ವಿಜಯಪಥ ಸಮಗ್ರ ಸುದ್ದಿ
ಮಂಡ್ಯ: ನೀರು ಮಿಶ್ರಿತ ಹಾಲು ಸರಬರಾಜು ಆರೋಪ ಹಿನ್ನೆಲೆ ಮನ್‌ಮುಲ್ ಎಂಡಿ ವರ್ಗಾವಣೆಯೊಂದಿಗೆ ಏಳು ಮಂದಿ ಅಧಿಕಾರಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.
ಮನ್‍ಮುಲ್‍ನ ಮದ್ದೂರಿನ ಉಪಕಚೇರಿ ವ್ಯವಸ್ಥಾಪಕ ಮರಿರಾಚಯ್ಯ, ಭರತ್‍ರಾಜ್, ರಾಮಕೃಷ್ಣಯ್ಯ, ವಿಸ್ತಾರಣಾಧಿಕಾರಿಗಳಾದ ಮಧುಕುಮಾರ್, ರಮೇಶ್, ಟ್ರಾನ್ಸ್ ಪೋರ್ಟ್ ವಿಭಾಗದ ಡಾ.ವೆಂಕಟೇಶ್ ಅಮಾನತುಗೊಂಡ ಅಧಿಕಾರಿಗಳು.
ಮನ್‌ಮುಲ್‌ಗೆ ನೀರು ಮಿಶ್ರಿತ ಹಾಲು ಸರಬರಾಜಾಗುತ್ತಿದ್ದ ಬಗ್ಗೆ ಮನ್‍ಮುಲ್‍ನ ಅಧ್ಯಕ್ಷರು ಹಾಗೂ ನಿರ್ದೇಶಕರು ಹಲವು ದಿನಗಳ ತನಿಖೆ ಬಳಿಕ ಈ ಜಾಲವನ್ನು ಭೇದಿಸಿ ಪೊಲೀಸರಿಗೂ ದೂರು ನೀಡಿದ್ದರು. ಈ ನಡುವೆ ಕೆಎಂಎಫ್ ಅಧಿಕಾರಿಗಳು ಸಹ ತನಿಖೆ ನಡೆಸುತ್ತಿದ್ದರು.
ಈ ಹಗರಣಕ್ಕೆ ಅಧಿಕಾರಿಗಳೇ ಕಾರಣ ಎಂದು ಕೆಎಂಎಫ್ ವರದಿ ನೀಡಿ, ಏಳು ಮಂದಿಯನ್ನು ಅಮಾನತುಗೊಳಿಸುವಂತೆ ಆದೇಶ ಹೊರಡಿಸಿತ್ತು. ಮನ್‍ಮುಲ್‍ನ ಎಂಡಿಯನ್ನು ವರ್ಗಾವಣೆ ಮಾಡಿ ಮೈಸೂರಿನ ಮೈಮುಲ್‍ನ ಎಂಡಿ ಆಗಿದ್ದ ಅಶೋಕ್ ಅವರನ್ನು ನೇಮಕ ಮಾಡಲಾಗಿದೆ.