ಅಥಣಿ: ಪಟ್ಟಣದಲ್ಲಿ 12.5 ಕೋಟಿ ರೂ.ಗಳ ಅಂದಾಜು ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಉಪಮುಖ್ಯಮಂತ್ರಿ, ಸಾರಿಗೆ ಸಚಿವರೂ ಆದ ಲಕ್ಷ್ಮಣ ಸವದಿ ಅವರು ಸೋವಾರ ಶಂಕುಸ್ಥಾಪನೆ ನೆರವೇರಿಸಿದರು.
ವಾಯುವ್ಯ ರಸ್ತೆ ಸಾರಿಗೆ ನಿಗಮದಿಂದ ಐದು ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಅಥಣಿಯ ಸರ್ಕಾರಿ ಬಸ್ ಘಟಕದ ಮರು ನಿರ್ಮಾಣ ಹಾಗೂ ಸಾರಿಗೆ ಇಲಾಖೆಯಿಂದ ರೂ. 7.5 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಲಘು ಚಾಲನಾ ಪಥ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಅಥಣಿ ನಾಗರಿಕರಿಗೆ ಉತ್ತಮ ಸಾರಿಗೆ ಸೌಕರ್ಯ ಕಲ್ಪಿಸಿಕೊಡುವುದರ ಜತೆಗೆ ಚಾಲನಾ ಪಥದ ನಿರ್ಮಾಣದಿಂದ ಉತ್ತಮ ಹಾಗೂ ಅಪಘಾತ ರಹಿತ ಗುಣಮಟ್ಟದ ಚಾಲಕರನ್ನು ನಿರ್ಮಾಣ ಮಾಡಲು ಈ ಚಾಲನಾ ಪಥ ಬಹಳ ಸಹಕಾರಿಯಾಗಲಿದೆ ಎಂದು ಲಕ್ಷ್ಮಣ ಸವದಿ ತಿಳಿಸಿದರು.