ಮಂಗಳೂರು: ಕೋವಿಡ್ ಕಾರಣದಿಂದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಾಕಷ್ಟು ನಷ್ಟ ಅನುಭವಿಸಿದ ನಂತರ. ಈಗ ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಆದರೂ ಸಹಿತ ಮಂಗಳೂರು ಕೆಎಸ್‌ಆರ್‌ಟಿಸಿ ವಿಭಾಗ ಚೇತರಿಕೆ ಕಾಣುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.
ಅದಕ್ಕೆ ಪ್ರಮುಖ ಕಾರಣ ಮಂಗಳೂರು ಕೆಎಸ್‌ಆರ್‌ಟಿಸಿ ವಿಭಾಗದ ನಿಯಂತ್ರಣಾಧಿಕಾರಿಯ ಸರ್ವಾಧಿಕಾರಿ ಧೋರಣೆ ಎಂಬ ಆರೋಪ ಸಾರಿಗೆ ಮೊಗಶಾಲೆಯಲ್ಲೇ ಕೇಳಿ ಬರುತ್ತಿದೆ.
ಮಂಗಳೂರು – ಬೆಂಗಳೂರು ಮಾರ್ಗವಾಗಿ ಈ ಹಿಂದೆ ದಿನವೊಂದಕ್ಕೆ 65 -75 ಬಸ್‌ಗಳು ಸಂಚಾರ ನಡೆಸುತ್ತಿವು. ಈಗ ಅಧಿಕಾರಿಯು ನೌಕರರ ಪೀಡಕನಾಗಿದ್ದು, ಘಟಕಗಳಲ್ಲಿ ಸರಿಯಾಗಿ ನೌಕರರಿಗೆ ಡ್ಯೂಟಿ ಕೊಡದಂತೆ ಪರೋಕ್ಷವಾಗಿ ಡಿಎಂಗಳ ಮೇಲೆ ಒತ್ತಡ ಹೇರುತ್ತಿರುವುದರಿಂದ ಸದ್ಯ ಈಗ ಅವುಗಳ ಸಂಖ್ಯೆ 50 ರಿಂದ 55ಕ್ಕೆ ಕುಸಿದಿದೆ ಎಂಬ ಆರೋಪ ಕೇಳಿ ಬಂದಿದೆ.
ಕೊರೊನಾ ಲಾಕ್‌ಡೌನ್ ತೆರವಾಗಿ ಎಲ್ಲ ಕೆಲಸಗಳು ಸರಾಗವಾಗಿ ನಡೆಯುತ್ತಿರುವ ಈಗಲೂ ಮಂಗಳೂರು ವಿಭಾಗ ಕೆಎಸ್‌ಆರ್‌ಟಿಸಿ ನಷ್ಟ ಅನುಭವಿಸುತ್ತಿದೆ ಎಂದರೆ ವಿಭಾಗ ನಿಯಂತ್ರಣಾಧಿಕಾರಿಯ ದರ್ಪ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ತೋರಿಸುತ್ತದೆ.
ಈತನ ಕಿರುಕುಳಿದಿಂದ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಪೊಲೀಸ್ ಠಾಣೆಗಳಲ್ಲೂ ಪ್ರಕರಣ ದಾಖಲಾಗಿದೆ. ಜತೆಗೆ ಈತನ ಕಿರುಕುಳದಿಂದ ಮಾನಸಿಕ ಒತ್ತಡಕ್ಕೆ ಸಿಲುಕಿರುವ ಹಲವು ನೌಕರರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಇಷ್ಟೆಲ್ಲ ನಡೆಯುತ್ತಿದ್ದರೂ ಈತನನ್ನು ಮಾತ್ರ ಅದೇ ವಿಭಾಗದಲ್ಲಿ ಮುಂದುವರಿಸುತ್ತಿರುವುದು ಸಂಸ್ಥೆಗೆ ಒಂದು ಕಪ್ಪುಚುಕ್ಕೆಯಾಗಿ ಪರಿಣಮಿಸುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ನಾವು ಒಂದು ದಿನಕ್ಕೆ ಸರಾಸರಿ 70 ಲಕ್ಷ ರೂ.ಗಳವರೆಗೆ ಆದಾಯವನ್ನು ಈ ಹಿಂದೆ ಗಳಿಸುತ್ತಿದ್ದೆವು. ಈಗ ಅದು 50 ಲಕ್ಷ ರೂ.ಗೆ ಬಂದು ನಿಂತಿದೆ. ಮಂಗಳೂರು -ಧರ್ಮಸ್ಥಳದ ಮಾರ್ಗ ಚೆನ್ನಾ ಗಿ ಓಡುತ್ತಿದೆ ಉಳಿದಂತೆ ಮಂದಾಗತಿಯಲ್ಲಿ ಆದಾಯ ಬರುತ್ತಿದೆ ಎಂದು ಡಿಸಿ ಅರುಣ್ ಮಾಧ್ಯಮ ಒಂದಕ್ಕೆ ತಿಳಿಸಿದ್ದಾರೆ.