ಶ್ರೀರಂಗಪಟ್ಟಣ: ಕುರಿಗಾಹಿ ಬಾಲಕನನ್ನು ಮರಕ್ಕೆ ಕಟ್ಟಿ ಹಾಕಿ ಜಮೀನಿನ ಮಾಲೀಕನೊಬ್ಬ ದೌರ್ಜನ್ಯ ಎಸಗಿರುವ ಘಟನೆ ತಾಲೂಕಿನ ಕೆಆರ್ಎಸ್ ಜಮೀನೊಂದರ ಬಳಿ ನಡೆದಿದೆ.
ಜಮೀನಿನ ಮಾಲೀಕ ಹರ್ಷ ಎಂಬಾತ ಬಾಲಕನ ಮೇಲೆ ದೌರ್ಜನ್ಯ ಎಸಗಿದ್ದಾನೆ. ಬಾಲಕ ಕುರಿಗಳನ್ನು ಮೇಯಿಸುತ್ತಿದ್ದ. ತನ್ನ ಜಮೀನಿಗೆ ಕುರಿಗಳನ್ನು ಬಿಟ್ಟು ಹಾಳುಮಾಡುತ್ತಿದ್ದೀಯ ಎಂದು ಮಾಲೀಕ ಆ ಬಾಲಕನನ್ನು ಮರಕ್ಕೆ ಕಟ್ಟಿ ಹಾಕಿ ದಂಡಿಸಿದ್ದಾನೆ.
ಬಾಲಕನನ್ನು ಮರಕ್ಕೆ ಕಟ್ಟಿ ಹಾಕಿರುವುದನ್ನು ಕಂಡ ಸ್ಥಳೀಯರು ನೆರವಿಗೆ ಬಂದಿದ್ದಾರೆ. ಆದರೆ ಅವರ ಮಾತಿಗೆ ಬಾಲಕನನ್ನು ಬಿಡಲು ಹರ್ಷ ಒಪ್ಪದಿದ್ದರಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಬಾಲಕನನ್ನು ರಕ್ಷಿಸಿ, ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.