Vijayapatha – ವಿಜಯಪಥ
Saturday, November 2, 2024
NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರಿಗೆ ಆರನೇ ವೇತನ ಜಾರಿಗೆ ಸಮಿತಿ ವರದಿ ಇನ್ನೂ ಅಂತಿಮವಾಗಿಲ್ಲ ಎಂದ ಸಚಿವರು : ರಾಮಕೃಷ್ಣ ಪೂಂಜಾ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಸಾರಿಗೆ ನೌಕರರಿಗೆ ಆರನೇ ವೇತನಕ್ಕೆ ಸರಿಸಮಾನವಾದ ವೇತನ ನೀಡುವುದಕ್ಕೆ ಸಂಬಂಧಿಸಿದಂತೆ ರಚಿಸಿರುವ ಸಮಿತಿಯ ವರದಿ ಇನ್ನೂ ಅಂತಿಮವಾಗಿಲ್ಲ. ಆ ವರದಿ ಬಂದ ಮೇಲೆ ಮಾತುಕತೆಗೆ ಅಹ್ವಾನಿಸಲಾಗುವುದೆಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿರುವುದಾಗಿ ಕರ್ನಾಟಕ ರಸ್ತೆ ಸಾರಿಗೆ ಸಾಮಜ್ದೂರ್ ಒಕ್ಕೂಟದ ಅಧ್ಯಕ್ಷ ರಾಮಕೃಷ್ಣ ಪೂಂಜಾ ತಿಳಿಸಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಈ ಸಂಬಂಧ ಪತ್ರಿಕೆ ಹೇಳಿಕೆ ನೀಡಿರುವ ಅವರು, ಮಾ.18ರಂದು ಒಕ್ಕೂಟ ಪ್ರಾರಂಭಿಸಿದ್ದ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಉಪಮುಖ್ಯ ಮಂತ್ರಿ ಹಾಗೂ ಸಾರಿಗೆ ಸಚಿವರ ಆದೇಶದ ಮೇರೆಗೆ ಹಿರಿಯ ಅಧಿಕಾರಿಗಳು ಬಂದು ನಮ್ಮ ಬೇಡಿಕೆ ಪತ್ರವನ್ನು ಸ್ಬೀಕರಿಸಿದ್ದರು. ಈ ವೇಳೆ ಸಚಿವರು ದೂರವಾಣಿ ಮುಖಾಂತರ ಮಾತನಾಡಿ ಧರಣಿ ಸತ್ಯಾಗ್ರಹವನ್ನು ಕೈಬಿಟ್ಟು ಮಾತುಕತೆಗೆ ಆಹ್ವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಧರಣಿ ಸತ್ಯಾಗ್ರಹವನ್ನು ಸ್ಥಗಿತಗೊಳಿಸಲಾಯಿತು ಎಂದು ಹೇಳಿದ್ದಾರೆ.

ಇನ್ನು ಅದರಂತೆ ಮಾ. 19 ರಂದು ಸಂಜೆ 5.30ರಲ್ಲಿ ಸಂಸ್ಥೆಯ ಅಧಿಕಾರಿಗಳು ಮತ್ತು ಒಕ್ಕೂಟದ ಪದಾಧಿಕಾರಿಗಳ ದ್ವಿಪಕ್ಷೀಯ ಸಭೆ ನಡೆದಿದ್ದು ಅದರ ಅಧ್ಯಕ್ಷತೆಯನ್ನು ಸಚಿವ ಲಕ್ಷ್ಮಣ ಸವದಿ ಅವರು ವಹಿಸಿದ್ದರು.

ಸಭೆಯಲ್ಲಿ ನಮ್ಮ ಪ್ರಮುಖ ಬೇಡಿಕೆಯಾದ 6ನೇ ವೇತನ ಆಯೋಗದ ಸರಿಸಮಾನವಾದ ವೇತನವನ್ನು ಜಾರಿ ಮಾಡುವುದಾಗಿ ನಮ್ಮ ಸಂಘಟನೆಗೆ ಭರವಸೆ ನೀಡದ್ದರೂ ಸಹ, ಇನ್ನೂ ಮಾಡದೆ ಇರುವುದನ್ನು ಖಂಡಿಸಿ, ಬೆಲೆ ಏರಿಕೆ‌ಯಿಂದ, ದೈನಂದಿನ‌ ನಿರ್ವಹಣೆಗೆ ಕಾರ್ಮಿಕರು ಬಹಳ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ವರದಿಯನ್ನು ಶೀಘ್ರವಾಗಿ ಅಂತಿಮಗೊಳಿಸಿಲು ಕೋರಿ, ಸಮಿತಿಯ ವರದಿ ನೀಡುವವರೆಗೆ ಶೇ. 25ರಷ್ಟು ಮಧ್ಯಾಂತರ ಪರಿಹಾರವಾಗಿ ಸಾರಿಗೆ ನೌಕರರಿಗೆ ನೀಡಬೇಕೆಂದು ಲಿಖಿತ ಮನವಿ ಸಲ್ಲಿಸಿರುತ್ತೇವೆ. ಇದರ ಜತೆಗೆ ವರದಿ ಅಂತಿಮ ಗೊಂಡ ನಂತರ ಪೂರ್ಣಪ್ರಮಾಣದಲ್ಲಿ ಜಾರಿಗೊಳಿಸಲು ಕೋರಿದ್ದೇವೆ. ಅದಕ್ಕೆ ಸಚಿವರು ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ.

