದ ಡಿಟಿಒ ಪತ್ನಿ ನಡೆ ಖಂಡಿಸಿದ ನೌಕರನೇ ಅಮಾನತು

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಲ್ಲಿ ನಡೆದಿರುವ ಭ್ರಷ್ಟಾರದ ಬಗ್ಗೆ ದೂರು ನೀಡಿದ್ದಕ್ಕೆ ಕುಪಿಗೊಂಡ ಅಧಿಕಾರಿ ಸಂಸ್ಥೆಯ ಕಿರಿಯ ಸಹಾಯಕ ಎಂ.ಎನ್.ಇಲಕಲ್ ಅವರನ್ನು ಕಾನೂನು ಬಾಹಿರವಾಗಿ ಅಮಾನತು ಮಾಡಿ ಕಿರುಕುಳ ನೀಡುತ್ತಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಹೌದು ! ಸಂಸ್ಥೆಯ ಕಿರಿಯ ಸಹಾಯಕ ಎಂ.ಎನ್.ಇಲಕಲ್ ಅವರು ಮುಖ್ಯಮಂತ್ರಿಗಳು, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ, ವ್ಯವಸ್ಥಾಪಕ ನಿರ್ದೇಶಕರು ಮತ್ತು ಕಲ್ಬುರ್ಗಿ ಹಾಗೂ ಎಸಿಬಿ ಕೇಂದ್ರ ಕಚೇರಿಗೆಯಲ್ಲಿ ವಿಜಯಪುರ ವಿಭಾಗದಲ್ಲಿ ನಡೆದಿರುವ ಭ್ರಷ್ಟಾರದ ಬಗ್ಗೆ ದೂರು ದಾಖಲಿಸಿದ್ದಾರೆ.

ಈ ದೂರನ್ನು ಕೊಟ್ಟಿದ್ದಾರೆ ಎಂಬ ಕಾರಣಕ್ಕೆ ಎಂ.ಎನ್. ಇಲಕಲ್ ಅವರನ್ನು 6ನೇ ವೇತನ ಆಯೋಗ ಜಾರಿ ಮಾಡಲು ಕಳೆದ ಏಪ್ರಿಲ್‌ನಲ್ಲಿ ನಡೆದ ಮುಷ್ಕರ ಸಮಯದಲ್ಲಿ ಪ್ರತಿಭಟನೆಗೆ ಪ್ರಚೋದನೆ ನೀಡಿದ್ದೀರ ಎಂದು ಆರೋಪಿಸಿ ರಾಯಚೂರು ವಿಭಾಗದ ಮಾನ್ವಿ ಘಟಕಕ್ಕೆ ವರ್ಗಾವಣೆ ಮಾಡಿದ್ದಾರೆ.

ನಂತರ ಜೂನ್‌15- 2021 ರಂದು ವಿಭಾಗೀಯ ಸಂಚಾರಿ ಅಧಿಕಾರಿ ದೇವಾನಂದ ಎ. ಬಿರಾದಾರ ಅವರ ಇಲಾಖಾ ವಾಹನ ಸಂಖ್ಯೆ ಕೆಎ 32 ಎಫ್-2238ರ ವಾಹನವನ್ನು ಅವರ ಪತ್ನಿ ಅನಧಿಕೃತವಾಗಿ ಬಳಸಿರುವ ವಿಡಿಯೋ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ಹರಿದಾಡಿತ್ತು.

ಆ ವಿಡಿಯೋಗೆ ಎಂ.ಎನ್. ಇಲಕಲ್ ಕಾಮೆಂಟ್ ಮಾಡಿದ್ದಾರೆ. ಇದರಿಂದ ಇಲಾಖೆ ಮಾನ ಹರಾಜಾಗಿ ಎಂದು ಆರೋಪಿಸಿ ಜೂನ್‌ 17-2021 ರಂದು ವಿಭಾಗೀಯ ಸಂಚಾರಿ ಅಧಿಕಾರಿ ದೇವಾನಂದ ಎ. ಬಿರಾದಾರ ಅವರು ಎಂ.ಎನ್.ಇಲಕಲ್ ಅವರ ವಿರುದ್ದ ಇಲಾಖೆಗೆ (ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಪುರ ವಿಭಾಗಕ್ಕೆ) ದೂರು ಸಲ್ಲಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಆದರೆ, ಎಂ.ಎನ್. ಇಲಕಲ್ ಆ ಸಮಯದಲ್ಲಿ ದೇವಾನಂದ ಎ. ಬಿರಾದಾರ ಅವರ ಅಧೀನ ಸಿಬ್ಬಂದಿ ಆಗಿರುವುದಿಲ್ಲ. ಮೇಲಾಗಿ ವಿಜಯಪುರ ವಿಭಾಗದ ವಾಪ್ತಿಗೆ ಒಳಪಟ್ಟೃ ಇಲ್ಲ. ಕಾನೂನಿನ ಪ್ರಕಾರ ಆ ದೂರನ್ನು ರಾಯಚೂರು ವಿಭಾಗಕ್ಕೆ ಅಥವಾ ಕೇಂದ್ರ ಕಚೇರಿ ಕಲಬುರಗಿಗೆ ಕಳುಹಿಸಬೇಕು.

