NEWSನಮ್ಮಜಿಲ್ಲೆ

ಕೊರೊನಾ ಸಂತ್ರಸ್ತರಿಗೆ ಮಿಡಿದ ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್: ದೈವ ನರ್ತಕರಿಗೆ ಆಹಾರ ಕಿಟ್ ವಿತರಣೆ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಉಡುಪಿ: ಕೊರೊನಾ ಮಹಾಮಾರಿ ಶ್ರೀಮಂತ – ಬಡವರೆನ್ನದೆ ಎಲ್ಲರಿಗೂ ಕಾಡಿದೆ. ದುಡಿದು ತಿನ್ನುವ ಕೈಗಳಿಗೆ , ಬಡ ಜನರಿಗೆ ಭಾರೀ ಕಷ್ಟ ನೀಡಿದೆ. ಇದನ್ನು ಮನಗಂಡ ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳು ದೈವ ನರ್ತಕರು, ಸಹಾಯಕರು ಮತ್ತು ಸೇವಕರ ಕುಟುಂಬಕ್ಕೆ ಆಹಾರ ಕಿಟ್ ವಿತರಿಸುವ ಮೂಲಕ ಮಾನವೀಯತೆ ಮರೆದಿದ್ದಾರೆ.

ತುಳುನಾಡಿನ ಪ್ರಮುಖ ಸಂಪ್ರದಾಯವಾದ ಭೂತರಾಧನೆ ಮಾಡುವುದಕ್ಕೆ ತೊಂದರೆಯಾಗಿದ್ದು, ತುಳುನಾಡಿನಲ್ಲಿ ಸದ್ಯ ಕೊರೊನಾ ಹಿನ್ನೆಲೆಯಲ್ಲಿ ಎಲ್ಲಿಯೂ ದೈವಾರಾಧನೆ ನಡೆಯುತ್ತಿಲ್ಲ.

ಈ ಹಿನ್ನೆಲೆಯಲ್ಲಿ ದೈವ ನರ್ತನ ಕಾರ್ಯವನ್ನು ಮಾಡುವ ಹಾಗೂ ದೈವದ ಚಾಕರಿ ಮಾಡುವ ಹಿರಿಯಡ್ಕ ಪರಿಸರದ ಸುಮಾರು 20 ಕುಟುಂಬಗಳಿಗೆ ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ತಲಾ 10 KG ಅಕ್ಕಿ ಹಾಗೂ ಒಂದು ಸಾವಿರ ರೂಪಾಯಿ ಮೌಲ್ಯದ ಅಗತ್ಯ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.

ಕೊರೊನಾ ಮಹಾಮಾರಿಯಿಂದ ನೇಮೋತ್ಸವ ನಡೆಯುವ ಈ ಸಮಯದಲ್ಲಿ ನೇಮೋತ್ಸವವಿಲ್ಲದೆ ಅದನ್ನೇ ನಂಬುತ್ತಿರುವ ಕುಟುಂಬಗಳು ಬಹಳ ಕಷ್ಟದಲ್ಲಿವೆ. ಹಾಗಾಗಿ ಅವರ ಕಷ್ಟದ ಸಮಯದಲ್ಲಿ ಅವರು ನೇಮ ಕಟ್ಟುವ ಮನೆಯವರು ಅವರೊಂದಿಗಿದ್ದು ಅವರ ಕಷ್ಟದಲ್ಲಿ ಭಾಗಿಗಳಾಗಬೇಕೆಂದು ಆಶಿಸಿ ಟ್ರಸ್ಟ್ ನ ಅಧ್ಯಕ್ಷ ಅನಂತ ಇನ್ನಂಜೆ ಆಹಾರ ಕಿಟ್ ಗಳನ್ನು ವಿತರಿಸಿದರು‌.

ಈ ಸಂದರ್ಭದಲ್ಲಿ ಟ್ರಸ್ಟ್ ನ ಕಾರ್ಯದರ್ಶಿಗಳಾದ ಅನಿಲ್ ಆಚಾರ್ಯ ಓಂತಿಬೆಟ್ಟು , ಪುನೀತ್ ಕುಲಾಲ್ ಮಜೂರು , ವಿಕಾಸ್ ದೇವಾಡಿಗ ಮಜೂರು , ಶಿವು ಮಜೂರು ಮತ್ತಿತರರು ಇದ್ದರು.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು