ತಿ.ನರಸೀಪುರ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನರಿಗೆ ಸ್ಥಳೀಯವಾಗಿ ಎಲ್ಲಾ ವಿಧದ ಪ್ರಮಾಣ ಪತ್ರಗಳ ಸೇವೆಯನ್ನು ಕಲ್ಪಿಸುವ “ನನ್ನ ಪಂಚಾಯಿತಿ ನನ್ನ ಅಧಿಕಾರ ನಮ್ಮಿಂದ ಜನರ ಸೇವೆ” ನಾಗರೀಕ ಸನ್ನದ್ದನ್ನು ಸೋಸಲೆ ಗ್ರಾಮದಲ್ಲಿ ನಡೆದ ವಿಶೇಷ ಗ್ರಾಮಸಭೆಯಲ್ಲಿ ಅಂತಿಮಗೊಳಿಸುವ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.
ತಾಲೂಕಿನ ಸೋಸಲೆ ಗ್ರಾಮದಲ್ಲಿರುವ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ 2021-22ನೇ ಸಾಲಿನ ವಿಶೇಷ ಗ್ರಾಮಸಭೆಯಲ್ಲಿ ಸರ್ಕಾರದ ಸೂಚನೆಯಂತೆ ಗ್ರಾಮ ಪಂಚಾಯಿತಿಗಳಲ್ಲಿ ನಾಗರೀಕ ಸನ್ನದು ಅಂತಿಮಗೊಳಿಸುವ ಬಗ್ಗೆ ತೀರ್ಮಾನಿಸಲಾಯಿತು.
ಸ್ಥಳೀಯವಾಗಿ ಕಂದಾಯ ಇಲಾಖೆಯ ಸೇವೆಯನ್ನು ನೀಡುವ ಬಗ್ಗೆಯೂ ಚುನಾಯಿತ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ಸಹಮತ ವ್ಯಕ್ತವಾಯಿತು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ.ಪುಟ್ಟಸ್ವಾಮಿ ಮಾತನಾಡಿ, ನಾಗರೀಕ ಸನ್ನದು ಅಭಿಯಾನ ಆರಂಭಗೊಂಡರೆ ಹಳ್ಳಿಗಾಡಿನ ಜನರು ಪಂಚಾಯಿತಿಯಲ್ಲಿ ಶೀಘ್ರವಾಗಿ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಬಹುದು ಎಂದರು.
ಇನ್ನು ಮುಂದೆ ತಾಲೂಕು ಕೇಂದ್ರದ ಕಚೇರಿಗಳಿಗೆ ಅಲೆಯುವುದು ತಪ್ಪಲಿದೆ. ನರೇಗಾ ಯೋಜನೆಯನ್ನು ಅಭಿವೃದ್ಧಿಗೆ ಸದ್ಬಳಕೆ ಮಾಡಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಕಾರ್ಡುಗಳನ್ನು ಪಡೆದುಕೊಳ್ಳಬೇಕು ಎಂದು ಸರ್ಕಾರದ ಆದೇಶದ ಮಾಹಿತಿಯನ್ನು ನೀಡಿದರು.
ವಿಶೇಷ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಎಸ್.ಪುಟ್ಟಸ್ವಾಮಿ ಮಾತನಾಡಿದರು. ಸಭೆಯಲ್ಲಿ 2021-22ನೇ ಸಾಲಿನ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಹೆಚ್ಚುವರಿ ಕ್ರಿಯಾ ಯೋಜನೆಗೆ ಕಾಮಗಾರಿಗಳನ್ನು ಆಯ್ಕೆ ಅನುಮೋದನೆ ಪಡೆಯಲಾಯಿತು. ಅಲ್ಲದೆ ವಿವಿಧ ಯೋಜನೆಗಳಡಿ ಕ್ರಿಯಾ ಯೋಜನೆ ತಯಾರಿಸಲು ಕಾಮಗಾರಿಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು.
ಉಪಾಧ್ಯಕ್ಷೆ ಎಸ್.ಹೇಮಾ, ಹಿಂ.ವರ್ಗಗಳ ವಿದ್ಯಾರ್ಥಿ ನಿಲಯದ ಅಧಿಕಾರಿ ವೆಂಕಟಶೆಟ್ಟಿ, ಗ್ರಾ.ಪಂ ಸದಸ್ಯರಾದ ಸಿದ್ದನಹುಂಡಿ ಮಲ್ಲೇಶ, ನಾರಾಯಣ, ಕೆಬ್ಬೇ ಜ್ಞಾನೇಂದ್ರ, ಸುಂದರ, ಹಳೇ ಸೋಸಲೆಯ ಮಹೇಶ, ಮಹೇಶ್ ಕುಮಾರ್, ಮಧುಸೂದನ್, ನಾಗೇಂದ್ರ, ಶೈಲಜಾ, ರೇಖಾಪ್ರಭ, ಭಾಗ್ಯ, ನಾಗರತ್ನ.
ಆಶಾ, ಚಾಂದಿನಿ, ಸುವರ್ಣ, ಮಾಜಿ ಅಧ್ಯಕ್ಷ ನಾಗಣ್ಣ, ಕಂದಾಯಾಧಿಕಾರಿ ಮಹದೇವ ನಾಯಕ, ಗ್ರಾಮ ಲೆಕ್ಕಿಗ ನೂರುಲ್ಲಾ, ಮುಖಂಡರಾದ ಎ.ಶಿವಕುಮಾರ್(ಬಡ್ಡು), ಪರಶಿವ, ಹರೀಶ, ಬಿ.ಎಸ್.ಲೋಕೇಶ್, ಲಿಂಗರಾಜು ಹಾಗೂ ಇನ್ನಿತರರು ಇದ್ದರು.