ಅಂತರ ನಿಗಮ ವರ್ಗಾವಣೆ
ಮಜ್ದೂರ್ ಒಕ್ಕೂಟವೂ ಪಾರದರ್ಶಕವಾದ ಆನ್ಲೈನ್ ಅಪ್ಲಿಕೇಶನ್ ನಲ್ಲಿ ಅರ್ಜಿಗಳನ್ನು ಸ್ವೀಕರಿಸುತ್ತಿರುವ ಸಮಯದಲ್ಲಿ ವಿಭಾಗಗಳ ಆಯ್ಕೆಯನ್ನು ಸಹ ಕಾರ್ಮಿಕರಿಗೆ ಒದಗಿಸಬೇಕು. ಪತಿ-ಪತ್ನಿ (ನಿಗಮದ ನೌಕರರಿಗೆ ಮಾತ್ರ) ಕಲ್ಪಿಸಿದ್ದು ಅದನ್ನು ಸರ್ಕಾರ ಇತರೇ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದನ್ನು ಪರಿಗಣಿಸಿ, ಪರಸ್ಪರ ವರ್ಗಾವಣೆಗೆ ಹೆಚ್ಚಿನ‌ ಆದ್ಯತೆ ನೀಡಲು ಹಾಗೂ ಶೇಕಡಾವಾರು ವರ್ಗಾವಣೆಯನ್ನು ಹೆಚ್ಚಳ ಮಾಡಲು ಮಂಡಿಸಲಾಗಿಯಿತು.

ಅದಕ್ಕೆ ಸಚಿವರು ಪ್ರತಿಕ್ರಿಯಿಸಿ ಕೂಡಲೇ ಈ ಬದಲಾವಣೆಗಳನ್ನು ಜಾರಿಗೆ ತರಲು ಆದೇಶಿಸಿ, 371J ಕಲ್ಯಾಣ ಕರ್ನಾಟಕದ ನೇಮಕಾತಿ ಬಗ್ಗೆ ಇರುವ ಅದೇಶದ ಉಲ್ಲಂಘನೆಯಾಗದಂತೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಏಕರೂಪ ಶಿಸ್ತು ಕ್ರಮದ ಸುತ್ತೋಲೆ
ಮಜ್ದೂರ್ ಒಕ್ಕೂಟವು ನಾಲ್ಕು ನಿಗಮಗಳಲ್ಲಿ ಎರಡು ಹಂತದ ಏಕರೂಪದ ಆಡಳಿತ‌ ವ್ಯವಸ್ಥೆಯನ್ನು ಜಾರಿಗೆ ತಂದಲ್ಲಿ ಸಂಸ್ಥೆಯು ಅರ್ಥಿಕವಾಗಿ ಸದೃಢವಾಗುವುದಲ್ಲದೆ ಕಾರ್ಮಿಕರಿಗೆ ಬಹುತೇಕ 80% ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬ ಮಾಹಿತಿಯನ್ನು ನೀಡಿ, ನೆರೆ ರಾಜ್ಯವಾದ ಅಂಧ್ರ ಪ್ರದೇಶದಲ್ಲಿ ಏಕರೂಪ ಶಿಸ್ತು ಕ್ರಮದ ಸುತ್ತೋಲೆಯನ್ನು ಒಕ್ಕೂಟವು ಸಲ್ಲಿಸಿ ಈ ರೀತಿಯಾದ C&D (ನಡತೆ & ಶಿಸ್ತು) ನಿಯಮಗಳನ್ನು ಜಾರಿಗೊಳಿಸಲು ಲಿಖಿತವಾಗಿ ಸಲ್ಲಿಸಲಾಯಿತು.

ಅದರಲ್ಲಿದ್ದ ಪ್ರಮುಖ ಅಂಶಗಳನ್ನು ಗಮನಿಸಿದ ಸಚಿವರು ಕೂಡಲೇ ಉನ್ನತ ಮಟ್ಟದ ಸಭೆಯನ್ನು ಕರೆದು ಇದರ ಜಾರಿಗೆ‌ ತರಲು ಕ್ರಮಕ್ಕೆಗೊಳ್ಳುವಂತೆ ತಿಳಿಸಿದರು.

ಸಂಪೂರ್ಣ ಉಚಿತ ಚಿಕಿತ್ಸಾ ವಿಧಾನಕ್ಕೆ ಟ್ರಸ್ಟ್ ರಚಿಸಿ
ಒಕ್ಕೂಟವು Cash less ಯೋಜನೆಗೆ ಸಂಬಂಧಿಸಿದ ಅತಿದೊಡ್ಡ ಪ್ರಮಾಣದಲ್ಲಿ ಹಣ ಪಾವತಿ ಮಾಡಬೇಕಾಗಿರುವುದರಿಂದ ಟ್ರಸ್ಟ್ ರಚಿಸಿ ಕಾರ್ಮಿಕರು 25% ಮತ್ತು ಸಂಸ್ಥೆ 75% ಜೋಡಿಸಿ CGHS ದರದಲ್ಲಿ ನೀಡಿದ ನಂತರ ಬರುವ ವ್ಯತ್ಯಾಸ ಹಣವನ್ನು ಟ್ರಸ್ಟ್ ಮುಖಾಂತರ ನೇರವಾಗಿ ಆಸ್ಪತ್ರೆಗೆ ನೀಡಿ‌ ಸಂಪೂರ್ಣ ಉಚಿತ ಮಾಡಲು ಎಲ್ಲಾ ಅಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ಕೋರಲಾಯಿತು ಎಂದು ಒಕ್ಕೂಟದ ಕಾರ್ಯದರ್ಶಿ ಮಂಜುನಾಥ ಪ್ರಸನ್ನ ತಿಳಿಸಿದ್ದಾರೆ.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