ಆದರೆ ಆ ದೂರನ್ನು ನಿರ್ಗಮಿತ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಅವರು 2 ತಿಂಗಳ ವರೆಗೆ ತಮ್ಮಲ್ಲೇ ಇಟ್ಟುಕೊಂಡು ಎಂ.ಎನ್. ಇಲಕಲ್ ಅವರು ವಿಜಯಪುರ ವಿಭಾಗಕ್ಕೆ ಮರಳಿ ಬಂದ ನಂತರ, ಅದೂ 22 ದಿನ ಕರ್ತವ್ಯ ನಿರ್ವಹಿಸಿದ ನಂತರ ಆ ದೂರಿನ ಆಧಾರದ ಮೇಲೆ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಅಸಂವಿಧಾನಿಕವಾಗಿ ಮತ್ತು ಕಾನೂನು ಬಾಹಿರವಾಗಿ ಕಿರಿಯ ಸಹಾಯಕ ಎಂ.ಎನ್. ಇಲಕಲ್ ಅವರನ್ನು ಅಮಾನತು ಮಾಡಿ ಆದೇಶ ಹೋರಡಿಸಿದ್ದಾರೆ.

ಅಮಾನತು ಮಾಡಿರುವ ಬಗ್ಗೆ ಎಂ ಎನ್ ಇಲಕಲ್ ಅವರು ಆಕ್ಷೇಪ ವ್ಯಕ್ತಪಡಿಸಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಕಾನೂನಿನ ಪ್ರಕಾರ ಮೆಲ್ಮನವಿ ಮಾಡಿದ್ದಾರೆ. ಆ ಮೆಲ್ಮನವಿ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರು ಅಸಂವಿಧಾನಿಕವಾಗಿ ಮತ್ತು ಕಾನೂನು ಬಾಹಿರವಾಗಿ ಇಲಕಲ್ ಅವರನ್ನು ಅಮಾನತು ಮಾಡಿದ್ದರ ಬಗ್ಗೆ ಏನು ಕ್ರಮ ಜರುಗಿಸುತ್ತಾರೆ ಎಂದು ಕಾದು ನೋಡಬೇಕಿದೆ.

ಇಲ್ಲಿ ನಿರ್ಗಮಿತ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಅವರು ನೌಕರರಿಗೆ ಕಿರುಕುಳ ನೀಡಿದ ಮತ್ತು ಲಂಚಾರೋಪ ಬಂದ ಹಿನ್ನೆಲೆಯಲ್ಲಿ ಅವರನ್ನು ಈಗಾಗಲೇ ವರ್ಗಾವಾಣೆ ಮಾಡಲಾಗಿದೆ. ಆದರೆ, ನೌಕರರಿಗೆ ಈ ರೀತಿ ಕಾನೂನು ಬಾಹಿರವಾಗಿ ಶಿಕ್ಷೆ ನೀಡಿರುವ ಕುರುಬರ ಅವರ ವಿರುದ್ಧ ಎಂಡಿ ಅವರು ಯಾವ ತರಹದ ಶಿಸ್ತು ಕ್ರಮ ಜರುಗಿಸುತ್ತಾರೆ ಎಂಬುದುವುದು ಇನ್ನಷ್ಟೇ ತಿಳಿಯಬೇಕಿದೆ.

ಒಟ್ಟಾರೆ ತಮ್ಮದಲ್ಲದ ತಪ್ಪಿಗೆ ಈರೀತಿ ಶಿಕ್ಷೆಗೆ ಒಳಗಾಗಿರುವ ಇಲಕಲ್ ಅವರ ಅಮಾನತು ಆದೇಶ ಕಾನೂನು ಪ್ರಕಾರ ರದ್ದಾಗಬೇಕು. ಇವರಷ್ಟೇ ಅಲ್ಲ ಈ ರೀತಿ ಸಾರಿಗೆಯ ನಾಲ್ಕೂ ಸಂಸ್ಥೆಗಳಲ್ಲೂ ಸಾವಿರಾರು ನೌಕರರು ಅಧಿಕಾರಿಗಳ ದುರ್ನಡತೆಯಿಂದ ವರ್ಗಾವಣೆ, ಅಮಾನತು ಮತ್ತು ವಜಾದಂತಹ ಶಿಕ್ಷೆ ಅನುಭವಿಸುತ್ತಿದ್ದಾರೆ. ಇದಕ್ಕೆಲ್ಲ ವ್ಯವಸ್ಥಾಪಕ ನಿರ್ದೇಶಕರು ಕಾನೂನಿನಡಿ ಸೂಕ್ತ ಕ್ರಮ ಜರುಗಿಸುಗವ ಮೂಲಕ ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ಸಾಬೀತುಪಡಿಸಬೇಕಿದೆ.

Leave a Reply

error: Content is protected !!
LATEST
KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ: ಈಗಲೇ ಅರ್ಜಿ ಹಾಕಿ ಬಿಬಿಎಂಪಿ: ಅನಧಿಕೃತ ಹೆಚ್ಚುವರಿ ಮಹಡಿಗಳು, ಪಾದಚಾರಿ ಮಾರ್ಗ ಒತ್ತುವರಿ ತೆರವು KSRTC ಸಮಸ್ತ 4ನಿಗಮಗಳ ಅಧಿಕಾರಿಗಳು ನೌಕರರು ಒಗ್ಗಟ್ಟಾಗಿ: ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವತ್ತ ಚಿಂತಿಸಿದರೆ ಅಸಾ...