ಜೇವರ್ಗಿ: ಇತ್ತೀಚೆಗೆ ಸಿಂದಗಿ ತಾಲೂಕಿನ ಕೊಕಟ್ನೂರ ಗ್ರಾಮದ ಸಿದ್ದಮ್ಮ ಪತಿ ಭಿಮ್ಮಣ್ಣ ಎಂಬುವರು ಸಿಡಿಲು ಬಡಿದು ಮೃತಪಟ್ಟಿದ್ದರು. ಹೀಗಾಗಿ ಅವರ ಕುಟುಂಬದವರಿಗೆ ಇಂದು ಪರಿಹಾರ ಚೆಕ್ ವಿತರಿಸಲಾಯಿತು.
ಭಿಮ್ಮಣ್ಣ ಜೇವರ್ಗಿ ತಾಲೂಕಿನ ಮೈಯೂರ ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದ ವೇಳೆ ಸಿಡಿಲು ಬಡಿದಿದ್ದರಿಂದ ಸ್ಥಳದಲ್ಲೇ ಅಸುನೀಗಿದ್ದರು.
ಈ ಹಿನ್ನೆಲೆಯಲ್ಲಿ ಜೇವರ್ಗಿ ಶಾಸಕ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ.ಅಜಯ್ ಸಿಂಗ್ ಅವರು ಕುಟುಂಬದವರಿಗೆ ಸರ್ಕಾರ ವತಿಯಿಂದ 5 ಲಕ್ಷ ರೂ. ಚೆಕ್ ನ್ನು ತಹಸೀಲ್ದಾರ್ ವಿನಯ್ ಕುಮಾರ್ ಪಾಟೀಲ್ ಜತೆ ವಿತರಿಸಿದರು.