ವಿಜಯಪಥ ಸಮಗ್ರ ಸುದ್ದಿ
ಕಲಬುರಗಿ: ಸುಟ್ಟಗಾಯಗಳಿಂದ ಬಳಲುತ್ತ ಆಸ್ಪತ್ರೆ ಸೇರಿರುವ ತನ್ನ ತಾಯಿಯ ಉಳಿಸಿಕೊಳ್ಳಲು ಹಣದ ಅವಶ್ಯವಿದೆ. ದಯಮಾಡಿ ಸಹಾಯ ಮಾಡಿ ಎಂದು ಬಾಲಕನ್ನೊಬ್ಬ ಆಸಪತ್ರೆ ಮುಂದೆ ಪರದಾಡಿದ ಘಟನೆ ಬಸವೇಶ್ವರ ಆಸ್ಪತ್ರೆಯ ಬಳಿ ನಡೆದಿದೆ.
ಸುಟ್ಟ ಗಾಯಗಳಿಂದ ತಾಯಿ ಧನಲಕ್ಷ್ಮೀ ನರಳಾಡುತ್ತಿದ್ದು, ಮಕ್ಕಳಿಗಾಗಿ ತನ್ನ ಪ್ರಾಣ ಉಳಿಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾಳೆ. ಇನ್ನೊಂದು ಕಡೆ ತನ್ನ ತಾಯಿಯ ಚಿಕಿತ್ಸೆಗೆ ಹಣ ನೀಡಿ ಎಂದು ಬಾಲಕ ಮನವಿ ಮಾಡಿಕೊಳ್ಳುತ್ತಿದ್ದಾನೆ.
ಬೀದರ್ನ ಗುಂಪಾ ನಗರದ ನಿವಾಸಿ ಧನಲಕ್ಷ್ಮೀಗೆ 5 ತಿಂಗಳ ಹಿಂದೆ ಬೆಂಕಿ ಹಚ್ಚಿ ಆಕೆಯ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದ. ಗಾಯಗೊಂಡಿದ್ದ ಧನಲಕ್ಷ್ಮೀ ಬೀದರ್ನ ಬಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದೇಹ ಸುಟ್ಟಿದ್ದರಿಂದ ಮೇ 29ರಂದು ಬಸವೇಶ್ವರ ಆಸ್ಪತ್ರೆಗೆ ಮಹಿಳೆಯನ್ನು ದಾಖಲಿಸಲಾಗಿದೆ. ಆರೋಗ್ಯ ಕರ್ನಾಟಕ ಸ್ಕೀಮ್ನಲ್ಲಿ ಮಹಿಳೆಗೆ ಆಪರೇಶನ್ ಮಾಡಬೇಕಾಗಿತ್ತು. ಆದರೆ ಮಹಿಳೆಗೆ ರಕ್ತ ಕಡಿಮೆಯಿರುವ ಹಿನ್ನೆಲೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡುತ್ತಿಲ್ಲ.
ಈಗ ಆಸ್ಪತ್ರೆಯಲ್ಲಿ 35 ಸಾವಿರ ಬಿಲ್ ಆಗಿದೆ. ಆಪರೇಷನ್ ಆದರೆ ಮಾತ್ರ ಸ್ಕೀಮ್ನಲ್ಲಿ ಹಣ ನೀಡೋದಾಗಿ ಆರೋಗ್ಯ ಕರ್ನಾಟಕ ಸಿಬ್ಬಂದಿ ಹೇಳುತ್ತಿದ್ದಾರೆ. ಈ ನಡುವೆ ಆಸ್ಪತ್ರೆಗೆ ಹಣ ಕಟ್ಟಲು ಸಾಧ್ಯವಾಗದೆ ಬಾಲಕ ಪರದಾಡುತ್ತಿದ್ದಾನೆ. ತನ್ನ ತಾಯಿ ಇಲ್ಲದೇ ಹೋದರೆ ನಾನು ನನ್ನ ಎಂಟು ವರ್ಷದ ಸಹೋದರ ಅನಾಥವಾಗುತ್ತೀವಿ. ದಯವಿಟ್ಟು ಸಹಾಯ ಮಾಡಿ ಅಂತ ಬಾಲಕ ಮನವಿ ಮಾಡಿದ್ದಾನೆ.
ಸಹಾಯ ಮಾಡಲು ಇಚ್ಚಿಸುವವರು ಕರೆ ಮಾಡಿ: 9379379859 (ಚೆನ್ನಬಸು, ಪುತ್ರ).